ಸುಳ್ಯ ಎಂ.ಜಿ.ಎಂ. ಶಾಲಾ ಕ್ರೀಡೋತ್ಸವ

0

ಸುಳ್ಯದ ಕೊಡಿಯಾಲಬೈಲು ಮಹಾತ್ಮಾ ಗಾಂಧಿ ಮಲ್ನಾಡ್ ವಿದ್ಯಾಸಂಸ್ಥೆಯಲ್ಲಿ ಶಾಲಾ ವಾರ್ಷಿಕ ಕ್ರೀಡಾಕೂಟವು ನ.28ರಂದು‌ ನಡೆಯಿತು. ಆರಂಭದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಗೌಡ ಯುವ ಸೇವಾ ಸಂಘದ ಸ್ಥಾಪಕಧ್ಯಕ್ಷರಾದ ನಿತ್ಯಾನಂದ ಮುಂಡೋಡಿಯವರು ಕ್ರೀಡಾಧ್ವಜರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು.

ಗೌಡರ ಯುವ ಸೇವಾ ಸಂಘದ ಅಧ್ಯಕ್ಷರಾದ ಪಿ. ಎಸ್. ಗಂಗಾಧರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಕೂಟವನ್ನು ಬೆಳ್ತಂಗಡಿಯ ಕಿರಣ್ ಚಂದ್ರ. ಡಿ ಪುಷ್ಪಗಿರಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶರ್ಮಿಳಾರವರು ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞೆ ಬೋಧಿಸಿದರು.

ಕರ್ನಾಟಕ ಸರಕಾರ ಸಹಕಾರ ಇಲಾಖೆ ಕೊಡ ಮಾಡುವ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಪಿ. ಸಿ.ಜಯರಾಮ, ಕ್ಯಾಂಪ್ಕೋ ಸಂಸ್ಥೆಯ ನೂತನ ನಿರ್ದೇಶಕರಾದ ಎ. ವಿ. ತೀರ್ಥರಾಮ, ಹಾಗೂ ಕಿರಣ್ ಚಂದ್ರ ಪುಷ್ಪಗಿರಿಯವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಗೌಡ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ನಿವೃತ್ತ ಪ್ರಾಂಶುಪಾಲರಾದ ಲಯನ್ ರಂಗಯ್ಯ ಶೆಟ್ಟಿಗಾರ್, ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಕೆ. ಸಿ. ಸದಾನಂದ, ಗೌಡ ಯುವ ಸೇವಾ ಸಂಘದ ಪೂರ್ವಧ್ಯಕ್ಷರುಗಳಾದ ದಿನೇಶ್ ಮಡಪ್ಪಾಡಿ, ಮೋಹನ್ ರಾಂ ಸುಳ್ಳಿ, ಶಾಲಾ ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರಾದ ಹರಿಪ್ರಸಾದ್ ಪಾನತ್ತಿಲ, ಉಪಾಧ್ಯಕ್ಷರಾದ ಶ್ರೀಮತಿ ಶ್ವೇತಾ ಅಮೈ ಉಪಸ್ಥಿತರಿದ್ದರು.
ಸಂಸ್ಥೆಯ ಸಂಚಾಲಕರಾದ ದೊಡ್ಡಣ್ಣ ಬರೆಮೇಲುರವರು ಸ್ವಾಗತಿಸಿ, ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮೀ ಧನ್ಯವಾದ ಸಮರ್ಪಿಸಿದರು.ಶಿಕ್ಷಕಿ ಶ್ರೀಮತಿ ಭವ್ಯ ಕಾರ್ಯಕ್ರಮ ನಿರೂಪಿಸಿದರು.

ನಂತರ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಸಂಜೆ ಸಂಸ್ಥೆಯ ಸಂಚಾಲಕರಾದ ದೊಡ್ಡಣ್ಣ ಬರಮೇಲುರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ನವೆಂಬರ್ 30ರಂದು ನಿವೃತ್ತಿ ಹೊಂದಲಿರುವ ಜೇನು ಸಾಕಾಣಿಕ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತಿಮ್ಮಯ್ಯ ಪಿಂಡಿಮನೆ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪಿ. ಎಸ್. ಗಂಗಾಧರ್, ದಿನೇಶ್ ಮಡಪ್ಪಾಡಿ, ಜನಾರ್ಧನ ಕೊಳೆಂಜಿಂರೋಡಿ, ಕುಸುಮಾವತಿ ಜನಾರ್ಧನ ಕೊಳೆಂಜಿರೋಡಿ, ಚಿರಂತನ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಹರಿಪ್ರಸಾದ್ ಪಾನತ್ತಿಲ, ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮೀ ಉಪಸ್ಥಿತರಿದ್ದರು. ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಚಿತ್ರಲೇಖರವರು ಸ್ವಾಗತಿಸಿ, ಶಿಕ್ಷಕಿ ಶ್ರುತಿ ವಂದಿಸಿದರು. ಶಿಕ್ಷಕಿ ಶ್ರೀಮತಿ ವಿದ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು.