ಅಡ್ತಲೆಯ ಸ್ಪಂದನಾ ಗೆಳೆಯ ಬಳಗ (ರಿ )ಮತ್ತು ಚಂದನಾ ಯುವತಿ ಮಂಡಲದ ಸಹಯೋಗ
















ಅರಂತೋಡು ಗ್ರಾಮ ಪಂಚಾಯತ್ ನ ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ 2018ನೇ ಡಿಸಂಬರ್ ತಿಂಗಳಿಂದ ಆರಂಭ ಕೊಂಡು ನಿರಂತರವಾಗಿ ನಡೆದು ಕೊಂಡು ಬರುತ್ತಿದ್ದು ಈ ತಿಂಗಳ ಕಾರ್ಯಕ್ರಮವು, ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ 2025ರ ಪ್ರಯುಕ್ತ ಸ್ಪಂದನಾ ಗೆಳೆಯರ ಬಳಗ (ರಿ) ಅಡ್ತಲೆ ಮತ್ತು ಚಂದನಾ ಯುವತಿ ಮಂಡಲ (ರಿ) ಅಡ್ತಲೆ ಇವರ ಸಹಯೋಗದಲ್ಲಿ ದಿನಾಂಕ ನ.30ರಂದು ನಡೆಯಿತು. ಈ ಕಾರ್ಯಕ್ರಮ ದಲ್ಲಿ ಎರಡು ಸಂಘಗಳ ಪದಾಧಿಕಾರಿಗಳು, ಪಂಚಾಯತ್ ಆಡಳಿತ ಸಮಿತಿ ಸದಸ್ಯರು, ಪಂಚಾಯತ್ ಮತ್ತು ಸ್ವಚ್ಛತಾ ಘಟಕದ ಸಿಬ್ಬಂದಿಗಳು, ಮತ್ತು ಆರಂತೋಡಿನ ಸ್ವಚ್ಛತಾ ಕಾರ್ಯಕ್ರಮದಲ್ಲಿ ನಿರಂತರ ಬೆಂಬಲ ನೀಡುವ ಸ್ವಚ್ಛತಾ ಸೇನಾನಿಗಳು ಭಾಗವಹಿಸಿದ್ದರು.










