ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ವ್ಯವಸ್ಥಾಪನಾ ನಿರ್ದೇಶಕ ತಿಮ್ಮಯ್ಯ ಪಿಂಡಿಮನೆ ನಿವೃತ್ತಿ – ಸನ್ಮಾನ

0

ಪುತ್ತೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ವ್ಯವಸ್ಥಾಪನಾ ನಿರ್ದೇಶಕರಾದ ತಿಮ್ಮಯ್ಯ ಪಿಂಡಿಮನೆಯವರು ನ.30 ರಂದು ನಿವೃತ್ತಿಗೊಂಡಿದ್ದು ಅವರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವು ಸಂಘದ ಪ್ರಧಾನ ಕಚೇರಿಯಲ್ಲಿ ನಡೆಯಿತು. ಜೇನು ಸೊಸೈಟಿಯ ಅಧ್ಯಕ್ಷರಾದ ‘ಸಹಕಾರಿ ರತ್ನ’ ಚಂದ್ರ ಕೋಲ್ಚಾರ್ ಅವರು ಬೀಳ್ಕೊಡುಗೆ ನೆರವೇರಿಸಿದರು.


ತಿಮ್ಮಯ್ಯ ಪಿಂಡಿಮನೆ ಮತ್ತು ಶ್ರೀಮತಿ ಚಂದ್ರಿಕಾ ದಂಪತಿಯನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿ ನಿವೃತ್ತಿ ಜೀವನಕ್ಕೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರಾಜಾರಾಮ ಶೆಟ್ಟಿ, ನಿರ್ದೇಶಕರುಗಳಾದ ಶ್ಯಾಮ ಭಟ್, ಜನಾರ್ಧನ ಚೂಂತಾರು, ಡಿ. ತನಿಯಪ್ಪ ಗೌಡ,ಸುಂದರ ಗೌಡ,ಹರೀಶ್ ಕೋಡ್ಲ, ಪಾಂಡುರಂಗ ಹೆಗ್ಡೆ, ಪುರುಷೋತ್ತಮ ಭಟ್,ಶ್ರೀಷ ಕೊಡವೂರು,ಶ್ರೀಮತಿ ಇಂದಿರಾ ಕೆ,ಶಿವಾನಂದ, ಮನಮೋಹನ ಎ,ಪುಟ್ಟಣ್ಣ ಗೌಡ, ಶಂಕರ್ ಪೆರಾಜೆ, ಗೋವಿಂದ ಭಟ್, ಶ್ರೀಮತಿ ಸರಸ್ವತಿ ವೈ.ಪಿ, ಶ್ರೀಮತಿ ಸುಶೀಲ ಹಾಗೂ ಜೇನು ಸೊಸೈಟಿ ಸಿಬ್ಬಂದಿಗಳು,ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.