ಅಡ್ಕಾರು ಅಯ್ಯಪ್ಪ ಮಂದಿರದ ವಾರ್ಷಿಕೋತ್ಸವ : ಆಮಂತ್ರಣ ಬಿಡುಗಡೆ

0

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ ಅಯ್ಯಪ್ಪ ಮಂದಿರದ ೧೯ನೇ ವಾರ್ಷಿಕೋತ್ಸವವು ಡಿ.೧೫ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ನ.೩೦ರಂದು ನಡೆಯಿತು.

ಬೆಳಗ್ಗೆ ಅಯ್ಯಪ್ಪ ಮಂದಿರ ಹಾಗೂ ಅಡ್ಕಾರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆ ಇಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಯ್ಯಪ್ಪ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಜಯಪ್ರಕಾಶ್ ಅಡ್ಕಾರು, ಅಧ್ಯಕ್ಷ ಚಂದ್ರಶೇಖರ (ಪುಟ್ಟು) ಗುರುಸ್ವಾಮಿ, ಜತೆ ಕಾರ್ಯದರ್ಶಿ ಎ.ಆರ್. ಬಾಬು, ಕೋಶಾಧಿಕಾರಿ ಮನು ಎನ್., ಅಡ್ಕಾರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿಪ್ರಕಾಶ ಅಡ್ಕಾರು, ದೇವಸ್ಥಾನದ ಅರ್ಚಕರಾದ ಶ್ರೀವರ, ಅಶೋಕ ಅಡ್ಕಾರು, ರವೀಂದ್ರ ಪದವು, ರಜತ್ ಅಡ್ಕಾರು, ನವೀನ ಕುಮಾರ ದುಗಲಡ್ಕ, ಹರ್ಷಿತ್ ಪೇರಾಲು, ಸಂದೀಪ ಪದವು, ಪುಷ್ಪಾಕರ ಜಾಲ್ಸೂರು, ಜಗನ್ನಾಥ ಪದವು, ದಿನೇಶ ಪದವು ಮೊದಲಾದವರಿದ್ದರು.