ಕೊಲ್ಚಾರು ನವಜ್ಯೋತಿ ಯುವಕ ಮಂಡಲ ವತಿಯಿಂದ ಕೊಲ್ಚಾರು ಬಸ್ಸು ತಂಗುದಾಣದ ಸುತ್ತಮುತ್ತ ಸ್ವಚ್ಛತೆ

0

ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಕೊಲ್ಚಾರು ನವಜ್ಯೋತಿ ಯುವಕ ಮಂಡಲ ವತಿಯಿಂದ, ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ ಇದರ ಪಂಚ ಸಪ್ತತಿ ಕಾರ್ಯಕ್ರಮದ ಯೋಜನೆಯಂತೆ ಕೊಲ್ಚಾರು ಬಸ್ಸು ತಂಗುದಾಣದ ಸುತ್ತಮುತ್ತ ಇದ್ದ ಕಾಡನ್ನು ಹೆರೆದು ಸ್ವಚ್ಚತೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿ ಇದರ ಉಪಾಧ್ಯಕ್ಷರಾದ ದಯಾನಂದ ಪಾತಿಕಲ್ಲು, ನವಜ್ಯೋತಿ ಯುವಕ ಮಂಡಲ ಇದರ ಅಧ್ಯಕ್ಷರಾದ ಧರ್ಮಪಾಲ ಕೊಯಂಗಾಜೆ, ಸದಸ್ಯರುಗಳಾದ ಸುಪ್ರೀತ್ ಕೆಧ್ಕಾರ್, ಪ್ರಜ್ವಲ್ ಕೊನ್ನೂಡಿ, ಹರಿಪ್ರಸಾದ್ ಕೊಲ್ಚಾರು, ಕೃಷ್ಣ ಕೊಯಿಂಗಾಜೆ, ಅಜಿತ್ ಬಡ್ಡಡ್ಕ ಮತ್ತಿತರರು ಉಪಸ್ಥಿತರಿದ್ದರು.