ಡಾ. ಡಿ ವೀರೇಂದ್ರ ಹೆಗ್ಗಡೆ ಯವರು ಹುಟ್ಟುಹಬ್ಬ ಆಚರಣೆ ಪ್ರಯುಕ್ತ ಶ್ರೀ ಪ್ರಸನ್ನಾಂಜನೇಯ ಹಾಗೂ ಗುಳಿಗರಾಜ ಕ್ಷೇತ್ರ ಅಂಜನಾದ್ರಿ, ಇಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಾಲ್ಸೂರು ಒಕ್ಕೂಟ ಹಾಗೂ ಅಂಜನಾದ್ರಿ ಒಕ್ಕೂಟದ ಪದಾಧಿಕಾರಿಗಳ ವತಿಯಿಂದ ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ್ ನಾಗರಾಜ್ ಭಟ್ ನೇತೃತ್ವದಲ್ಲಿ “ಸತ್ಯನಾರಾಯಣ ಪೂಜೆ ಮತ್ತು ಅನ್ನಸಂತರ್ಪಣೆ”ಯನ್ನು ಹಾಗೂ ಶ್ರೀ ಕ್ಷೇತ್ರ ಅಂಜನಾದ್ರಿಯ ಭಜನಾ ಮಂಡಳಿಯಿಂದ “ವಿಶೇಷ ಭಜನಾ ಸಂಕೀರ್ತನೆ” ನಡೆಯಿತು.















ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಶ್ರೀ ಮಾಧವ ಗೌಡ, ಉದ್ಯಮಿ ಪರಿಸರವಾದಿ ಡಾ. ಆರ್. ಕೆ. ನಾಯರ್ ಗುಜರಾತ್, ಶ್ರೀ ಶಿವರಾಮ ರೈ ಕುರಿಯ ಅಧ್ಯಕ್ಷರು ಶ್ರೀ ಪ್ರಸನ್ನಾಂಜನೆಯ ಸೇವಾ ಟ್ರಸ್ಟ್, ಶ್ರೀಮತಿ ಜಯಶ್ರೀ ಮೇಲ್ವಿಚಾರಕರು ಜಾಲ್ಸೂರು ವಲಯ, ಶ್ರೀ ಜಯರಾಮ ಅಡ್ಕರ್ ಅಧ್ಯಕ್ಷರು ವಲಯ ಭಜನಾ ಪರಿಷತ್ ಜಾಲ್ಸೂರು, ಶ್ರೀ ಗಣೇಶ್ ಅಂಬಾಡಿಮೂಲೆ ಅಧ್ಯಕ್ಷರು ಜಾಲ್ಸೂರು ಒಕ್ಕೂಟ, ಶ್ರೀ ಕೃಷ್ಣಪ್ಪ ಮಹಾಬಲಡ್ಕ ಅಧ್ಯಕ್ಷರು ಅಂಜನಾದ್ರಿ ಒಕ್ಕೂಟ, ಕು. ಚಂದ್ರಕಲಾ ಸೇವಾಪ್ರತಿನಿಧಿ ಜಾಲ್ಸೂರು ಕಾರ್ಯಕ್ಷೇತ್ರ, ಹಾಗೂ ಎರಡೂ ಒಕ್ಕೂಟದ ಪದಾಧಿಕಾರಿಗಳು, ಸ್ವಸಹಾಯ ಸಂಘಗಳ ಸದಸ್ಯರು, ಶ್ರೀ ಪ್ರಸನ್ನಾಂಜನೆಯ ಗುಳಿಗರಾಜ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು, ಭಜನಾ ಮಂಡಳಿ ಪದಾಧಿಕಾರಿಗಳು, ಸೇವಾ ಸಮಿತಿ ಪದಾಧಿಕಾರಿಗಳು, ಹಾಗೂ ಭಗವಗ್ಧಭಕ್ತರು ಉಪಸ್ಥಿತರಿದ್ದರು










