ನಿಶಾಂತ್ ಜಟ್ಟಿಪಳ್ಳ ಭಾರತೀಯ ಸೇನೆಯ ಎಪಿಎಸ್ ಗೆ ಆಯ್ಕೆ

0

ಸುಳ್ಯ ಜಟ್ಟಿಪಳ್ಳ ನಿವಾಸಿ ನಿಶಾಂತ್ ಬೆಂಗಳೂರಿನ ಅಂಚೆ ಕಛೆರಿಯಲ್ಲಿ ಉದ್ಯೋಗಿಯಾಗಿದ್ದು ಅಲ್ಲಿಂದ ಭಾರತೀಯ ಸೇನೆಯ ಪರೀಕ್ಷೆ ಬರೆದು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ. ಕಳೆದ ಆರು ತಿಂಗಳು ಕಾಲ ಮಹಾರಾಷ್ಟ್ರದಲ್ಲಿ ತರಬೇತಿಯನ್ನು ಮುಗಿಸಿ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸಲು ದೆಹಲಿಯ ICBPOB ಗೆ ತೆರಳಿದ್ದಾರೆ.

ಸುಳ್ಯ ಜಟ್ಟಿಪಳ್ಳದ ಕೃಷ್ಣ ಜೆ. ಮತ್ತು ಉಮಾವತಿ ದಂಪತಿಗಳ ಪುತ್ರರಾದ ನಿಶಾಂತ್ ಪತ್ನಿ ಧನುಶ್ರೀ ಹಾಗೂ ಮಗ ಧಿಯಾಂಶ್ ರ ಜೊತೆ ಜಟ್ಟಿಪಳ್ಳದಲ್ಲಿ ನೆಲೆಸಿದ್ದಾರೆ.
ಇವರು ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಬ್ರಿಜಿಡ್ಸ್ ಕನ್ನಡ ಮಾಧ್ಯಮ ಶಾಲೆ, ಪ್ರೌಢ ವಿದ್ಯಾಭ್ಯಾಸವನ್ನು ದುಗಲಡ್ಕ ಹೈಸ್ಕೂಲ್ ನಲ್ಲಿ, ಪಿ.ಯು.ಸಿ.ಯನ್ನು ಸುಳ್ಯ ಜೂನಿಯರ್ ಕಾಲೇಜ್ ನಲ್ಲಿ, ಪದವಿ ವಿದ್ಯಾಭ್ಯಾಸ ವನ್ನು ಕೊಡಿಯಾಲಬೈಲಿನಲ್ಲಿರುವ ಸರಕಾರಿ ಪದವಿ ಕಾಲೇಜಿನಲ್ಲಿ ಪೂರೈಸಿದರು.