ಸುಳ್ಯ ರಾಮ ಮಂದಿರದಲ್ಲಿ ಅರ್ಧ ಏಕಾಹ ಭಜನೆ ಮತ್ತು ದುರ್ಗಾ ಪೂಜೆ

0

ಸುಳ್ಯ ರಾಮ ಮಂದಿರದಲ್ಲಿ ವರ್ಷಂಪ್ರತಿ ಜರುಗುವ ಅರ್ಧ ಏಕಾಹ ಭಜನೆಯು ಡಿ. 01 ರಂದು ಜರುಗಿತು. ಪ್ರಾತ:ಕಾಲದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಮಧೂರು ರಾಜೇಶ್ ಸರಳಾಯ ರವರ ನೇತೃತ್ವದಲ್ಲಿ ದೀಪ ಸ್ಥಾಪನೆಯಾಗಿ ಭಜನಾ ಸಂಕೀರ್ತನೆಯು ಆರಂಭಗೊಂಡಿತು. ಮಧ್ಯಾಹ್ನ ಮಹಾಪೂಜೆಯು ನಡೆದು ಪ್ರಸಾದ ವಿತರಣೆ ಯಾಯಿತು.
ಇಂದು ಸಂಜೆ ಭಜನಾ ಮಹಾಮಂಗಳಾರತಿಯಾಗಿ ವಿಶೇಷವಾಗಿ ಸಾರ್ವಜನಿಕ ಶ್ರೀ ದುರ್ಗಾಪೂಜೆ ನಡೆಯಲಿರುವುದು. ರಾತ್ರಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಗಲಿರುವುದು.