ಬೊಳುಬೈಲು ಅಂಗನವಾಡಿ ಬಳಿ ಕಿತ್ತು ಹೋಗಿರುವ ರಸ್ತೆ

0

ಡಾಮರು ಹಾಕಿ ಸರಿಪಡಿಸುವ ಕೆಲಸ ಯಾರಾದರೂ ಮಾಡುವಿರಾ ?

ಜಾಲ್ಸೂರು ಗ್ರಾಮದ ಬೊಳುಬೈಲು ಅಂಗನವಾಡಿ ಕೇಂದ್ರ ಮತ್ತು ಯುವಕ ಮಂಡಲ ಕಟ್ಟಡದ ಎದುರಿನಿಂದಾಗಿ ನೆಕ್ರಾಜೆ, ಕಾಟೂರು ಕಡೆಗೆ ಹೋಗುವ ರಸ್ತೆಯ ಡಾಮರು ಸಂಪೂರ್ಣ ಕಿತ್ತು ಹೋಗಿದ್ದು, ವಾಹನ ಸವಾರರಿಗಷ್ಟೇ ಅಲ್ಲ ನಡೆದು ಹೋಗುವವರಿಗೂ ಕಷ್ಟವಾಗುತ್ತದೆ. ದೊಡ್ಡದೊಡ್ಡ ಜಲ್ಲಿಕಲ್ಲುಗಳು ಎದ್ದು ವಾಹನ ಸಾಗುವಾಗ ಆತಂಕವಾಗುತ್ತದೆ. ಅಂಗನವಾಡಿಗೆ ಪೋಷಕರು ದ್ವಿಚಕ್ರದಲ್ಲಿ ಮಕ್ಕಳನ್ನು ಕರೆತರುವಾಗ ಇಲ್ಲಿ ಬೀಳುವ ಘಟನೆಗಳೂ ನಡೆಯುತ್ತವೆ.

ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಸೇರಿದಂತೆ ಸ್ಥಳೀಯ ಹಲವರು ರಸ್ತೆ ದು:ಸ್ಥಿತಿಯ ಬಗ್ಗೆ ಜನಪ್ರತಿನಿಧಿಗಳ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಪರಿಣಾಮ ಕಂಡುಬಂದಿಲ್ಲ. ಶಾಸಕರು ಅಥವಾ ಶಾಸಕರ ಜತೆಗಿರುವ ಇದೇ ಊರವರು ಈ ಸಮಸ್ಯೆ ನಿವಾರಣೆಯತ್ತ ಏನಾದರೂ ಮಾಡಬೇಕು ಎಂಬುದು ರಸ್ತೆ ಫಲಾನುಭವಿಗಳ ಆಗ್ರಹ.