ಸುಬ್ರಹ್ಮಣ್ಯ ಗ್ರಾ.ಪಂ.ನಲ್ಲಿ ಮಹಿಳಾ ಗ್ರಾಮ ಸಭೆ

0

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ 2025 -26ನೇ ಸಾಲಿನ ಮಹಿಳಾ ಗ್ರಾಮ ಸಭೆಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಕಲ್ಲಾಜೆ ಅವರ ಅಧ್ಯಕ್ಷತೆಯಲ್ಲಿ ಡಿ.4 ರಂದು ನಡೆಸಲಾಯಿತು. ಈ ಮಹಿಳಾ ಗ್ರಾಮ ಸಭೆಗೆ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಗೆ ಒಳಪಟ್ಟ ಸುಬ್ರಮಣ್ಯ, ಏನೆಕಲ್ಲು, ಐನೆಕಿದು ಗ್ರಾಮಗಳ ಮಹಿಳೆಯರು, ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸುಬ್ರಹ್ಮಣ್ಯದ ಅಧ್ಯಕ್ಷ, ಕಾರ್ಯದರ್ಶಿ, ಪದಾಧಿಕಾರಿಗಳು, ಎಂ.ಬಿ.ಕೆ, ಎಲ್ ಸಿ ಆರ್ ಪಿ ಒಕ್ಕೂಟದ ಎಲ್ಲಾ ಸಖಿಗಳು, ಹಾಗೂ ಸದಸ್ಯರುಗಳು, ಎಲ್ಲಾ ಮಹಿಳಾ ಸ್ವಸಹಾಯ ಸಂಘದ ಸದಸ್ಯರುಗಳು, ವಾಣಿ ವಣಿತ ಸಮಾಜ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ವರಮಹಾಲಕ್ಷ್ಮಿ ಸಮಿತಿಗಳು, ಹಾಗೂ ಮಹಿಳಾ ಜನಪ್ರತಿನಿಧಿಗಳು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡುವುದರೊಂದಿಗೆ ಅಗತ್ಯ ಮೂಲಭೂತ ಸೌಕರ್ಯದ ಬಗ್ಗೆ ಜನಪ್ರತಿನಿಧಿಗಳ ಗಮನಸೆಳೆದರು.


ಈ ಸಂದರ್ಭದಲ್ಲಿ ಮಹಿಳೆಯರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಬಲೀಕರಣ,ಮಕ್ಕಳ ಪೋಷಣೆ, ಮತ್ತು ರಕ್ಷಣೆ ಮಹಿಳಾ ಆರೋಗ್ಯ ಸುಧಾರಣೆ, ನೈರ್ಮಲ್ಯ ಹಾಗೂ ಮಹಿಳಾಪರ ಕಾನೂನು, ಮತ್ತು ಕೌಟುಂಬಿಕ ದೌರ್ಜನ್ಯ, ತಡೆ ಕಾಯಿದೆಗಳು,ಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಮಹಿಳೆಯರ ಸುಖಿ ಜೀವನ ಹಾಗೂ ಪ್ರಾಮುಖ್ಯತೆ ಬಗ್ಗೆ ಕೆ ಎಸ್ ಎಸ್ ಕಾಲೇಜಿನ ಉಪನ್ಯಾಸಕಿ ಆರತಿಯವರು ಮಾಹಿತಿ ನೀಡಿದರು. ಲಿಂಗತ್ವ ದೌರ್ಜನ್ಯ ಕುರಿತು ರಾಷ್ಟ್ರೀಯ ಅಭಯಾನದ ತಾಲೂಕು ಪಂಚಾಯತ್ ಸಂಪನ್ಮೂಲ ವ್ಯಕ್ತಿ ಧನ್ಯಶ್ರೀ ಮಾಹಿತಿ ನೀಡಿದರು. ಸಾಂಕ್ರಾಮಿಕ ರೋಗದ ರೋಗಗಳ ಬಗ್ಗೆ ಸಮುದಾಯ ಆರೋಗ್ಯ ಅಧಿಕಾರಿ ನವ್ಯಶ್ರೀ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿನ ಸದಸ್ಯರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು . ಸುಬ್ರಮಣ್ಯ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ. ಡಿ. ಧನ್ಯವಾದ ಸಮರ್ಪಿಸಿದರು.
ಮಹಿಳಾ ಗ್ರಾಮ ಸಭೆ ಆರಂಭದ ಮೊದಲು ರಂಗೋಲಿ ಸ್ಪರ್ಧೆ ಏರ್ಪಡಿಸಲಾಯಿತು.