ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ವಲಯದ ತ್ರೈಮಾಸಿಕ ಸಭೆಯು ಯೋಜನಾ ಕಚೇರಿಯ ಸಭಾಂಗಣದಲ್ಲಿ
ಸುಳ್ಯ ವಲಯದ ಅಧ್ಯಕ್ಷೆ ಶ್ರೀಮತಿ ಸವಿತ ಸಂದೇಶ್ ರವರ ಅಧ್ಯಕ್ಷತೆಯಲ್ಲಿ ಡಿ. 3 ರಂದು ನಡೆಯಿತು.
















ತಾಲೂಕು ಪರಿಷತ್ ಅಧ್ಯಕ್ಷ
ಸೋಮಶೇಖರ್ ಪೈಕ, ಗೌರವಾಧ್ಯಕ್ಷ ಶಿವಪ್ರಸಾದ್ ಅಲೆಟ್ಟಿ,ಯೋಜನಾಧಿಕಾರಿ ಮಾಧವ ಗೌಡ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ
ವಲಯದಲ್ಲಿರುವ ಭಜನಾ ಮಂಡಳಿಗಳನ್ನು ಪರಿಷತ್ ನಲ್ಲಿ ನೋಂದಾವಣೆ ಮಾಡುವ ಕುರಿತು ಚರ್ಚಿಸಲಾಯಿತು. ತಾಲೂಕು ಭಜನೋತ್ಸವ ಸುಬ್ರಹ್ಮಣ್ಯದಲ್ಲಿ ನಡೆಯಲಿದ್ದು ಎಲ್ಲಾ ಮಂಡಳಿಯವರು ಪಾಲ್ಗೊಳ್ಳುವಂತೆ ತಿಳಿಸಿದರು. ವಲಯ ಮಟ್ಟದ ಕಾರ್ಯಕ್ರಮ ನಡೆಸುವುದೆಂದು ತೀರ್ಮಾನಿಸಲಾಯಿತು.
ವಲಯದ ಭಜನಾ ಮಂಡಳಿಯ ಪದಾಧಿಕಾರಿಗಳು ಭಾಗವಹಿಸಿದರು.
ವಲಯ ಮೇಲ್ವಿಚಾರಕ ದಿನೇಶ್ ಸ್ವಾಗತಿಸಿ, ವಲಯ ಕಾರ್ಯದರ್ಶಿ ಪ್ರಿಯ ಬಳ್ಳಡ್ಕ ವಂದಿಸಿದರು.










