ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುಳ್ಯ ಅಟ್ಲೂರು ಇದರ 5 ನೇ ತರಗತಿ ವಿದ್ಯಾರ್ಥಿನಿ ವಿಶೇಷ ಚೇತನ ಬಹುಮುಖ ಪ್ರತಿಭೆ ನಿಶ್ಮಿತಾ ಬಳ್ಳಡ್ಕ ತಾಲೂಕು ಮಟ್ಟದ ಕ್ವಿಜ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದು ವಿಜೇತಳಾಗಿ ಪ್ರಸ್ತುತ ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.















ನಿಶ್ಮಿತಾ ರವರು ಸುಳ್ಯ ಜ್ಯೋತಿ ಸರ್ಕಲ್ ನಲ್ಲಿ ರಿಕ್ಷಾ ಚಾಲಕರಾಗಿರುವ ವಸಂತ ಬಳ್ಳಡ್ಕ, ಮತ್ತು ಭಾರತಿ ದಂಪತಿಯರ ಪುತ್ರಿಯಾಗಿದ್ದಾರೆ.
ಇವರು ಸಂಗೀತ ಹಾಗೂ ಚಿತ್ರಕಲೆ ಸ್ಪರ್ಧೆಗಳಲ್ಲಿ ನಾನಾ ಕಡೆಗಳಲ್ಲಿ ಭಾಗವಹಿಸಿ ಸನ್ಮಾನ ಪುರಸ್ಕಾರವನ್ನು ಪಡೆದಿರುತ್ತಾರೆ.










