ವೈಟ್ ಲಿಫ್ಟ್ ನಲ್ಲಿ ಹರ್ಷಿತಾ ಪೂದೆ ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಕೇರಳದ ತ್ರಿಶೂರ್ ನಲ್ಲಿ ಇತ್ತೀಚೆಗೆ ನಡೆದ ವೈಟ್ ಲಿಫ್ಟ್ ನಲ್ಲಿ, 48 ಕೆಜಿ ವಿಭಾಗದಲ್ಲಿ ಉಜಿರೆ ಎಸ್ ಡಿ ಎಂ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ಹರ್ಷಿತಾ ಪೂದೆಯವರು
ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ಮುರುಳ್ಯ ಗ್ರಾಮದ ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ಪೂದೆ ಮತ್ತು ಪುಷ್ಪವತಿ ಪೂದೆಯವರ ಪುತ್ರಿ.

ಬಾಲ್ಯದಲ್ಲಿಯೇ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಈಕೆ ಜಿಲ್ಲಾ ಮಟ್ಟದ ಕಬಡ್ಡಿ ಆಟಗಾರ್ತಿ. ಇವರಿಗೆ ಸಂತೋಷ್ ಕುಮಾರ್‌ರವರು ತರಬೇತಿ ನೀಡುತ್ತಿದ್ದಾರೆ.

ವರದಿ : ಎಎಸ್ಎಸ್ ಅಲೆಕ್ಕಾಡಿ