
ದಶಂಬರ 25 ಮತ್ತು 26 ರಂದು ಸುಳ್ಯದಲ್ಲಿ ನಡೆಯಲಿರುವ ಕೆ.ವಿ.ಜಿ. ಸುಳ್ಯ ಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಿತು.
ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಟಿ.ವಿಶ್ವನಾಥರ ಅಧ್ಯಕ್ಷತೆಯಲ್ಲಿ ದ.6 ರಂದು ಸಂಜೆ ನಡೆದ ಸುಳ್ಯಹಬ್ಬ ಸಮಿತಿಯ ಕಾರ್ಯಕಾರಿಣಿ ಸದಸ್ಯರ ಸಭೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಸಮಿತಿಯ ಸ್ಥಾಪಕಾಧ್ಯಕ್ಷ ಎನ್.ಜಯಪ್ರಕಾಶ್ ರೈ ವೇದಿಕೆಯಲ್ಲಿದ್ದು ಶುಭಹಾರೈಸಿದರು. ನಿಕಟಪೂರ್ವ ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್ ವೇದಿಕೆಯಲ್ಲಿದ್ದರು. ಪ್ರಧಾನ ಕಾರ್ಯದರ್ಶಿ ಹರೀಶ್ ಬಂಟ್ವಾಳ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷ ಕೆ.ಟಿ.ವಿಶ್ವನಾಥ್ ಕಾರ್ಯಕ್ರಮದ ವಿವರ ನೀಡಿದರು. ಖಜಾಂಚಿ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕೆ.ವಿ.ದಾಮೋದರ ಗೌಡ, ಕೆ.ಎಂ.ಮುಸ್ತಫ, ಪಿ.ಎ.ಮಹಮ್ಮದ್, ಡಿ.ಟಿ.ದಯಾನಂದ, ಡಿ.ಎಂ.ಸುಮಿತ್ರ, ಪಿ.ಎಸ್.ಗಂಗಾಧರ, ದಿನೇಶ್ ಅಂಬೆಕಲ್ಲು, ಶೈಲೇಶ್ ಅಂಬೆಕಲ್ಲು, ಶ್ರೀಮತಿ ವಿನುತಾ ಪಾತಿಕಲ್ಲು, ರಾಜು ಪಂಡಿತ್, ಲತಾ ಸುಪ್ರೀತ್, ದೊಡ್ಡಣ್ಣ ಬರೆಮೇಲು, ಎಸ್.ಆರ್.ಸೂರಯ್ಯ, ಡಾ.ಲಕ್ಷ್ಮೀಶ್ ಕೆ.ಎಸ್., ಡಾ.ಪುರುಷೋತ್ತಮ ಕೆ.ಜಿ., ಶಾಫಿ ಕುತ್ತಮೊಟ್ಟೆ, ಜನಾರ್ದನ್ ನಾಯ್ಕ್, ವೀರಪ್ಪ ಗೌಡ ಕಣ್ಕಲ್, ಪಿ.ಎಂ.ರಂಗನಾಥ್, ಡಾ.ಲೀಲಾಧರ್ ಡಿ.ವಿ., ಚಂದ್ರಶೇಖರ ಪೇರಾಲು, ಸದಾನಂದ ಮಾವಜಿ ಮತ್ತಿತರರು ಉಪಸ್ಥಿತರಿದ್ದರು.

ದೇವಳದಲ್ಲಿ ಪ್ರಾರ್ಥನೆ
ದ.6 ರಂದು ಪೂರ್ವಾಹ್ನ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಆಮಂತ್ರಣ ಪತ್ರವಿರಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕರವರು ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯಲೆಂದು ಹಾರೈಸಿದರು. ಕೆ.ವಿ.ಜಿ. ಸುಳ್ಯಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಟಿ.ವಿಶ್ವನಾಥ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

























