ಎಣ್ಮೂರು ಗರಡಿಯಲ್ಲಿ ಬಿರ್ಮರ ಮಾಡ, ಕಾಜುಕುಜುಂಬ, ದೈವಸ್ಥಾನ ಅಭಿವೃದ್ಧಿ ಕುರಿತು ಅಷ್ಟಮಂಗಳ ಪ್ರಶ್ನಾ ಚಿಂತನೆ

0

ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿಚೆನ್ನಯ್ಯ ಆದಿ ಬೈದರುಗಳ ಗರಡಿಯಲ್ಲಿ ಶ್ರೀ ಕ್ಷೇತ್ರದ ಅನುವಂಶಿಕ ಆಡಳಿತ ಮುಖ್ಯಸ್ಥರು ಕಟ್ಟಬೀಡು ರಾಮಕೃಷ್ಣ ಶೆಟ್ಟಿಯವರ ಮುಂದಾಳತ್ವದಲ್ಲಿ ಪುತ್ತೂರು ಸ್ವಾಮೀನಾಥ ಜ್ಯೋತಿಷರ ನೇತೃತ್ವದಲ್ಲಿ ಡಿಸೆಂಬರ್ ೫ ರಂದು ಗರಡಿಯಲ್ಲಿ ಪ್ರಶ್ನಾ ಚಿಂತನೆ ನಡೆಯಿತು.
ಸುಮಾರು ೮೦೦ ವರ್ಷ ಹಿಂದೆ ಬಲ್ಲಾಳರ ಆಳ್ವಿಕೆಯಲ್ಲಿ ಪ್ರಧಾನ ಶಕ್ತಿಗಳಾದ ಬಿರ್ಮೆರ ಮಾಡ, ಕಾಜು ಕುಜುಂಬ ದೈವಸ್ಥಾನ ಇತ್ತು. ಅದು ಕಳೆದ ಸಾಲಿನ ಮಳೆಯ ಅವಾಂತರದಲ್ಲಿ ಹೊಳೆಯ ನೀರಿನ ಸೆಳೆತಕ್ಕೆ ಒಂದು ಕಟ್ಟಡ ಧರಾಶಾಯಿಯಾಗಿ ಇನ್ನೊಂದು ಕಟ್ಟಡ ದುಸ್ಥಿತಿಯಲ್ಲಿದ್ದು, ಜೀರ್ಣೋದ್ಧಾರ ಹಿನ್ನಲೆಯಿಂದ ಪ್ರಶ್ನಾ ಚಿಂತನಾ ಕಾರ್ಯಕ್ರಮ ನಡೆಯಿತು. ಕನಿಷ್ಠ ಐವತ್ತು ಲಕ್ಷ ಅಂದಾಜಿಸಲಾಗಿ ಊರವರ ಸಹಕಾರದಲ್ಲಿ ಜೀರ್ಣೋದ್ಧಾರ ಕಾರ್ಯ ಕಾಮಗಾರಿ ನಡೆಸುವುದೆಂದು ತೀರ್ಮಾಣ ಕೈಗೆತ್ತಿಕೊಳ್ಳಲಾಯಿತು.


ಈ ಸಂದರ್ಭದಲ್ಲಿ ಚಿಕ್ಕರಾಜೇಂದ್ರ ಶೆಟ್ಟಿ, ಶ್ರೀಮತಿ ಪದ್ಮ ಆರ್. ಶೆಟ್ಟಿ, ಅತುಲ್ ಶೆಟ್ಟಿ, ಶರ್ಮಿಳಾ ಶೆಟ್ಟಿ, ಪಂಜಿ ಮೊಗರು ರಘುನಾಥ ರೈ, ಕೆ. ಎನ್. ರಘುನಾಥ್ ರೈ, ಕೇರ್ಪಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹಾಗೂ ಗರಡಿ ಮಾಹಿತಿದಾರ ಎನ್.ಜಿ. ಲೋಕನಾಥ ರೈ ಪಟ್ಟೆ, ಕೆ.ಎನ್. ಬಾಸ್ಕರ ರೈ ಕಟ್ಟ , ಸುಧೀರ್‌ಕುಮಾರ್ ಶೆಟ್ಟಿ, ಅನೂಪ್ ಕುಮಾರ್ ಆಳ್ವ , ಅನಿಲ್ ಆಳ್ವ, ಕರುಣಾಕರ ರೈ, ಕೆ ರಾಧಾಕೃಷ್ಣ ಶೆಟ್ಟಿ ವಕೀಲರು, ಸುಜಿತ್ ರೈ ಪಟ್ಟೆ, ರಾಜೇಂದ್ರ ಪ್ರಸಾದ್ ಶೆಟ್ಟಿ ಗುತ್ತು, ವಸಂತ ಐ ಅಲೆಂಗಾರ, ಭಾಸ್ಕರ ಪೂಜಾರಿ, ಪುರಂದರ ಪೂಜಾರಿ, ಕೃಷ್ಣ ಮಡಿವಾಳ, ಶಿವರಾಮ ಮಡಿವಾಳ, ನಾಗೇಶ್ ಆಳ್ವ, ರಾಜೇಶ್ ರೈ ಗುತ್ತು, ರತನ್ ರೈ ಗುತ್ತು, ಕುಸುಮಾತಿ ಕೆ ರೈ ಗುತ್ತು, ಹರಿಪ್ರಸಾದ್ ರೈ, ವಸಂತ ಕುಕ್ಕಯಾಕೋಡಿ, ಕೃಷ್ಣಪ್ಪ ಪೂಜಾರಿ ಮೂಲೆ ಮಜಲು ಗರಡಿ, ರಮೇಶ್ ಕೋಟೆ, ಮಾಯಿಲಪ್ಪ ಗೌಡ ಪಟ್ಟೆ, ಜಗನ್ನಾಥ ರೈ ಕೆ, ಪದ್ಮನಾಭ ರೈ, ಇನ್ನಿತರರು ಉಪಸ್ಥಿತರಿದ್ದರು.