ಸಂತಾನೋತ್ಪತ್ತಿ ಔಷಧ ಕ್ಷೇತ್ರದಲ್ಲಿ (Reproductive Medicine) ಫೆಲೋಷಿಪ್: ಡಾ. ಗೀತಾ ಡೊಪ್ಪ ಅವರ ವಿಶೇಷ ಸಾಧನೆ

0

ಬ್ಯಾಚ್ ಟಾಪರ್ ಆಗಿ ವಿಶೇಷ ಪ್ರಶಸ್ತಿ

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥೆಯಾದ ಡಾ. ಗೀತಾ ಡೊಪ್ಪ ಅವರು ಡಿ. 6ರಂದು ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಸಂತಾನೋತ್ಪತ್ತಿ ಔಷಧ (Reproductive Medicine) ವಿಭಾಗದಲ್ಲಿ ಪ್ರತಿಷ್ಠಿತ ಫೆಲೋಷಿಪ್ ಪದವಿಯನ್ನು ಪಡೆದುಕೊಂಡಿದ್ದಾರೆ.

ಪ್ರಸಿದ್ಧ ಸಂತಾನೋತ್ಪತ್ತಿ ತಜ್ಞೆ, ಪದ್ಮಶ್ರೀ ಪುರಸ್ಕೃತೆಯಾದ ಡಾ. ಕಾಮಿನಿ ರಾವ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿರುವ ಡಾ. ಗೀತಾ ಡೊಪ್ಪ ಅವರು ಸಂತಾನೋತ್ಪತ್ತಿ ಔಷಧ ಕ್ಷೇತ್ರದಲ್ಲಿ ನವೀಕೃತ ವಿಧಾನಗಳಾದ ಐಯೂಐ (IUI), ಐವಿಎಫ್ (IVF – ಟೆಸ್ಟ್ ಟ್ಯೂಬ್ ಬೇಬಿ), ಐಸಿಎಸ್‌ಐ (ICSI) ಸೇರಿದಂತೆ ಬಂಜೆತನ ಚಿಕಿತ್ಸೆಯ ಇತರ ಆಧುನಿಕ ತಂತ್ರಜ್ಞಾನಗಳಲ್ಲಿ ಪರಿಣತಿ ಹೊಂದಿದ್ದಾರೆ.

ಪದವಿ ಪ್ರದಾನ ಸಮಾರಂಭದಲ್ಲಿ ತಮ್ಮ ತರಬೇತಿ ಬ್ಯಾಚ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿ ಬ್ಯಾಚ್ ಟಾಪರ್ ಆಗಿರುವ ಅವರಿಗೆ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ. ಗೀತಾ ಡೊಪ್ಪ ಅವರ ಈ ಸಾಧನೆ ಸಂತಾನೋತ್ಪತ್ತಿ ಔಷಧ ಕ್ಷೇತ್ರದಲ್ಲಿ ಮತ್ತೊಂದು ಹೆಗ್ಗುರುತು ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಹೇಳಿ ಶುಭ ಹಾರೈಸಿದ್ದಾರೆ.