HomePage_Banner
HomePage_Banner
HomePage_Banner
HomePage_Banner

ಶಾಸಕರಿಂದ ಕೃಷಿ ಯಂತ್ರೋಪಕರಣಗಳ ವಿತರಣೆ

ಕೃಷಿ ಯಾಂತ್ರೀಕರಣ ಯೋಜನೆಯಡಿ ಪವರ್ ಟಿಲ್ಲರ್‌ನ್ನು ಶಾಸಕ ಎಸ್.ಅಂಗಾರ ಫಲಾನುಭವಿಗಳಿಗೆ ವಿತರಣೆ ಮಾಡಿದರು.
ಮಂಡೆಕೋಲು ಗ್ರಾಮದ ಕೇನಾಜೆ ಕೊರಗಪ್ಪ ಗೌಡರ ಪತ್ರ ಚಂದ್ರಶೇಖರ ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ ಪವರ್ ಟಿಲ್ಲರ್‌ಗೆ ಅರ್ಜಿ ಹಾಕಿದ್ದು, ಅವರಿಗೆ ತಾಲೂಕು ಪಂಚಾಯತ್ ಆವರಣದಲ್ಲಿ ಟಿಲ್ಲರ್ ವಿತರಣೆ ಮಾಡಲಾಯಿತು. 1 ಲಕ್ಷ 54 ಸಾವಿರ ಬೆಲೆಯ ಪವರ್ ಟಿಲ್ಲರ್‌ಗೆ 64 ಸಾವಿರ 5೦೦ ಸಹಾಯಧನ ಲಭ್ಯವಿದ್ದು, ರೈತರು 90 ಸಾವಿರದ 3೦೦ನ್ನು ಪಾವತಿಸಬೇಕು ಎಂದು ಕೃಷಿ ಇಲಾಖೆಯ ತಾಮತ್ರಿಕ ಅಧಿಕಾರಿ ಮೋಹನ್ ನಂಗಾರು ಹೇಳಿದರು. ತಾಲೂಕು ಪಂಚಾಯತ್ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯ ಪ್ರಸನ್ನ, ಕಾರ್ಯನಿರ್ವಹಣಾಧಿಕಾರಿ ಬಿ.ವಿ.ಮಲ್ಲೇಶಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಾಲಿಚಂದ್ರ ಉಪಸ್ಥಿತರಿದ್ದರು.

shasaka angara rinda krishi yanthra vitharane

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.