ಕೇಂದ್ರೀಯ ಪಠ್ಯಕ್ರಮದಲ್ಲಿ ಭೋದಿಸಲ್ಪಡುತ್ತಿರುವ ಅಸೋಸಿಯೇಶನ್ ಆಫ್ ಐ.ಸಿ.ಎಸ್.ಇ ಮತ್ತು ಸಿ.ಬಿ.ಎಸ್.ಇ ಉಡುಪಿ ಹಾಗೂ ದಕ್ಷಿಣ ಕನ್ನಡ ಇದರ ವತಿಯಿಂದ ಪ್ರೌಢಶಾಲಾ ವಿಧ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಉಡುಪಿಯ ಶಾರದಾ ರೆಸಿಡೆನ್ಸಿಯಲ್ ಶಾಲೆಯಲ್ಲಿ ನಡೆದ ಸ್ಪರ್ದೆಗಳಲ್ಲಿ ಜನಪದ ನೃತ್ಯ ವಿಭಾಗದಲ್ಲಿ ಸುಮಾರು 34 ಶಾಲೆಯ ತಂಡಗಳು ನೀಡಿದ ಪ್ರದರ್ಶನದಲ್ಲಿ ಸುಳ್ಯದ ಕೆ.ವಿ.ಜಿ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯ ಝಿನ್ನೀರಾ, ಶುಭ, ಪ್ರಜ್ಞಾಶ್ರೀ, ಪೂಜಾ, ಮನ್ವಿತಾ ಮತ್ತು ಪೂರ್ವಿ ಇವರುಗಳ ತಂಡ ದ್ವಿತೀಯ ಬಹುಮಾನ ಪಡೆದಿದ್ದಾರೆ.
ಶಿಕ್ಷಕಿ ಶ್ರೀಮತಿ ನೀಲವೇಣಿ ಬಿ.ಎಸ್ ಹಾಗೂ ದೈಹಿಕ ಶಿಕ್ಷಕರಾದ ಶರತ್ ಜೆ.ಕೆ ವಿದ್ಯಾರ್ತಿಗಳಿಗೆ ಮಾರ್ಗದರ್ಶನ ನೀಡಿದ್ದು, ಮುಖೇಶ್ ಸುಳ್ಯ ಇವರಿಂದ ವಿದ್ಯಾರ್ಥಿಗಳು ನೃತ್ಯ ನಿರ್ದೇಶನ ಪಡೆದಿದ್ದರು.