Breaking News

ಕೃಷಿಯಲ್ಲಿ ಆರ್ಥಿಕ ನಿರ್ವಹಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ತನ್ನ ಪಾಲಿಗೆ ಬಂದ ಹಿಡುವಳಿಯಲ್ಲಿ ಬೆಳೆದ ಬೆಳೆಯಿಂದ ಪಡೆದ ಉತ್ಪತ್ತಿ, ಬೆಳೆ ಬೆಳೆಯಲು ಬೇಕಾಗುವ ಖರ್ಚು, ಕುಟುಂಬದ ನಿರ್ವಹಣೆ ಅದರಲ್ಲಿ ಮಕ್ಕಳ ವಿದ್ಯಾಭ್ಯಾಸದ ಖರ್ಚು ಕೂಡಾ ತುಂಬಿಕೊಂಡು ಮುಂದಿನ ಮುಂಗಾರಿನ ಕೃಷಿ ಕೆಲ್ಸ ಕಾರ್ಯ, ಮನೆ ಖರ್ಚಿಗೆ ಬೇಕಾದ ಹಣ ಉಳಿತಾಯ ಮಾಡಿದರೆ ಅವನೊಬ್ಬ ಯಶಸ್ವಿ ರೈತನೆನ್ನಬಹುದು.
ಈ ತನ್ಮಧ್ಯೆ ಜೀವನದ ದುಃಖ ಕಷ್ಟಗಳಿಗೆ ತನ್ನ ಒಂದು ವರ್ಷದ ಉತ್ಪತ್ತಿಯಷ್ಟು ಪರಮಾವಧಿ ಸಾಲ ಮಾಡಿದರೂ ಕೃಷಿಯನ್ನು ಮುಂದವರಿಸಿಕೊಂಡು ಹೋಗಬಹುದು ಎಂಬುದು ಹಿಂದಿನವರ ಮಾತು, ಎಚ್ಚರಿಕೆಯಿಂದ ಮುಂದಿನ ಖರ್ಚಿನ ಬಾಬ್ತುಗಳಲ್ಲಿ ಕಡಿತ ಮಾಡಿಕೊಂಡು ಜೀವನ ರಥ ಸುಧಾರಿಸಿಕೊಳ್ಳಬಹುದು.
ಕೆಲವೊಂದು ಕಾರಣಗಳಿಂದ ಸಾಲ ಹೆಚ್ಚಾಗಿ ಸಮಯಕ್ಕೆ ಅದರ ಬಡ್ಡಿ, ಅಸಲು, ಕಟ್ಟಲಾಗದೆ ಕಂಗಾಲಾದಾಗ, ತಮ್ಮ ತಮ್ಮ ಸಹಕಾರಿ ಸಂಸ್ಥೆಗಳಲ್ಲಿ ಆತ್ಮೀಯರಲ್ಲಿ ಯಾ ಸ್ನೇಹಿತರಲ್ಲಿ, ವಸ್ತು ಸ್ಥಿತಿಯನ್ನು ಯಥಾವತ್ತು ತಿಳಿಸಿ ವಾದೆ ದಾಟುತ್ತಿರುವ ಸಾಲವನ್ನು ಕಟ್ಟಿ ಯಾ ಬಡ್ಡಿ ಕಟ್ಟಿ, ಮುಂದಿನ ವರ್ಷಗಳಲ್ಲಿ ಉತ್ಪತ್ತಿ ಹೆಚ್ಚಿಸಿಕೊಳ್ಳಬೇಕು, ಖರ್ಚಿಗೆ ಕಡಿವಾಣ ಹಾಕಬೇಕು. ಸಹಕರಿಸಿದವರ ಆತ್ಮೀಯರ ಸ್ನೇಹಿತರ ಸ್ನೇಹ ಉಳಿಸಿಕೊಳ್ಳಬೇಕು.
ಮತ್ತಷ್ಟು ಕಠಿಣ ಪರಿಸ್ಥಿತಿಯಲ್ಲಿ ಬದುಕಿಗೆ ಬೆನ್ನು ಹಾಕದೆ, ಅದೊಂದು ರೋಚಕ ಅನುಭವ ಎಂದು ಅದನ್ನು ಸ್ವಿಕರಿಸಿ ಎಂಬ ಬಲ್ಲವರ ಮಾತಿನಿಂದ ಪ್ರೇರೇಪಣೆ ಪಡೆದು ಮುನ್ನುಗ್ಗಬೇಕು, ಅದಕ್ಕೂ ಮನಸ್ಸು ಹಿಂಜರಿದರೆ ತನ್ನ ಆಡಳಿತ ಪತ್ನಿಗೊ, ಮಕ್ಕಳಿಗೊ ಹಸ್ತಾಂತರಿಸಬೇಕು. ಅದು ಕಷ್ಟವಾದಾಗ ತನ್ನ ಹಿಡುವಳಿಯಲ್ಲಿ ಒಂದಷ್ಟು ಭಾಗ ವಿಕ್ರಯಿಸಿ, ಸಾಲಗಾರರ ಬಾದೆಯಿಂದ ಮುಕ್ತರಾಗಿ ಇದ್ದ ಪರಿಸ್ಥಿತಿಗೆ ಹೊಂದಿಕೊಂಡು ಹೋಗಲು ಕಲಿಯಬೇಕು.
ರೈತನಲ್ಲಿ ಸಾಧಿಸುವ ಛಲವಿದ್ದರೆ, ಭೂಮಿತಾಯಿ ಅವನನ್ನು ಬಿಟ್ಟು ಕೊಡಲಾರಳು ಎಂಬ ನಂಬಿಕೆ ಇರಲಿ. ರೈತ ಸಂಸ್ಕಾರವಂತನಾಗಿ, ನಡವಳಿಕೆ ಶುದ್ದವಾಗಿಟ್ಟುಕೊಂಡು. ಮಕ್ಕಳನ್ನು ನೀತಿವಂತರಾಗಿ ವಿದ್ಯಾವಂತರನ್ನಾಗಿಸುವ ಜವಾಬ್ದಾರಿಯೂ ಸದಾ ಅವನಿಗಿರಬೇಕಾಗಿದೆ.
ಸಹವಾಸ ದೋಷದಿಂದ ಕೆಲವೊಮ್ಮೆ ಹುಂಬತನದಿಂದ ದಾರಿತಪ್ಪುವ ಲಕ್ಷಣ ಕಂಡಾಗ ಬಲ್ಲವರಿಂದ ಮಕ್ಕಳನ್ನು ಸರಿದಾರಿಗೆ ತರುವ ಪ್ರಯತ್ನ ಹೆತ್ತವರಿಗಿರಬೇಕು. ಇಲ್ಲವಾದರೆ ಆ ಚಾಳಿ ಮುಂದುವರಿದು ಅತ್ಯಾಚಾರ ಕೊಲೆ, ಆತ್ಮಹತ್ಯೆಗೆ ಎಡೆ ಮಾಡಿಕೊಡುವುದು. ಇದು ಸಮಾಜದಲ್ಲಿ ಕಾಣುತ್ತಿರುವ ಅನಿಷ್ಟ ಪದ್ದತಿಯಾಗಿದೆ.
ತನ್ನ ವ್ಯಾಪ್ತಿಯಲ್ಲಿರುವ ಸಹಕಾರಿ ಸಂಸ್ಥೆ, ಪಂಚಾಯತಿನ ಸವಲತ್ತನ್ನು ಕೇಳಿ ತಿಳಿದು ಅದರ ಸದುಪಯೋಗ ಪಡೆಯಬೇಕು. ಕೃಷಿ ಕೆಲಸ ಕಾರ್ಯಗಳಲ್ಲಿ ಕೃಷಿ ಸಹಾಯಕರನ್ನು ಹುಡುಕಿ ಅವರಿಂದ ದೊರೆಯಬಹುದಾದ ಮಾಹಿತಿ ಸವಲತ್ತನ್ನು ಪಡೆಯಲು ಪ್ರಯತ್ನಿಸಬೇಕು. ಅಲ್ಲದೆ ತನ್ನಲ್ಲಿರುವ ನಿರ್ದಿಷ್ಟ ಸ್ಥಳದಲ್ಲಿ ಹೆಚ್ಚಿನ ಉತ್ಪತ್ತಿ ಪಡೆಯಲು ಸಾವಯವ ಗೊಬ್ಬg, ಪೂರಕ ಗೊಬ್ಬರ ಉಪಯೋಗಿಸಿಕೊಂಡು ಸಫಲರಾಗಬೇಕು. ಬೆಳೆದ ಬೆಳೆಯನ್ನು ಮಾರುಕಟ್ಟೆಯಲ್ಲಿ ಅದರ ಧಾರಣೆ ಉತ್ತಮ ಇರುವಾಗ ಸಹಕಾರಿ ಸಂಸ್ಥೆಗಳ ಮೂಲಕ ಯಾ ಮುಖ್ಯ ಮಾರುಕಟ್ಟೆಯಲ್ಲಿ ಗರಿಷ್ಟ ಧಾರಣೆಗೆ ಮಾರಾಟವಾಗುವಂತೆ ಎಚ್ಚರಿಕೆಯಿಂದ ವ್ಯವಹರಿಸಬೇಕು. ಈ ಮಧ್ಯೆ ಮಾರುಕಟ್ಟೆಗೆ ಮ್ಹಾಲನ್ನು ಸಾಗಿಸುವಾಗ, ಕನಿಷ್ಠ ಸಾಗಣೆ ವೆಚ್ಚದಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಿ ತನ್ನ ಸ್ವಂತ ನಿಲುವಿನಿಂದ ಕಾರ್ಯ ಪ್ರವೃತ್ತನಾಗಬೇಕು.
ಹೆಚ್ಚಿನ ಕೃಷಿ ಕಾರ್ಯದಲ್ಲಿ ಉತ್ಪತ್ತಿಯ ಶೇಕಡಾ ೭೦-೮೦ ಭಾಗ ಖರ್ಚಿಗೆ ಹೋದರೆ, ಕೃಷಿಕ ಯಾವ ರೀತಿ ಜೀವನ ನಿರ್ವಹಣೆ ಮಾಡಬೇಕು?
ಜೀವ ವಿಮೆ ಮಾಡಿ ನಿರಖು ಠೇವಣೆ ಕಟ್ಟಿ ಎನ್ನುವವರು, ಕಂತಿನಲ್ಲಿ ಸಾಲಕಟ್ಟಿ ಶರ್ತದಲ್ಲಿ ವಾಹನ ಕೊಡಮಾಡುವವರು, ಮನೆಕಟ್ಟಲು, ಚಿನ್ನ ಇತ್ಯಾದಿ ಖರೀದಿಸಲು ಇತ್ಯಾದಿ ಸಾಲಕೊಟ್ಟು ವಸೂಲ್ ಮಾಡುವವರು ಸಮಾಜದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ತನ್ನ, ತನ್ನನಾಶ್ರಯಿಸಿದವರ ಹೊಟ್ಟೆ, ಬಟ್ಟೆ ಮಕ್ಕಳ ವಿದ್ಯಾಭ್ಯಾಸವೇ ಮುಖ್ಯ ಎಂಬ ನಿಲುವು ಪ್ರಥಮ ಆದ್ಯತೆ ರೈತನದಾಗಬೇಕು.
ಸಣ್ಣ ಚಿಕ್ಕ ಹಿಡುವಳಿದಾರರು ತಾವೇ ಗೈದು, ಉಪಕಸುಬಾಗಿ ದನ, ಆಡು, ಕೋಳಿ ಸಾಕಿ ತಕ್ಕಮಟ್ಟಿಗೆ ತೃಪ್ತಿ ಕಂಡುಕೊಳ್ಳಬಹುದು. ಮಧ್ಯಮ ಕೃಷಿಕ ಇತ್ತ ಸ್ವತಹ ಗೈದು ಪೂರೈಸಲಾರ. ಇಂದಿನ ಕೂಲಿ ಕೊಟ್ಟು ಕೃಷಿ ಮಾಡಿದರೆ ಮತ್ತಷ್ಟು ಸಾಲಗಾರನಾಗುವ ಪರಿಸ್ಥಿತಿ. ದೊಡ್ಡ ಹಿಡುವಳಿದಾರರಲ್ಲಿ ಕೆಲವರು ಇಂದಿನ ಆಧುನಿಕ ರೀತಿ ರಿವಾಜಿನಿಂದ , ಮನೆ, ವಾಹನ, ಚಿನ್ನ, ವೈಭವದ ಸಮಾರಂಭ ಎಂದು ಸಾಲದಲ್ಲೇ ಹೋಳಿಗೆ ತಿನ್ನುವವರಾಗಿದ್ದಾರೆ. ಅಂತೂ ಎಲ್ಲಿ ತನಕ ರೈತ ಬೆಳೆದ ಬೆಳೆಗೆ ಯೋಗ್ಯಧಾರಣೆ ಸಿಗುವುದಿಲ್ಲವೊ ಅಲ್ಲಿಯ ತನಕ ರೈತನ ಸ್ಥಿತಿ ಚಿಂತಾಜನಕ.
ಯಾವುದೇ ಕೈಗಾರಿಕೆ 30-40 ಶೇಕಡಾ ಕಮಿಷನ್ ಕೊಟ್ಟು, ವ್ಯವಹರಿಸಿ ಕೋಟಿಗಟ್ಟಲೆ ಲಾಭವೆನ್ನುವರು. ಜನರಿಗಾಗಿರುವ ಸಹಕಾರಿ ರಾಷ್ಟ್ರೀಕೃತ ಬ್ಯಾಂಕ್‌ಗಳು, ಇದೇ ಸಾಲಿನಲ್ಲಿವೆ. ಇನ್ನು ಸರಕಾರಿ ಉದ್ಯೋಗಸ್ತರು, ಇತರ ಕೆಲವು ಉದ್ಯೋಗದವರು ತಿಂಗಳ ಸಂಬಳ ರೈತನ ವಾರ್ಷಿಕ ಉತ್ಪನ್ನಕ್ಕಿಂತ ಮಿಗಿಲಾಗಿದೆ. ದೇಶದ ಕಲ್ಯಾಣಕ್ಕಾಗಿ ಸೊಂಟ ಕಟ್ಟಿದ ಕೆಲ ಜನಪ್ರಧಿಗಳ ಡೌಲು ಅವರ ಹಿಂಬಾಲಕರ ಅಧಿಕಾರಿಗಳ ಮರ್ಜಿ – ಇತ್ತ ಹೊಟ್ಟೆ ಕಟ್ಟಿ ಸೊಂಟ ಬಾಗಿಸಿ ದಿನದ ಹದಿನಾರು ಗಂಟೆಗೂ ಮಿಗಿಲಾಗಿ ದುಡಿಯುವ ರೈತಾಪಿ ಜನರ ಜೀವನ ವ್ಯವಸ್ಥೆ ಸುಧಾರಿಸಲು ಸಾಧ್ಯತೆ ತೀರಾ ಕಡಿಮೆಯಾಗಿ ತೋರುತ್ತದೆ. ಅವರ ಹೃದಯದ ಕಣ್ಣು ತೆರೆಸುವ ಕೆಲಸ ಆಗಬೇಕಾಗಿದೆ. ಪಂಚಾಯತಿನಿಂದ ಪಾರ್ಲಿಮೆಂಟ್ ತನಕ ತನ್ನ ಸುತ್ತಲಿನ ಜನರ ಜೀವನ ಮಟ್ಟ ಸುಧಾರಿಸುವರೊಂದಿಗೆ ಸಂಸ್ಕಾರವಂತರನ್ನಾಗಿ ಮಾಡುವ ಪಣತೊಟ್ಟು ಮುಂದೆ ಬರುವವರಿಗೆ ಆಡಳಿತೆಯಲ್ಲಿ ಆಸ್ಪದ ಕಲ್ಪಿಸುವಂತಾಗಬೇಕು. ಆಗ ಸುಖೀ ರಾಜ್ಯ ನನಸಾಗಬಹುದು.
ಮೂಢನಂಬಿಕೆಗಳು, ಆಡಂಬರದ ಜೀವನ, ಅದ್ದೂರಿ ಸಮಾರಂಭ, ಇನ್ನೊಬ್ಬರೊಂದಿಗೆ ಹೋಲಿಕೆಗಳು ಎಂತವರನ್ನು ಕೆಳಕ್ಕೆ ತಳ್ಳುವುದು. ಕೃಷಿಕರಂತೂ ಇದರಿಂದ ದೂರ ದೂರ ಇರಬೇಕು. ಬದುಕಿಗೆ ಎಂದೂ ಬೆನ್ನು ತೋರದೆ ಪರಮಾತ್ಮ ಸರ್ವಂತರ್ಯಾಮಿ, ನಮ್ಮಲ್ಲೂ ಅವನ ಶಕ್ತಿ ಇದೆ. ನಮ್ಮ ಒಳ್ಳೆ ಕಾರ್ಯದಲ್ಲಿ ಅವನ ಸಹಾಯ ಹಸ್ತ ಇದ್ದೇ ಇದೆ ಎಂಬ ವಿಶ್ವಾಸದಿಂದ ಎದುರಾದ ಜೀವನವನ್ನು ಸಂತೋಷದಿಂದ ಅನುಭವಿಸುವ ಧೈರ್ಯ ರೈತ ಪಡಕೊಂಡು, ಸಮಾಜದಲ್ಲಿ ರೈತರಲ್ಲಿ ಆತ್ಮಹತ್ಯೆ ಎಂಬುದಕ್ಕೆ ಇತಿಶ್ರೀ ಹಾಡಬೇಕಾಗಿದೆ.
ತಾನು ನಿರ್ವಹಿಸಿದ ಕೆಲಸದ ಸಮರ್ಥನೆ, ಕೆಲಸ ಕಾರ್ಯಗಳಲ್ಲಿ ನಿತ್ಯ ಜೀವನದಲ್ಲಿ ತ್ಯಾಗಕ್ಕೆ ಆದ್ಯತೆ ಕಳೆದ ಹೋದ ಕಾರ್ಯಕ್ಕೆ ಚಿಂತಿಸದೆ ಸಮರ್ಪಕ ದಾರಿಯಲ್ಲಿ ಮುನ್ನುಗ್ಗುವ ಛಲ, ತರ್ಕ ಬದ್ಧವಾದ ಆಧ್ಯಾತ್ಮಿಕತೆ ಮನೆಯಲ್ಲಿ ಇರಲಿ. ಅದಕ್ಕೆ ಪೂರಕವಾಗಿ ಸಮತೂಕದ ನಿರ್ವಹಕೆ ಜೀವನದಲ್ಲಿರಬೇಕು.
ಕುಟುಂಬದ ಸದಸ್ಯರು ಯೋಚಿಸಿದರೆ ಬೆಳವಣಿಗೆಗೆ ಪೂರಕವಾದ ಹಲವು ಕೆಲಸ ಕಾರ್ಯಗಳು ಕಂಡುಬರುವವು. ಒಬ್ಬೊಬ್ಬ ಒಂದೊಂದು, ಒಂದಕ್ಕೊಂದು ಸಹಕಾರ ಇರುವ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮನೆಯ ವಾತಾವರಣ ನೆಮ್ಮದಿಯಿಂದಿರಲು ಎಲ್ಲರ ಸಹಕಾರ ಅಗತ್ಯ. ಭೂಮಿಯಲ್ಲಿ ಲಭ್ಯವಾದ ಜೀವನ ಮಳೆಗಾಲದ ಶಾಂತ ಸಮೃದ್ದ ವಾತಾವರಣ, ಹರಿಯುವ ನೀರು ಬೀಸುವ ಗಾಳಿ ಪ್ರಕಾಶವಾದ ಬೆಳಕಿನೊಂದಿಗೆ ವಿಶಾಲವಾದ ಆಕಾಶ ಕಾರ್ಯದಲ್ಲಿ ಶಾಂತಿ ಸಮೃದ್ಧಿಯಲ್ಲಿ ಆತ್ಮ ಸಂತೋಷಯಲ್ಲಿ ಮುನ್ನಡೆಯಲು ರೈತನಿಗೆ – ಆಡಳಿತ ಸಹಕರಿಸಿದಲ್ಲಿ ಸಮೃದ್ಧ ರಾಷ್ಟ್ರ ಸಾಧ್ಯ
* ರೈತ ಅವಿಭಕ್ತ ಕುಟುಂಬದಿಂದ ಬೇರೆಯಾಗುವ ಸಂದರ್ಭ ಪ್ರತಿ ಹಿಸೆದಾರನಿಗೂ

* ತನ್ನದೇ ಮನೆಕಟ್ಟುವಾಗ

* ಮಕ್ಕಳ ವಿದ್ಯಾಭ್ಯಾಸಕ್ಕೆ

* ವಿವಾಹ ಇತರ ವಿಶೇಷ ಸಂದರ್ಭ

* ಪ್ರಾಕೃತಿಕ ಅವಘಡಕ್ಕೆ ತುತ್ತಾದಾಗ

ಈಗ ಚಾಲ್ತಿಯಲ್ಲಿರುವುದಕ್ಕಿಂತ ಹೆಚ್ಚಾಗಿ ರೈತನಿಗೆ ವಿಶೇಷ ಸಲಹೆ ಸೂಚನೆ ದೀಘಕಾಲಿಕ ಸಾಲ ಸೌಲಭ್ಯ ದೊರೆಯುವಂತೆ ವಿಶೇಷ ಘಟಕ ಪ್ರಾರಂಭಿಸಿ ಕಾರ್ಯಗತವಾಗಬೇಕು.
ಹದಿನಾಲ್ಕರಿಂದ ಇಪ್ಪತ್ತು ವರ್ಷದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶಾಲೆಯಲ್ಲಿ ಯಾ ಒಂದು ವಾರ ಇಲ್ಲವೇ ಹದಿನೈದು ದಿನದ ವಿಶೇಷ ತರಗತಿ ತೆರೆದು ಅವರ ಪ್ರಾಯ, ಯೌವನದ ಬಗ್ಗೆ ಅರಿವು ಮೂಡಿಸುವ ವ್ಯವಸ್ಥೆಯಾಗುವುದು ತೀರಾ ಅವಶ್ಯ ಇದೆ. ಈ ರೀತಿ ಕೃಷಿಕನ ರೈತಕುಟುಂಬದ ಏಳ್ಗೆ ರಾಷ್ಟ್ರಕಟ್ಟುವಲ್ಲಿ ಸಹಾಯಕವಾಗುವುದರಲ್ಲಿ ಸಂಶಯವಿಲ್ಲ
– ದಯಾನಂದ ಕೋಟೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.