HomePage_Banner
HomePage_Banner
HomePage_Banner
HomePage_Banner

ಕೃಷಿ ಇಲಾಖೆಯಿಂದ ಪವರ್ ವೀಡರ್ & ವೀಡರ್‌ನ್ನು (ಕಳೆ ಕೊಚ್ಚುವ ಯಂತ್ರ) ಪಡೆಯುವ ವಿಧಾನ

ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಅರ್ಜಿ ದಾರನು ಪೂರ್ಣವಿಳಾಸದೊಂದಿಗೆ ತುಂಬು ವುದು. ಆ ಅರ್ಜಿಯಲ್ಲಿ ಸರ್ವೆ ನಂಬರ್, ಜಾಗದ ವಿಸ್ತೀರ್ಣ ವನ್ನು ತುಂಬಿ, 1 ಫೋಟೊ, ಬ್ಯಾಂಕ್ ಅಕೌಂಟ್ ಪಾಸ್ ಪುಸ್ತಕದ ಜೆರಾಕ್ಸ್ (ರಾಷ್ಟ್ರೀಕೃತ ಬ್ಯಾಂಕ್), ಐ.ಡಿ. ಕಾರ್ಡ್ ಜೆರಾಕ್ಸ್, ಪಡಿತರ ಚೀಟಿ ಜೆರಾಕ್ಸ್‌ನ್ನು ಇಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರ ಶಿಫಾರಸು ಪತ್ರ ನೀಡಬೇಕು. ಪವರ್ ವೀಡರ್ ತಾಲೂಕು ಪಂಚಾಯತ್ ಸ್ಕೀಂ ಆಗಿದ್ದರೆ ತಾ.ಪಂ. ಸದಸ್ಯರ, ಜಿ.ಪಂ. ಸ್ಕೀಂ ಆಗಿದ್ದರೆ ಜಿ.ಪಂ. ಸದಸ್ಯರ ಶಿಫಾರಸು ಪತ್ರ ಕಡ್ಡಾಯ. ಬಳಿ ಇವೆಲ್ಲವನ್ನು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ನೀಡುವುದು. ಆ ಅರ್ಜಿ ಉಪ ಕೃಷಿ ನಿರ್ದೇಶಕರ ಮೂಲಕ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಮಂಜೂರಾತಿಗಾಗಿ ಕಳುಹಿಸಿಕೊಡಲಾಗುತ್ತದೆ. ಮಂಜೂ ರಾತಿ ಆದ ಬಳಿಕ ರೈತರ ಪಾಲಿನ ಹಣವನ್ನು ಬ್ಯಾಂಕ್‌ನಲ್ಲಿ ಯಾವ ಸಂಸ್ಥೆಯ ಪವರ್ ವೀಡರ್ ರೈತ ಪಡೆಯಲು ಇಚ್ಛಿಸುತ್ತಾನೋ ಆ ಸಂಸ್ಥೆಯ ಖಾತೆಗೆ ಜಮಾ ಮಾಡ ಬೇಕು. ಅಂದರೆ ಒಂದು ಪವರ್ ವೀಡರ್‌ನ ಬೆಲೆ ರೂ.25 ಸಾವಿರದ 130 ಆಗಿದ್ದರೆ, 13 ಸಾವಿರದ 350 ರೂವನ್ನು ರೈತ ಪಾವತಿ ಮಾಡಬೇಕು. ಉಳಿಕೆ ಹಣವನ್ನು ಇಲಾಖೆ ಯಿಂದ ಆ ಸಂಸ್ಥೆಗೆ ಪಾವತಿ ಮಾಡಲಾಗುತ್ತದೆ. ಈ ಪ್ರಕ್ರಿಯೆಗಳು ನಡೆದು ಸುಮಾರು 15 ದಿನಗಳ ಬಳಿಕ ಪವರ್ ವೀಡರ್ ಅರ್ಜಿದಾರರಿಗೆ ದೊರೆಯುತ್ತದೆ.
ಮಾಹಿತಿ : ಮೋಹನ್ ನಂಗಾರು., ಕೃಷಿ ಅಧಿಕಾರಿ, ಕೃಷಿ ರೈತ ಸಂಪರ್ಕ ಕೇಂದ್ರ ಸುಳ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.