HomePage_Banner
HomePage_Banner
HomePage_Banner

ಕಲಾಂಗೊಂದು ನುಡಿನಮನ

ಕಲಾಂ ಅಜರಾಮರ ದೇಶಕ್ಕೆ ಸಿಹಿ ಸಿಹಿ ಹಣ್ಣನ್ನು ಕೊಟ್ಟ ಹೆಮ್ಮರ
ಸಾವಿರಾರು ವರ್ಷ ಬಾಳಿದ ಮರ ತೊಲೆಯಾಗಿ ಬಿದ್ದಿತ್ತು, ನೂರಾರು ವರುಷ ನೂರಾರು ವರ್ಷ ಬಾಳಿದ ಅರಸ ಹೆಣವಾಗಿಯೂ ನಿಲ್ಲಲಿಲ್ಲ ಮೂರು ನಿಮಿಷ ಇದು ಸತ್ಯ ಮನುಷ್ಯ ಮಾಡಿದ ಸಾಧನೆಗಳು ಮಾತ್ರ ಅಜರಾಮರ. ಇಂದು ಭಾರತ ಕಂಡ ಅದಮ್ಯ ಚೇತನ ಡಾ| ಅವುಲು ಪಕೀರ್ ಜೈನುಲಾದ್ದೀನ್ ಅಬ್ದುಲ್ ಕಲಾಂ ನಮ್ಮ ಜೊತೆ ಇನ್ನಿಲ್ಲ . ಇಡೀ ಭಾರತ ದುಃಖದ ಕಡಲಿನಲ್ಲಿ ಮುಳುಗಿದೆ. ಕಲಾಂ ಮಾತಿನಂತೆ ವಿದ್ಯಾರ್ಥಿಗಳು, ಕೆಲಸಗಾರರು ಹೊಸ ಉತ್ಸಾಹ, ಹುರುಪಿನಿಂದ ಜೂನ್ 28 ರಂದು ಕಾರ್ಯನಿರ್ವಹಿಸಿದ್ದಾರೆ ಇವರೆಲ್ಲರಿಗೂ ನನ್ನ ಹೃದಯಪೂರ್ವಕ ವಂದನೆಗಳು.
ಒಬ್ಬ ಬಡ ಹುಡುಗ ಭಾರತದ ರಾಷ್ಟ್ರಪತಿಯಾಗುತ್ತಾನೆ ಎಂದು ಯಾರು ಕನಸು ಕಂಡಿರಲಿಲ್ಲ ಆದರೆ ಕಲಾಂ ಕಂಡಿದ್ದರು ಇದರಿಂದಾಗಿ ಸದಾಹೇಳುತ್ತಾರೆ, ಕನಸು ಕಾಣಬೇಕು ಕಂಡ ಕನಸು ನಿಮಗೆ ಚಿತ್ರಹಿಂಸೆ ಮಾಡಬೇಕು ನನಸಿನತ್ತ ಮುನ್ನಡೆ ಎಂದು.
ತಾತ ನಿಮ್ಮ ಕೇಶ ಶೈಲಿ ನನಗೆ ತುಂಬ ಇಷ್ಟ ಎಂದು ಒಂದು ಪುಟ್ಟ ಮಗು ಕಲಾಂ ನವರಲ್ಲಿ ಹೇಳಿದಾಗ ಕಲಾಂ ಮುಗುಳ್ನಕ್ಕರು ಆ ನಗು ನಮ್ಮ ತುಳುನಾಡಿನಲ್ಲಿ ಇಂದು ಸಹ ಚಿರಂಜೀವಿಯಾಗಿದೆ. ಗಾಂಧೀಜಿಗೂ ವಿರುದ್ಧ ಮಾತನಾಡುವ ವ್ಯಕ್ತಿಗಳು ಸಿಗಬಹುದು ಆದರೆ ಕಲಾಂ ವಿರುದ್ಧ ಮಾತನಾಡುವ ವ್ಯಕ್ತಿ ಸಿಗಲಾರರು.
ಆರಿದ ದೀಪ…. ಸದಾ ಜ್ಯೋತಿಯಾಗಿ ಬೆಳಗುತ್ತಾನೆ
ಈ ಮನೆ ಮನೆಯ ಭೂಪ…. ಎಲ್ಲರೂ ೭ ದಿನಗಳ ಕಾಲ ಸಲ್ಲಿಸಿ….. ಕಲಾಂಗೆ ಸಂತಾಪ
ಎಲ್ಲರೂ ಹುಟ್ಟುತ್ತಾ ತಮ್ಮೊಳಗೆ ದೈವಿಕ ಜ್ಯೋತಿಯನ್ನು ಹೊಂದಿರುತ್ತಾರೆ, ನಮ್ಮ ಪ್ರಯತ್ನಗಳೇ ಆ ಜ್ಯೋತಿಯನ್ನು ಉಜ್ವಲ ಗೊಳಿಸುತ್ತದೆ ಆ ಮೂಲಕ ಆ ಬೆಳಕು ವಿಶ್ವದಾದ್ಯಂತ ವ್ಯಾಪಿಸುತ್ತದೆ ಕಲಾಂ ಸತ್ಯವಾದ ಮಾತು ಕಲಾಂಸಲಾಂ
ಇನ್ನಿಲ್ಲ ಭಾರತದ ಕಣ್ಮಣಿ ….. ಭಾರತಾಂಬೆ ಕಳೆದುಕೊಂಡಿದ್ದಾಳೆ. ತನ್ನ ಒಂದು ಅಮೂಲ್ಯ ಮಣಿ….. ಭಾರತೀಯರಲ್ಲಿ ಬಿತ್ತಿದ್ದಾರೆ. ಸಾಧನೆಯೆಂಬ ಹನಿ….. ಆದರೂ ಅವರಿಲ್ಲ ಎಂದು ನೆನಪಿಸಿಕೊಂಡರೆ…. ಭಾರತೀಯರ ಕಣ್ಣಿನಲ್ಲಿ ಕಂಬನಿ…..

– ಜಗದೀಶ್, ಕನ್ನಡ ಶಿಕ್ಷಕರು, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್, ಬೆಳ್ಳಾರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.