ಎಲಿಮಲೆ: ಜ್ಞಾನದೇಗುಲದ ಮುಂದೆ ಕಂಗೊಳಿಸುತ್ತಿರುವ ಉದ್ಯಾನವನ

Advt_Headding_Middle
Advt_Headding_Middle

ಬಂಟಮಲೆಯ ಹಸಿರು ಸಿರಿಯ ತಟದಲ್ಲಿ ಇರುವ ಎಲಿಮಲೆ ಪ್ರೌಢಶಾಲೆ ಅನೇಕ ಒಳ್ಳೆಯ ಕಾರಣಗಳಿಗಾಗಿ ಸದಾ ಸುದ್ದಿ ಮಾಡುತ್ತಿದೆ.
ಈ ಬಾರಿ ಇದು ಪ್ರಸಿದ್ಧಿಯಾಗಿರುವುದು ಅಲ್ಲಿ ಅನಾವರಣಗೊಂಡಿರುವ ಅಪೂರ್ವ ಉದ್ಯಾನವನದ ಕಾರಣಕ್ಕಾಗಿ. ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಇಂದಿನ ಕಾಲಘಟ್ಟದಲ್ಲಿ ಶಾಲೆಯನ್ನು ಪ್ರೇಕ್ಷಣೀಯ ತಾಣವನ್ನಾಗಿಸಿದ ಕೀರ್ತಿ ಈ ಭಾಗದ ಜನರದ್ದು. ಪ್ರಾಣಿ, ಪಕ್ಷಿ ಸಂಕುಲಗಳನ್ನು ಕೇವಲ ಚಿತ್ರದಲ್ಲಿ ಮಾತ್ರ ನೋಡಿ ಪರಿಚಯಿಸಿಕೊಳ್ಳಬೇಕಾದ ಇಂದಿನ ದಿನಗಳಲ್ಲಿ ಶಾಲೆಯ ಎದುರು ಭಾಗದಲ್ಲಿ ಅದರ ಪ್ರತಿಮೆಯನ್ನು ಅನಾವರಣಗೊಳಿಸಿದ್ದು, ಇಲ್ಲಿನ ಹೆಮ್ಮೆ. ಒಟ್ಟಿನಲ್ಲಿ ಸುಂದರ ಹೂದೋಟ ಪ್ರಾಣಿ ಪಕ್ಷಿಗಳ ಪ್ರತಿಮೆ, ಹಸಿರು ಹುಲ್ಲು ಈ ಉದ್ಯಾನವನವನ್ನು ಆಕರ್ಷಣೀಯಗೊಳಿಸಿದೆ. ದೇವಚಳ್ಳ ಗ್ರಾಮ ಪಂಚಾಯತ್‌ನ ಅಷ್ಟೂ ಮಂದಿ ಸದಸ್ಯರು ಒಂದೊಂದು ಶಾಲೆಯನ್ನು ಉಸ್ತುವಾರಿ ತೆಗೆದುಕೊಂಡು ಅದರ ಅಭಿವೃದ್ಧಿಗಾಗಿ ನಿಗಾ ವಹಿಸಿದ್ದಾರೆ. ಈ ಶಾಲೆಯ ಉಸ್ತುವಾರಿ ಹೊತ್ತಿರುವ ಶೈಲೇಶ್ ಅಂಬೆಕಲ್ಲು ಇಂತಹದೊಂದು ಯೋಜನೆ ಹಾಕಿಕೊಂಡು ಮುಂದುವರಿದಾಗ ಅದಕ್ಕೆ ಬೆಂಬಲವೂ ಸಿಕ್ಕಿತು. ಹಲವು ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದ ಸತ್ಯಶಂಕರರವರು ಶಾಲೆಯ ಎದುರುಗಡೆ ಜಿರಾಫೆ ಪ್ರತಿಮೆಯೊಂದನ್ನು ನಿರ್ಮಿಸಿ ಸುದ್ದಿ ಮಾಡಿದ್ದರು. ಈ ಜಿರಾಫೆ ಹೊಸ ಯೋಜನೆಗೂ ಅಡಿಪಾಯವಾಯಿತು. ಅದರಿಂದ ಬೆಳೆದು ಈಗ ಉದ್ಯಾನವನ ಹಾಗೂ ಪ್ರಾಣಿ, ಪಕ್ಷಿಗಳ ಪ್ರತಿಮೆ ನಿರ್ಮಾಣವಾಗಿದ್ದು, ಸತ್ಯಶಂಕರರು ಈಗ ಎಲಿಮಲೆಯಲ್ಲಿ ಇಲ್ಲದಿದ್ದರೂ ದೂರದಿಂದ ಬಂದು ಇದನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಶಾಲೆಗೆ ಹೋಗುವಾಗ ಬಲ ಬದಿ ಬೃಹತ್ ಆನೆಯ ಪ್ರತಿಮೆ ಇದೆ. ಇದನ್ನು ಭಾರತೀಯ ಜೀವ ವಿಮಾ ಪ್ರತಿನಿಧಿ ಕೇಶವ ಕಾಯರ ಮತ್ತು ಮನೆಯವರು ಕೊಡುಗೆಯಾಗಿ ನೀಡಿದ್ದಾರೆ. ಈ ಹಿಂದೆ ಇದ್ದ ಜಿರಾಫೆಯ ಅಭಿವೃದ್ಧಿ ವೆಚ್ಚವನ್ನು ಶಾಲಾ ಹಿರಿಯ ವಿದ್ಯಾರ್ಥಿ ಸಂಘದವರು ಬರಿಸಿದ್ದಾರೆ. ಹುರುಳಿಯಡ್ಕ ಶಿವಾಜಿ ಫ್ರೆಂಡ್ಸ್ ಕ್ಲಬ್ ಹುಲಿಯ ವೆಚ್ಚ ಭರಿಸಿದೆ. ಶಿಕ್ಷಕರಾದ ವಸಂತ ನಾಯಕ್, ಶಿಕ್ಷಕಿ ಪ್ರವೀಣಕುಮಾರಿ ಹಾಗೂ ಮಕ್ಕಳು ಜಿಂಕೆಯನ್ನು ಕೊಡುಗೆಯಾಗಿ ನೀಡಿದ್ದು, ರಮಾನಂದ ಹೊಸತೋಟ ನವಿಲಿನ ವೆಚ್ಚ ಭರಿಸಿದ್ದಾರೆ. ಹರ್ಷ ಬದಿಯಡ್ಕ ದನ ಹಾಗು ಕರುವಿನ ಪ್ರತಿಮೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಐ.ಕೆ.ಮಹಮ್ಮದ್ ಇಕ್ಬಾಲ್ ಎಲಿಮಲೆ ದನ ಹಾಗೂ ಕೊಕ್ಕರೆ, ವಿ.ಸೋಮಶೇಖರ ವಾಲ್ತಾಜೆ ಮತ್ತು ಎ.ವಿ.ಚಿದಾನಂದ ಮೊಲ ಮತ್ತು ಅಣಬೆಯನ್ನು ನೀಡಿದ್ದಾರೆ. ಸಹಶಿಕ್ಷಕ ಸುಂದರ್ ಕೆ. ಕೊಳ ಮತ್ತು ಅಣಬೆ, ರೂಪಾನಂದ ಚಳ್ಳ ಮತ್ತು ಮನೆಯವರು ಕಪ್ಪೆ ಹಾಗೂ ಆಮೆ, ಮೆಟ್ಟಿನಡ್ಕ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಸುಧೀರ್ ಅಮೆ ಅಣಬೆಯನ್ನು, ವಿಶ್ವನಾಥ ಕಾಡುಜಬಳೆ ಮತ್ತು ಶ್ರೀನಿಧಿ ಕೊಳ್ದಮಜಲು ಕೊಡೆಯಾಕಾರ ಡಿಶ್‌ಗಳನ್ನು ಈ ಉದ್ಯಾನವನಕ್ಕೆ ನೀಡು ಅಂದವನ್ನು ಹೆಚ್ಚಿಸಿದ್ದಾರೆ.
ತಳೂರು ಮೆತ್ತಡ್ಕ ಸ್ನೇಹ ಯುವ ಬಳಗ ಮತ್ತು ಸೌರಭ ಯುವತಿ ಮಂಡಲ, ಉಬರಡ್ಕ ಮಿತ್ತೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್‌ಕುಮಾರ್ ಚಿಲ್ಪಾರ್, ಮಾವಿನಕಟ್ಟೆ ವಿಷ್ಣು ಯುವಕ ಮಂಡಲ, ಶ್ರೀಮತಿ ಶಶಿಕಲಾ ದೇರಪ್ಪಜನಮನೆ, ಶ್ರೀಮತಿ ಧರ್ಮಾವತಿ ಮುಂಡೋಡಿ, ರಾಜಗೋಪಾಲ ಅಂಬೆಕಲ್ಲು, ದತ್ತ ಕುಳ್ಳಂಪಾಡಿ, ಮೈತ್ರಿ ಯುವತಿ ಮಂಡಲ ಎಲಿಮಲೆ, ವಿಶ್ವನಾಥ ನಂದಗೋಕುಲ, ಎಸ್.ಡಿ.ಎಂ.ಸಿ. ಸದಸ್ಯೆ ಶ್ರೀಮತಿ ಪೂವಮ್ಮ ತಳೂರು, ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ದಿವಾಕರ ಮುಂಡೋಡಿ ಕೊಕ್ಕರೆಗಳನ್ನು ನೀಡಿದ್ದಾರೆ.

elimale-udyanavana (4) elimale-udyanavana (5)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.