ಕೇನ್ಯ : ಮುಕ್ತ ಕಬಡ್ಡಿ ಮುಕ್ತ ತ್ರೋಬಲ್ ಪಂದ್ಯಾಟ

Advt_Headding_Middle

ಹಿಂದೆ ಪಂದ್ಯಾಟಗಳಿಗೆ ಈಗಿನ ಹಾಗೆ ನಗದು ಬಹುಮಾನಗಳು ಇರಲಿಲ್ಲ .ಕೇವಲ ಶೀಲ್ಡಿಗಾಗಿ ಜಿಲ್ಲೆ-ರಾಜ್ಯದಾದ್ಯಂತ ಸಮಯಕ್ಕೆ ಸರಿಯಾಗಿ ತಲುಪಿ ಆಟವಾಡುತ್ತಿದ್ದೆವು.ಆದರೆ ಈಗ ಸಂಘಟಕರು ಬಹಳಷ್ಟು ಶ್ರಮ ಪಟ್ಟು ಉತ್ತಮ ಕ್ರೀಡಾಂಗಣ-ಬಹುಮಾನಗಳನ್ನು ನೀಡುತ್ತಾರೆ ಆದರೂ ತಂಡಗಳು ಸಮಯಕ್ಕೆ ಸರಿಯಾಗಿ ತಲುಪುತ್ತಿಲ್ಲ-ಶಿಸ್ತುಗಳನ್ನು ಪಾಲಿಸುತ್ತಿಲ್ಲ. ಸಂಘಟಕರ ಪರಿಶ್ರಮಕ್ಕೆ ಬೆಲೆ ಕೊಡದೆ, ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳ ಪಂದ್ಯಾಟಗಳ ಆಯೋಜನೆ ಕುಸಿತ ಗೊಂಡು ಅದರ ನಷ್ಟ ಕ್ರೀಡಾಪಟುಗಳಿಗೆ ಆಗುವುದು. ಆದ್ದರಿಂದ ಕ್ರೀಡಾಳುಗಳ ಸಹಕಾರ ಅತೀ ಅಗತ್ಯ.ಎಂದು ದ.ಕ.ಜಿಲ್ಲಾ ವಾಲಿಬಾಲ್ ಅಸೋಶಿಯೇಶನ್ ಪ್ರಧಾನ ಕಾರ್‍ಯದರ್ಶಿ ಜಯಪ್ರಕಾಶ್ ರೈ ಹೇಳಿದರು. ಅವರು ಜ.೩.ರಂದು ಕೇನ್ಯ ಶಾಲಾ ವಠಾರದಲ್ಲಿ ಫ್ರೆಂಡ್ಸ್ ಕ್ಲಬ್ ಕೇನ್ಯ ,ಅಮೆಚೂರು ಕಬಡ್ಡಿ ಅಸೋಶಿಯೇಶನ್ ಇದರ ಜಂಟಿ ಆಶ್ರಯದಲ್ಲಿ ಪುರುಷರ ೬೦ ಕೆ.ಜಿ.ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟ ಮತ್ತು ಸ್ನೇಹಿತೆಯರ ಕೂಟ ಕೇನ್ಯ ಇವರ ಸಹಯೋಗದೊಂದಿಗೆ ಜರುಗಿದ ಮಹಿಳೆಯರ ಮುಕ್ತ ತ್ರೋಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಸಭಾಧ್ಯಕ್ಷತೆಯನ್ನು ಬಳ್ಪ ಗ್ರಾ.ಪಂ.ಅಧ್ಯಕ್ಷ ಪ್ರಕಾಶ್ ಮುಡ್ನೂರು ವಹಿಸಿದ್ದರು. ಅತಿಥಿಗಳಾಗಿ ಕೃಷಿ ಪ್ರಶಸ್ತಿ ವಿಜೇತೆ ಇಂದಿರಾ ಜೆ.ರೈ ಕೇನ್ಯ, ಸುಳ್ಯ ಕ್ರೀಡಾ ಇಲಾಖೆ ಯುವಸಬಲೀಕರಣ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ನೇಮಿರಾಜ್ ಪಲ್ಲೋಡಿ, ಕೇನ್ಯ ಎಸ್ ಡಿ ಎಂ ಸಿ ಅಧ್ಯಕ್ಷೆ ಜ್ಯೋತಿ ಎನ್ ಶೆಟ್ಟಿ ಹಾಗೂ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ದೇವಿಪ್ರಸಾದ್ ರೈ ಗೆಜ್ಜೆ, ಸ್ನೇಹಿತೆಯರ ಕೂಟ ಅಧ್ಯಕ್ಷೆ ವನಜಾ ಎಸ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್‍ಯಕ್ರಮದಲ್ಲಿ ಕೇನ್ಯ ಶಾಲಾ ಮುಖ್ಯ ಶಿಕ್ಷಕಿ ರೇವತಿ ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ರೈ ಬಿರ್ಕಿ ಸ್ವಾಗತಿಸಿದರು. ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ದೇವಿಪ್ರಸಾದ್ ರೈ ಗೆಜ್ಜೆ ಪ್ರಸ್ತಾವನೆ ಗೈದರು. ಬಳ್ಪ ಗ್ರಾ.ಪಂ.ಸದಸ್ಯ ವಿನೋದ್ ಬೊಳ್ಮಲೆ ನಿರೂಪಿಸಿದರು. ವಿನ್ಯಾಸ್ ರೈ ಕೇನ್ಯ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.