ಬಡವರ ಬದುಕಲ್ಲಿ ರಾಜಕೀಯದ ಆಟ ಇದುವೇ ರಹದಾರಿಯ ಮುನ್ನೋಟ

Advt_Headding_Middle
Advt_Headding_Middle


ಚಿತ್ರ ನಿರ್ಮಾಣ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಕುತೂಹಲ ಕೆರಳಿಸುವ ಕ್ಷೇತ್ರ. ಕಳೆದ ಕೆಲವು ವರ್ಷಗಳಿಂದ ಕಿರುಚಿತ್ರಗಳ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಭವಿಷ್ಯದಲ್ಲಿ ಚಲನಚಿತ್ರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಪ್ರತಿಯೊಬ್ಬನಿಗೂ ಕಿರುಚಿತ್ರದ ಅನುಭವ ಬಹಳಷ್ಟು ಸಹಕಾರಿಯಾಗುತ್ತದೆ. ಒಂದೊಳ್ಳೆ ಕಥೆಯನ್ನು ಕೆಲವು ನಿಮಿಷಗಳಲ್ಲಿ ಪರಿಣಾಮಕಾರಿಯಾಗಿ ಪ್ರೇಕ್ಷಕನಿಗೆ ತಲುಪಿಸುವುದು ನಿರ್ದೇಶಕರಿಗೆ ಸವಾಲೇ ಸರಿ. ಈ ನಿಟ್ಟಿನಲ್ಲಿ ಮೂಡಿಬರುತ್ತಿರುವ ಕಿರು ಚಿತ್ರವೇ ರಹದಾರಿ.
‘ ಸಿಸ್ಟಮ್ ಎರರ್ ‘ ಎನ್ನುವ ಉಪಶೀರ್ಷೀಕೆಯೊಂದಿಗೆ ಮೂಡಿಬರುತ್ತಿರುವ ರಹದಾರಿ ಕಿರುಚಿತ್ರವು ಎಂಡೋಸಲ್ಫಾನ್ ಪೀಡಿತರ ಕುರಿತು ಬೆಳಕು ಚೆಲ್ಲಲಿದೆ. ಪ್ರಸ್ತುತ ರಾಜಕೀಯದಿಂದ ಬಡವರ, ಯುವಕರ ಮೇಲಾಗುವ ಪರಿಣಾಮ ಹಾಗೂ ಯುವಸಮುದಾಯ ಯಾವ ರೀತಿ ಬದಲಾವಣೆ ಹೊಂದುತ್ತದೆ ಎನ್ನುವುದು ಚಿತ್ರದ ಕಥಾ ಹಂದರ. ಈ ಕಿರುಚಿತ್ರವನ್ನು ಪುತ್ತೂರಿನ ರೈಲ್ವೇ ನಿಲ್ದಾಣ, ಮಂಗಳೂರು ಬಂದರು, ಕಾಸರಗೋಡು ಮುಂತಾದ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ.
ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳ ನಿರ್ಮಾಣದ ಈ ಕಿರುಚಿತ್ರವು ಸುಮಾರು ಒಂದು ಲಕ್ಷ ರೂ. ವೆಚ್ಚದಲ್ಲಿ ತಯಾರಾಗುತ್ತಿದೆ. ಕನ್ನಡ ಚಿತ್ರರಂಗದ ಹಲವು ನಿರ್ದೇಶಕರು ಸಲಹೆ, ಸಹಕಾರ ನೀಡಿದ್ದಾರೆ.

Rahadari copy
ಪ್ರವೀಣ್ ರಾಜ್ ಯಾದವ್ ನಾಯಕನಾಗಿ ನಟಿಸುವುದರೊಂದಿಗೆ ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಡಾ. ಶ್ರೀಧರ್ ಹೆಚ್. ಜಿ, ರಾಕೇಶ್ ಕುಮಾರ್ ಕಮ್ಮಾಜೆ, ಗಣೇಶ್ ಪ್ರಸಾದ್, ಜೇಕಬ್ ಸುನಿಲ್, ಭಾರವಿ, ಕಾರ್ತಿಕ್, ಸೃಜನ್, ಜಯಶಂಕರ್ ಹಾಗೂ ಮೂವತ್ತಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ. ಛಾಯಾಗ್ರಹಣದಲ್ಲಿ ಜೇಕಬ್ ಸುನಿಲ್ ಹಾಗೂ ಕೌಶಿಕ್ ಕೆ. ಎಸ್. ಸಹಕರಿಸಿದ್ದಾರೆ.
ರಹದಾರಿ ಕಿರುಚಿತ್ರದ ಚಿತ್ರೀಕರಣ ಅರ್ಧದಷ್ಟು ಮುಕ್ತಾಯವಾಗಿದೆ. ಕೆಲದಿನಗಳ ಹಿಂದಷ್ಟೇ ಟೀಸರ್ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಶೀಘ್ರದಲ್ಲೇ ಚಿತ್ರೀಕರಣ ಪೂರ್ಣಗೊಳಿಸಿ ಆಗಸ್ಟ್ ವೇಳೆಗೆ ಚಿತ್ರ ಬಿಡುಗಡೆಯಾಗಲಿದೆ.

 

 

ಕೌಶಿಕ್ ಕೆ. ಎಸ್.
ತೃತೀಯ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜು, ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.