ಬರಕ್ಕೆ ಸೆಡ್ಡು ಹೊಡೆದ ಮರ್ಕಂಜದ ರೈತರು: ಸಾಮೂಹಿಕ ನೀರಾವರಿ ಮೂಲಕ ಸಾಂಘಿಕ ಯತ್ನ

Advt_Headding_Middle
Advt_Headding_Middle
Advt_Headding_Middle

ಮುಂಗಾರು ಪೂರ್ವ ಮಳೆ ಕೈಕೊಟ್ಟದ್ದರಿಂದ ಎಲ್ಲೆಡೆ ಬರದ ವಾತಾವರಣವಿತ್ತು. ಹಲವೆಡೆ ಕುಡಿಯುವ ನೀರಿಗೂ ತತ್ವಾರವಿತ್ತು. ಈ ದಿನಗಳಲ್ಲಿ ಮರ್ಕಂಜದ ರೈತರು ಸಾಮೂಹಿಕ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡು ತಕ್ಕಮಟ್ಟಿನ ಪರಿಹಾರವನ್ನು ಕಂಡುಕೊಂಡು ಸೈ ಎನಿಸಿಕೊಂಡಿದ್ದರು.
ಮರ್ಕಂಜ ಗ್ರಾಮದ ತೇರ್ಥಮಜಲು ಸಮೀಪ ದೋಳ, ಕಾಯರ, ಕುಲ್ಮಡ್ಕ ಪ್ರದೇಶಗಳ ರೈತರು ಒಟ್ಟಾಗಿ ಕಿಂಡಿ ಅಣೆಕಟ್ಟೆಯಿಂದ ಸಾಮೂಹಿಕ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ನೀರಾವರಿ ಇಲಾಖೆಯ ವತಿಯಿಂದ ಕಾಯರ ಎಂಬಲ್ಲಿ ಕೆಲವು ವರ್ಷಗಳ ಹಿಂದೆ ಕಿಂಡಿ ಅಣೆಕಟ್ಟೆ ನಿರ್ಮಾಣವಾಗಿದ್ದು, ನದಿ ಪಾತ್ರದ ಜನರು ಮಾತ್ರ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದರು. ಅಣೆಕಟ್ಟೆಯಲ್ಲಿ ಸಾಕಷ್ಟು ನೀರಿದ್ದರೂ ದೂರದ ರೈತರು ನೀರಿಗಾಗಿ ಪರಿತಪಿಸುತ್ತಿದ್ದರು. ಊರಿನ ಹಿರಿಯರಾದ ಶಂಕರನಾರಾಯಣ ಶಾಸ್ತ್ರಿ ದೋಳ ಮುಂದಾಳತ್ವದಲ್ಲಿ 15 ಸಣ್ಣ ರೈತರು ಒಟ್ಟಾಗಿ ಸಾಮೂಹಿಕ ನೆಲೆಯಲ್ಲಿ 8 ಎಚ್‌ಪಿ ಡೀಸೆಲ್ ಪಂಪು ಖರೀದಿಸಿ ಎರಡೂವರೆ ಇಂಚಿನ 12೦ ಲೆನ್ತ್ ಪಿವಿಸಿ ಪೈಪ್ ಖರೀದಿಸಿ ತಮ್ಮ ತೋಟಕ್ಕೆ ಅಳವಡಿಸಿದ್ದಾರೆ. ಪಂಪಿಗೆ ಶೆಡ್ ವ್ಯವಸ್ಥೆಯನ್ನೂ ಮಾಡಿದ್ದಾರೆ.
ಒಂದೇ ದಿನದಲ್ಲಿ ಒಂದೂವರೆ ಲಕ್ಷ ರೂಪಾಯಿ ವೆಚ್ಚ ಮಾಡಿ ಸುಮಾರು 72೦ ಮೀಟರ್ ಉದ್ದದ ಪೈಪ್‌ಲೈನ್ ಅಳವಡಿಸಿ ತೋಟಕ್ಕೆ ಪರ್ಯಾಯ ನೀರಾವರಿಯನ್ನು ಮಾಡಿಕೊಂಡಿದ್ದಾರೆ. ಒಣಗುತ್ತಿರುವ ತೋಟವನ್ನು ತಾತ್ಕಾಲಿಕವಾಗಿ ಉಳಿಸಿದ ಸಮಾಧಾನ ಅವರಲ್ಲಿದೆ. ಎಲ್ಲರೂ ಸಣ್ಣ ರೈತರೇ ಅದರಲ್ಲೂ ಹಲವು ತೋಟಗಳು ಹಳದಿ ಎಲೆ ರೋಗಕ್ಕೆ ತುತ್ತಾಗಿದೆ. ಹೀಗಿದ್ದರೂ ಸಾಮೂಹಿಕ ಕಾರ್ಯದಲ್ಲಿ ಯಶಸ್ಸನ್ನು ಕಂಡಿದ್ದಾರೆ. ಗಂಟೆಗಳ ಲೆಕ್ಕದಲ್ಲಿ ನೀರಾವರಿ, ಅವರ ತೋಟದಲ್ಲಿ ಹಾದು ಹೋಗುವ ಪೈಪಿನ ಖರ್ಚನ್ನು ಅವರವರೇ ಭರಿಸಬೇಕು ಇದು ನಿಯಮ. ಅಣೆಕಟ್ಟೆಗೆ ಹಲಗೆ ಅಳವಡಿಸುವಾಗ ಮಧ್ಯದಲ್ಲಿ ಮಣ್ಣನ್ನು ಹಾಕಿದ್ದು, ಸ್ವಲ್ಪ ಪ್ರಮಾಣದ ನೀರು ಕೆಳಗೆ ಹರಿದು ಹೋಗುತ್ತಿದೆ. ಮುಂದಿನ ವರ್ಷ ಹಲಗೆಗಳ ಮಧ್ಯೆ ಪ್ಲಾಸ್ಟಿಕ್ ಶೀಟ್ ಅಳವಡಿಸಿ ಮಣ್ಣು ಹಾಕುವ ವ್ಯವಸ್ಥೆ ಮಾಡುವುದಾಗಿ ಶಂಕರನಾರಾಯಣ ಶಾಸ್ತ್ರಿ ತಿಳಿಸಿದ್ದಾರೆ.
ಮೋನಪ್ಪ ಗೌಡ, ಗಂಗಾಧರ ಗೌಡ, ಬೆಳ್ಯಪ್ಪ ಗೌಡ, ಉತ್ತಯ್ಯ ಗೌಡ, ಶಂಕರನಾರಾಯಣ ಶಾಸ್ತ್ರಿ, ಪದ್ಮಯ್ಯ ಗೌಡ, ಸೋಮಶೇಖರ ಗೌಡ, ಜಗನ್ನಾಥ ಗೌಡ, ಸೋಮಯ್ಯ ಗೌಡ, ಶೇಷಮ್ಮ ಈ ಯೋಜನೆಯ ಫಲಾನುಭವಿಗಳು.
ಕೆಲವರು ತಮ್ಮ ಹಳೆಯ ಪೈಪ್‌ಪೈನ್‌ಗೆ ಹೊಸ ಪೈಪ್‌ನ್ನು ಜೋಡಿಸಿದ್ದಾರೆ. ಇನ್ನು ಕೆಲವರು ತಮ್ಮ ಕೆರೆಗೆ ನೀರನ್ನು ತುಂಬಿಸಿ ಬಳಿಕ ಅಲ್ಲಿಂದ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಸರಕಾರದ ಯಾವುದೇ ನೆರವು ಇಲ್ಲದೇ ಹೋದರೂ ಆಪತ್ಕಾಲದಲ್ಲಿ ರೈತರು ಸ್ವಯಂ ಆಗಿ ಅಳವಡಿಸಿಕೊಂಡ ಸಾಮೂಹಿಕ ನೀರಾವರಿ ಯೋಜನೆ ಇಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಇತರ ಕೃಷಿಕರಿಗೂ ಇದು ಮಾದರಿಯಾಗಿದೆ.

ಈ ಕುರಿತಾದ ಸುದ್ದಿ ಚಾನೆಲ್ ವರದಿಗಾಗಿ ಇಲ್ಲಿ click ಮಾಡಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.