ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾಗುವ ಸಿ.ಇ.ಟಿ. 2016 ರ ಆನ್ಲೈನ್ ಸೀಟು ಹಂಚಿಕೆ ಮತ್ತು ಅರ್ಹ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನಾ ಕಾರ್ಯಕ್ಕಾಗಿ ರಾಜ್ಯದಲ್ಲಿ ಒಟ್ಟು 14 ಸಿ.ಇ.ಟಿ.ಸಹಾಯಕ ಕೇಂದ್ರಗಳನ್ನು ಸ್ಥಾಪಿಸಿದ್ದು, ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕೇಂದ್ರವನ್ನು ಸ್ಥಾಪಿಸಲಾಗಿದೆ. ಸಹಾಯಕೇಂದ್ರದ ಮುಖ್ಯ ನೋಡಲ್ ಅಧಿಕಾರಿಯಾಗಿ ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸರಸ್ವತಿ ಬಿ. ಹಾಗೂ ಸಹ ನೋಡಲ್ ಅಧಿಕಾರಿಯಾಗಿ, ಸಚೇತ್ ಸುವರ್ಣ, ಉಪನ್ಯಾಸಕರು ಸರಕಾರಿ ಪದವಿ ಪೂರ್ವ ಕಾಲೇಜು ಕಾವೂರು ಇವರನ್ನು ನೇಮಿಕೊಳ್ಳಲಾಗಿದೆ. ಜೂ. 3ರಿಂದ ಅಭ್ಯರ್ಥಿಗಳ ರ್ಯಾಂಕಿಂಗ್ಗೆ ಅನುಗುಣವಾಗಿ ಮೂಲ ದಾಖಲೆಗಳ ಪರಿಶೀಲನಾ ಕಾರ್ಯ ನಡೆಯಲಿದ್ದು, ಪರಿಶೀಲನಾ ಕಾರ್ಯಕ್ಕಾಗಿ 8 ಕೌಂಟರ್ಗಳನ್ನು ತೆರೆಯಲಾಗಿದೆ. 8 ಮಂದಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರನ್ನು ದಾಖಲೆಗಳ ಪರಿಶೀಲನಾಧಿಕಾರಿಯಾಗಿ ನೇಮಿಸಿಕೊಳ್ಳಲಾಗಿದೆ. ಡಾಟಾ ಎಂಟ್ರಿ ಕಾರ್ಯಕ್ಕಾಗಿ 10 ಕಂಪ್ಯೂಟರ್ ಆಪರೇಟರ್ಗಳನ್ನು ನೇಮಿಸಿಕೊಳ್ಳಲಾಗಿದೆ. ಹಾಗೂ ಓರ್ವ ಕಂಪ್ಯೂಟರ್ ನೆಟ್ವರ್ಕ್ ಇಂಜಿನಿಯರ್ ಮತ್ತು ಓರ್ವ ಸಾಫ್ಟ್ವೇರ್ ಇಂಜಿನೀಯರ್ರನ್ನು ಕೂಡ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ. ಒಟ್ಟು ಸುಮಾರು 6000ಕ್ಕಿಂತಲೂ ಹೆಚ್ಚಿನ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನಾ ಕಾರ್ಯದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಅಭ್ಯರ್ಥಿಗಳು ಕೆಳಕಂಡ ಮೂಲ ದಾಖಲೆಗಳು ಹಾಗೂ ಗಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿದ (ಅಟೆಸ್ಟ್ ಮಾಡಲ್ಪಟ್ಟ) ಒಂದು ಜೆರಾಕ್ಸ್ ಪ್ರತಿಗಳ ಸೆಟ್ನೊಂದಿಗೆ ಸಹಾಯಕ ಕೇಂದ್ರದಲ್ಲಿ ದಾಖಲಾತಿ ಕಾರ್ಯದಲ್ಲಿ ಭಾಗವಹಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಬೇಕಾಗಿರುವ ಮೂಲ ದಾಖಲೆಗಳು
*ಸಿ.ಇ.ಟಿ ಆನ್ಲೈನ್ ಅಪ್ಲಿಕೇಶನ್ ಪ್ರತಿ *ಸಿ.ಇ.ಟಿ ಪ್ರವೇಶ ಪತ್ರ
*ಎಸ್.ಎಸ್.ಎಲ್.ಸಿ ಅಂಕ ಪಟ್ಟಿ *ಪಿ.ಯು.ಸಿ.ಪ್ರೊವಿಷನಲ್ ಅಂಕ ಪಟ್ಟಿ
*ಜಾತಿ /ಆದಾಯ ಪ್ರಮಾಣ ಪತ್ರ (ಮೀಸಲಾತಿ ಬಯಸಿದ್ದಲ್ಲಿ)
*10 ವರ್ಷಗಳ ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ (ಮೀಸಲಾತಿ ಬಯಸಿದ್ದಲ್ಲಿ)