Homeಡಿ. 3ರಂದು ಉಪ್ಪಿನಂಗಡಿಯಲ್ಲಿ "ಇಂಡಿಯಾ 1 ಎಟಿಎಂ" ಲೋಕಾರ್ಪಣೆ

ಡಿ. 3ರಂದು ಉಪ್ಪಿನಂಗಡಿಯಲ್ಲಿ “ಇಂಡಿಯಾ 1 ಎಟಿಎಂ” ಲೋಕಾರ್ಪಣೆ

ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣ ಸಮೀಪದಲ್ಲಿರುವ ಅಟೋ ರಿಕ್ಷಾ ತಂಗುದಾಣದ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಉಚಿತ ಸೇವೆಯ “ಇಂಡಿಯಾ 1 ಎಟಿಎಂ” ಡಿ. 3ರಂದು ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸ್ಥೆಯ ಕಾರ್‍ಯನಿರ್ವಾಹಕ, ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರೂ ಆಗಿರುವ ಪ್ರಶಾಂತ್ ಡಿ’ಕೋಸ್ತ ತಿಳಿಸಿದ್ದಾರೆ.


ನೂತನ ಎಟಿಎಂ ವ್ಯವಸ್ಥೆಯನ್ನು ಉಪ್ಪಿನಂಗಡಿಯ ಹಿರಿಯ ವೈದ್ಯ ಡಾ. ಎಂ.ಆರ್. ಶೆಣೈ ಉದ್ಘಾಟಿಸಲಿದ್ದಾರೆ. ಪುತ್ತೂರು ಬನ್ನೂರಿನ ಚರ್ಚ್‌ನ ಧರ್ಮಗುರು ಫಾ| ಪ್ರಶಾಂತ್ ಫೆರ್ನಾಂಡಿಸ್ ಆಶೀರ್ವಚನ ನೀಡಲಿದ್ದಾರೆ. ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಉಷಾ ಚಂದ್ರ ಮುಳಿಯ ಪ್ರಥಮ ಹಣ ನಗದೀಕರಣ ಮಾಡಲಿದ್ದಾರೆ. ಕಾರ್‍ಯಕ್ರಮದಲ್ಲಿ “ಇಂಡಿಯಾ 1 ಎಟಿಎಂ” ಸಂಸ್ಥೆಯ ಕರ್ನಾಟಕ ವಲಯ ವ್ಯವಸ್ಥಾಪಕ ಲಕ್ಷ್ಮೀ ನಾರಾಯಣ ಶರ್ಮ, ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್‍ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್ ಹಾಗೂ ಸ್ಥಳೀಯ ಪ್ರಮುಖರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಶಾಂತ್ ಡಿ’ಕೋಸ್ತ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Must Read

spot_img
error: Content is protected !!
Breaking