ಕೃಷಿ ಯೋಜನೆ ತಿಳಿದರೆ ಖುಷಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

th ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಉದ್ದೇಶ 
ಆಧುನಿಕ ಕೃಷಿ ತಂತ್ರಜ್ಞಾನದ ಅಳವಡಿಕೆಯಲ್ಲಿ ರೈತರ, ರೈತ ಮಹಿಳೆಯರ ಮತ್ತು ವಿಸ್ತರಣಾ ಕಾರ್ಯಕರ್ತರ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ತರಬೇತಿ ನೀಡಲಾಗುವುದು.
ರೈತರಿಗೆ ದೊರೆಯುವ ಸೌಲಭ್ಯಗಳು
1. ರೈತರು ಹಾಗು ರೈತ ಮಹಿಳೆಯರಿಗೆ ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ತಂತ್ರಜ್ಞಾನದ ಅವಶ್ಯಕತೆಯನ್ನು ಗುರುತಿಸಿ ಸಮಸ್ಯೆಗಳ/ ಕೌಶಲ್ಯ ಆಧಾರಿತ ತರಬೇತಿಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು ೨೩ ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಕಾರ್ಯನಿ ರ್ವಹಿಸುತ್ತಿವೆ.
2. ತರಬೇತಿಯ ಅವಧಿ ೩ ರಿಂದ ೬ ದಿನಗಳವರೆಗೆ ಇರುತ್ತದೆ.
3. ತರಬೇತಿಗಾಗಿ ಬರುವ ಅಭ್ಯರ್ಥಿಗಳಿಗೆ ಉಚಿತ ಊಟ, ವಸತಿ ಹಾಗೂ ವಾಸಸ್ಥಳದಿಂದ ತರಬೇತಿ ಕೇಂದ್ರಕ್ಕೆ ಬಂದು ಹೋಗಲು ತಗಲುವ ವಾಸ್ತವಿಕ ಬಸ್ ದರ ನೀಡಲಾಗುವುದು.
4. ಕೃಷಿಗೆ ಸಂಬಂಧಿಸಿದಂತೆ ಎಲ್ಲಾ ವಿಷಯಗಳನ್ನು ಅಂದರೆ ಆಧುನಿಕ ಬೇಸಾಯಕ್ರಮ, ಕೊಯಿಲೋತ್ತರ ತಂತ್ರಜ್ಞಾನ, ಮಾರುಕಟ್ಟೆ ಸೌಲಭ್ಯ ಮಾರುಕಟ್ಟೆ ಆಧಾರಿತ ಬೆಳೆ ಯೋಜನೆ, ಕೃಷಿ ಉತ್ಪನ್ನಗಳ ಸಂಸ್ಕರಣೆ, ಕೃಷಿ ಆಧಾರಿತ ಕೈಗಾರಿಕೆ, ಯೋಗ ಮುಂತಾದ ವಿಷಯಗಳ ಕುರಿತು ತರಬೇತಿ ನೀಡಲಾಗುವುದು.
ಮಣ್ಣು ಆರೋಗ್ಯ ಅಭಿಯಾನ
* ಮಣ್ಣು ಆರೋಗ್ಯ ನಿರ್ವಹಣೆ ಉತ್ತೇಜಿಸಲು, ಪ್ರತಿ ೩ ವರ್ಷಗಳಿಗೊಮ್ಮೆ ಎಲ್ಲಾ ರೈತರಿಗೂ ಮಣ್ಣು ಆರೋಗ್ಯ ಚೀಟಿ ವಿತರಣೆ ಮಾಡುವುದು.
* ಸಸ್ಯ ಪೋಷಕಾಂಶಗಳ ಸಮತೋಲನ ಮತ್ತು ವಿವೇಚನಾಯುಕ್ತ ಬಳಕೆ ಬಗ್ಗೆ ಪ್ರಚಾರ.
* ಮಣ್ಣು ಆರೋಗ್ಯ ಚೀಟಿಗಳಲ್ಲಿನ ಶಿಫಾರಸ್ಸುಗಳನ್ವಯ ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆಯನ್ನು ನೀಗಿಸಲು ರೈತರಿಗೆ ತಮ್ಮ ಬೆಳೆ ಪದ್ಧತಿಗೆ ಅವಶ್ಯವಿರುವ ಪರಿಕರಗಳು, ಸಮತೋಲನ ಹಾಗೂ ಸಮಗ್ರ ಪೋಷಕಾಂಶ ನಿರ್ವಹಣಾ ಪದ್ಧತಿಗಳನ್ನು ಜನಪ್ರಿಯಗೊಳಿಸಲು ಅವಶ್ಯವಿರುವ ಆರ್ಥಿಕ ಸಹಾಯವನ್ನು ಶೇ.೫೦ ರ ರಿಯಾಯಿತಿ ದರದಲ್ಲಿ ಪ್ರತಿ ಹೆಕ್ಟೇರ್‌ಗೆ ರೂ.೨೫೦೦ ಮೀರದಂತೆ ಒದಗಿಸುವುದು.
* ಮಣ್ಣು ಆರೋಗ್ಯ ಚೀಟಿಯ ಬಗ್ಗೆ ತಾಂತ್ರಿಕ ಮತ್ತು ಸಂಬಂಧಿತ ಸಿಬ್ಬಂದಿಗೆ ಕೃಷಿ ವಿಶ್ವವಿದ್ಯಾನಿಲಯ / Iಅಂಖ ಸಂಸ್ಥೆಗಳ ಮೂಲಕ ರೈತರಿಗೆ ಅರಿವು ಮೂಡಿಸುವುದು. ಮಣ್ಣು ಪರೀಕ್ಷೆಯ ಮಹತ್ವ ಮತ್ತು ಮಣ್ಣು ಪರೀಕ್ಷೆ ಆಧಾರಿತ ಮಣ್ಣು ಆರೋಗ್ಯ ಚೀಟಿಯ ಉಪಯುಕ್ತತೆಯ ಬಗ್ಗೆ ರೈತರಿಗೆ ಅರಿವು ಮೂಡಿಸಲು ಮತ್ತು ಪೋಷಕಾಂಶ ನಿರ್ವಹಣಾ ಪದ್ಧತಿಯನ್ನು ಪ್ರೋತ್ಸಾಹಿಸಲು ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ಪ್ರಗತಿಪರ ರೈತರಿಗೆ ೨ ದಿನಗಳ ತರಬೇತಿಗಳನ್ನು ಆಯೋಜಿಸುವುದು.
* ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮದಡಿ ಮಣ್ಣು ಆರೋಗ್ಯ ಚೀಟಿಗಳ ಉಪಯುಕ್ತತೆಯನ್ನು ರೈತರಿಗೆ ಮನವರಿಕೆ ಮಾಡಲು ಪ್ರತಿ ೧೦೦೦೦ ಮಣ್ಣು ಮಾದರಿಗಳಿಗೆ ಒಂದು ೧೦.೦೦ಹೆ ಗ್ರಿಡ್‌ನಲ್ಲಿ ಪ್ರಾತ್ಯಕ್ಷಿಕೆಗಳನ್ನು ಇಲಾಖೆಯವತಿಯಿಂದ ಕೈಗೊಳ್ಳು ವುದು.
ಗ್ರಾಮ ಮಟ್ಟದಲ್ಲಿ ಮಣ್ಣು ಪರೀಕ್ಷಾ ಪ್ರಾಯೋ ಜನೆಗಳನ್ನು ಸ್ಥಾಪನೆ:
ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನದಡಿ ಮಣ್ಣು ಆರೋಗ್ಯ ನಿರ್ವಹಣೆ ಯೋಜನೆಯಡಿ ಗ್ರಾಮ ಮಟ್ಟದಲ್ಲಿ ಮಣ್ಣು ಪರೀಕ್ಷಾ ಪ್ರಾಯೋಜನೆಗಳನ್ನು ಸ್ಥಾಪಿಸಲು ಗ್ರಾಮೀಣ ಯುವಕರಿಗೆ ಉದ್ಯೋಗ ಸೃಷ್ಠಿ ಮತ್ತು ನಿಗಧಿತ ಸಮಯದಲ್ಲಿ ಮಣ್ಣು ಮಾದರಿಗಳ ವಿಶ್ಲೇಷಣೆ ಮಾಡುವುದಾಗಿರುತ್ತದೆ. ಈ ಯೋಜನೆಯಲ್ಲಿ ಗ್ರಾಮೀಣ ಉದ್ದಿಮೆದಾರರಿಗೆ (೧೮-೪೦ ವರ್ಷ ವಯೋಮಿತಿ) ಸ್ವಸಹಾಯ ಗುಂಪು, ರೈತರ ಜಂಟಿ ಜವಾಬ್ದಾರಿ ಗುಂಪುಗಳು, ರೈತರ ಸಹಕಾರ ಸಂಘಗಳು, ರೈತರ ಉತ್ಪಾದಕರ ಸಂಸ್ಥೆಗಳು, ರಸಗೊಬ್ಬರ ಕಂಪನಿಗಳು ಸ್ಥಾಪಿಸಿರುವ ರಿಟೇಲ್ ಔಟ್‌ಲೆಟ್‌ಗಳು, ರಸಗೊಬ್ಬರ ಕಂಪನಿಗಳ ರಿಟೇಲ್‌ದಾರರು, ಜಿಲ್ಲೆಗಳಲ್ಲಿ ಇರುವ ಶಾಲೆಗಳು/ ಕಾಲೇಜುಗಳಲ್ಲಿ ಮಣ್ಣು ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಲು ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಪ್ರಾಯೋಜನೆಯ ಒಟ್ಟು ವೆಚ್ಚ ರೂ.೧೦ ಲಕ್ಷಗಳಾಗಿರುತ್ತದೆ. ಸ್ವಸಹಾಯ ಗುಂಪು, ರೈತರ ಜಂಟಿ ಜವಾಬ್ದಾರಿ ಗುಂಪುಗಳು, ರೈತರ ಸಹಕಾರ ಸಂಘಗಳು, ರೈತರ ಉತ್ಪಾದಕ ಸಂಸ್ಥೆಗಳು, ಪರಿಕರಗಳ ರಿಟೇಲ್ ಔಟ್‌ಲೆಟ್‌ಗಳು, ಜಿಲ್ಲೆಗಳಲ್ಲಿ ಇರುವ ಶಾಲೆಗಳು/ಕಾಲೇಜುಗಳಿಗೆ ಶೇ.೮೦ ರಷ್ಟು ಮತ್ತು ಗ್ರಾಮೀಣ ಉದ್ದಿಮೆದಾರರು/ಪರಿಕರಗಳ ರಿಟೇಲ್‌ದಾರರಿಗೆ ಶೇ.೪೦ ರಷ್ಟು ಸಹಾಯಧನವನ್ನು ನೀಡಲಾಗುತ್ತದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.