ನಾಪತ್ತೆಯಾಗಿದ್ದ ಬಾಲಕಿ ಕಳಸದಲ್ಲಿ ಪತ್ತೆ

Advt_Headding_Middle
Advt_Headding_Middle

Shreedeviಬಾಳಿಲದಿಂದ ನಾಪತ್ತೆಯಾಗಿದ್ದ 10 ವರ್ಷದ ಬಾಲಕಿ ಮೂಡಿಗರೆ ತಾಲೂಕು ಕಳಸದಲ್ಲಿರುವ ತನ್ನ ಮನೆಯಲ್ಲಿ ಪತ್ತೆಯಾಗಿದ್ದಾಳೆ. ಮುರುಳ್ಯ ಗ್ರಾಮದ ಪೂದೆ ವಿಶ್ವೇಶ್ವರ ರಾವ್ ಎಂಬವರ ಪುತ್ರಿ, ಬಾಳಿಲ ವಿದ್ಯಾಭೋದಿನಿ ಹಿ.ಪ್ರಾ.ಶಾಲೆಯ 4 ನೇ ತರಗತಿ ವಿದ್ಯಾರ್ಥಿನಿ ಕು. ಶ್ರೀದೇವಿ ನ.2 ರಂದು ಬಾಳಿಲದಿಂದ ಮದ್ಯಾಹ್ನದ ವೇಳೆ ನಾಪತ್ತೆಯಾಗಿದ್ದು ಆಕೆ ಅದೇ ದಿನ ರಾತ್ರಿ 9 ಗಂಟೆ ಸುಮಾರಿಗೆ ಕಳಸದಲ್ಲಿರುವ ತನ್ನ ಮನೆಯಲ್ಲಿ ಪತ್ತೆಯಾಗಿದ್ದಾಳೆ. ದೀಪಾವಳಿ ರಜೆಗೆ ಶ್ರೀದೇವಿ ಕಳಸದಲ್ಲಿರುವ ತನ್ನ ಅಜ್ಜಿ ಮನೆಗೆ ಹೋಗಿದ್ದಳು, ನ.೨ರಂದು ಬೆಳಿಗ್ಗೆ ಮುರುಳ್ಯದ ಮನೆಗೆ ಆಕೆ ಬಂದಿದ್ದಳು. ಬಳಿಕ ಶಾಲೆಗೆ ತೆರಳಿದ ಅವಳು ಮದ್ಯಾಹ್ನದ ಸುಮಾರಿಗೆ ಬಸ್ ಏರಿ ಪುತ್ತೂರು ಬೆಳ್ತಂಗಡಿ ಮಾರ್ಗವಾಗಿ ಕಳಸಕ್ಕೆ ಹೋಗಿದ್ದಳು. ಸಂಜೆ ವೇಳೆಗೆ ಬಾಲಕಿ ಮನೆಗೆ ಬಾರದಿದ್ದುದರಿಂದ ಆತಂಕಗೊಂಡ ಮನೆಯವರು ಸುತ್ತುಮುತ್ತಲು ವಿಚಾರಿಸಿ ಬೆಳ್ಳಾರೆ ಪೊಲೀಸ್ ಠಾಣೆಗೆ ಬಂದು ನಾಪತ್ತೆ ಪ್ರಕರಣ ದಾಖಲಿಸಿದರು. ಅಲ್ಲದೆ ಬೆಳ್ಳಾರೆ, ಬಾಳಿಲ, ಪಂಜ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದರು. ಸಂಬಂಧಿಕರ ಮನೆಯಲ್ಲಿ ವಿಚಾರಿಸಿದಾಗ ಕಳಸದ ತನ್ನ ಅಜ್ಜಿ ಮನೆಯಲ್ಲಿರುವುದಾಗಿ ಗೊತ್ತಾಯಿತು. ನ.3 ರಂದು ಬೆಳಗ್ಗೆ ಮುರುಳ್ಯದಿಂದ ಶ್ರೀದೇವಿಯ ಮನೆಯವರು ಆಕೆಯನ್ನು ಕರೆತರಲು ಕಳಸಕ್ಕೆ ತೆರಳಿರುವುದಾಗಿ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.