ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ

Advt_Headding_Middle
Advt_Headding_Middle

Kumaraswamy rajyothva  (2)ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಸುಳ್ಯ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಮಮತಾ ಬಿ ಭಾಗವಹಿಸಿದ್ದರು. ಮಕ್ಕಳಿಗೆ ಪಂಗಡಗಳ ಅನುಸಾರವಾಗಿ ಸ್ಫರ್ಧೆಯನ್ನು ಏರ್ಪಡಿಸಲಾಗಿತ್ತು. ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಅಕ್ಷರಗಳನ್ನು ಸರಿಯಾಗಿ ಜೋಡಿಸಿ, ಒಗಟು ಬಿಡಿಸುವುದು, ನಾಡಗೀತೆ, ಚಿತ್ರ ತೋರಿಸಿ ಪೂರಕ ವಾಕ್ಯ ಅಥವಾ ಪದ ರಚನೆ(ಕನೆಕ್ಷನ್) ರಸಪ್ರಶ್ನೆ ಮತ್ತು ಗುಟ್ಟು-ರಟ್ಟು, ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ರಸಪ್ರಶ್ನೆ, ಆಶುಭಾಷಣ, ನಾಡಗೀತೆ, ಗ್ರಹಣಶಕ್ತಿ, ಪದಬಂಧ ಮತ್ತು ಗುಟ್ಟು-ರಟ್ಟು ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು. ಗಂಗಾ ತಂಡವು ಹಿರಿಯ ಪ್ರಾಥಮಿಕ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಮತ್ತು ಬ್ರಹ್ಮಪುತ್ರ ತಂಡವು ಪ್ರೌಢಶಾಲಾ ವಿಭಾಗದ ಸಮಗ್ರಪ್ರಶಸ್ತಿಯನ್ನು ಪಡೆದುಕೊಂಡಿತು. ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಗಣೇಶ್ ಪ್ರಸಾದ್, ಸಂಚಾಲಕರಾದ ನಾಯರ್, ಮುಖ್ಯೋಪಾಧ್ಯಾಯಿನಿ ವಿದ್ಯಾರತ್ನರವರು ಉಪಸ್ಥಿತರಿದ್ದರು. ಶಿಕ್ಷಕಿ ಗೀತಾ ವಂದಿಸಿ, ಶಿಕ್ಷಕಿ ವಿದ್ಯಾಲತ ಧನ್ಯವಾದವನ್ನು ಅರ್ಪಿಸಿದರು. ಶಿಕ್ಷಕಿ ಅಕ್ಷತಾ ಕಾರ್‍ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.