ಬೆಳ್ಳಾರೆ ವಾಣಿಜ್ಯ, ವರ್ತಕ ಮತ್ತು ಕೈಗಾರಿಕ ಸಂಘದ ವಾರ್ಷಿಕ ಮಹಾಸಭೆ

Advt_Headding_Middle
Advt_Headding_Middle

Bellare  (2)ಬೆಳ್ಳಾರೆ ವಾಣಿಜ್ಯ, ವರ್ತಕ ಮತ್ತು ಕೈಗಾರಿಕ ಸಂಘದ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮವು ಬೆಳ್ಳಾರೆಯ ನಮ್ರತಾ ಕಲಾಮಂದಿರದಲ್ಲಿ ನಡೆಯಿತು.

Bellare  (1)

ಸಂಘದ ಗೌರವಾಧ್ಯಕ್ಷ ಬಿ.ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಪ್ರಮೋದ್ ಶೆಟ್ಟಿ ಕುಂಟುಪುಣಿಗುತ್ತು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿನಯ್‌ಕುಮಾರ್ ವರದಿ ವಾಚಿಸಿದರು. ಕೋಶಾಧಿಕಾರಿ ವಿಠಲದಾಸ ಪೂಜಾರಿ ೨೦೧೫-೧೬ರ ಲೆಕ್ಕಪತ್ರ ಮಂಡಿಸಿದರು.
ಕಾರ್ಯಕಾರಿ ಸಮಿತಿಗೆ ೩ ಜನ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿ ಒಟ್ಟು ೨೫ ಜನ ಸದಸ್ಯರನ್ನು ಮರು ಆಯ್ಕೆಗೊಳಿಸಲಾಯಿತು. ನೂತನ ಕಾರ್ಯಕಾರಿ ಸಮಿತಿಯು ಹಾಲಿ ಅಧ್ಯಕ್ಷ ಪ್ರಮೋದ್ ಶೆಟ್ಟಿ ಕುಂಟುಪುಣಿಗುತ್ತು ಅವರನ್ನು ೨೦೧೬-೧೭ನೇ ಸಾಲಿನ ಅಧ್ಯಕ್ಷರನ್ನಾಗಿ ಸರ್ವಸಮ್ಮತದಿಂದ ಮರು ಆಯ್ಕೆಗೊಳಿಸಿದರು. ಅದರಂತೆ ಆಡಳಿತ ಮಂಡಳಿಯ ಹಾಲಿ ಪದಾಧಿಕಾರಿಗಳನ್ನು ಮುಂದಿನ ಸಾಲಿಗೆ ಮರು ಆಯ್ಕೆಗೊಳಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.