Breaking News

ತೆಕ್ಕಿಲ್ ಶಾಲೆಗೆ ಸಮಗ್ರ ಪ್ರಶಸ್ತಿ

Advt_Headding_Middle
Advt_Headding_Middle

23ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ನ.4 ರಂದು ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ತೆಕ್ಕಿಲ್ ಶಾಲೆಯ ಪ್ರಾಥಮಿಕ ವಿಭಾಗದ ಬಾಲಕಿಯರಿಗೆ ಸಮಗ್ರ ಪ್ರಶಸ್ತಿ ಬಂದಿದೆ. ಶಾಲಾ ವಿದ್ಯಾರ್ಥಿಗಳಾದ ಆಯಿಷತ್ ಹಫೀಝ 100 ಮೀ, 200 ಮೀ.ಪ್ರಥಮ, 4×100 ಮೀ. ರೀಲೆಯಲ್ಲಿ ಆಯಿಷತ್ ಹಫೀಝ, ಶರಫಾ, ಅಶ್ಫಿಯಾ, ನೌಶದಾ ಪ್ರಥಮ ಸ್ಥಾನ, ಶರಫಾ 100ಮೀ, 200 ಮೀ, ಉದ್ದಜಿಗಿತ ದ್ವಿತೀಯ, ಅಶ್ವಿನಿ ಗುಂಡೆಸೆತದಲ್ಲಿ ದ್ವಿತೀಯ, ಮಹಮ್ಮದ್ ತಸ್ಮೀಮ್, ಮಹಮ್ಮದ್ ಅಫ್ರೀದ್, ಮಹಮ್ಮದ್ ರಫೀಕ್, ಅಬ್ದುಲ್ ಬಾಸಿತ್ 4×100ರೀಲೆಯಲ್ಲಿ ತೃತೀಯ ಸ್ಥಾನ, ಪ್ರೌಢಶಾಲಾ ವಿಭಾಗದಲ್ಲಿ ಇರ್ಫಾನ್ ಗುಂಡೆಸೆತದಲ್ಲಿ ದ್ವಿತೀಯ ಸ್ಥಾನ, ನಿಶ್ಮಿತಾ ಗುಂಡೆಸೆತದಲ್ಲಿ ತೃತೀಯ ಸ್ಥಾನ, ಇಸ್ರಾ, ಶಫಿಕಾ ಸಿರಿನ್, ಡಯಾನ್, ಅಬಿದಾ 4×100ಮೀ ರೀಲೆಯಲ್ಲಿ ತೃತೀಯ ಸ್ಥಾನ, ಪ್ರೌಢಶಾಲಾ ವಿಭಾಗ 17ರ ವಯೋಮಾನದಲ್ಲಿ ಪ್ರಸಾದ್ ಜಿ 3000ಮೀ ಪ್ರಥಮ, ಎತ್ತರ ಜಿಗಿತ ದ್ವಿತೀಯ, 800ಮೀ ತೃತೀಯ, 4×100 ಮೀ ರಿಲೇಯಲ್ಲಿ ಪ್ರಸಾದ್, ಚರಣ್ ರಾಜ್, ಜಲಾಲುದ್ಧೀನ್, ಮುಸ್ತಾಫ ತೃತೀಯ ಸ್ಥಾನ, ಅಬ್ದುಲ್ ಅಝೀಜ್ ಗುಂಡೆಸೆತ ದ್ವಿತೀಯ, ಚರಣ್ ರಾಜ್ 1500 ಮೀ ದ್ವಿತೀಯ, ಅಫ್ರೀದಾ ಉದ್ದ ಜಿಗಿತ, 100ಮೀ ತೃತೀಯ, ಲಿಖಿನ್ ಬಿ.ಕೆ. ವೇಗದ ನಡಿಗೆ ತೃತೀಯ, ಪವಿತ್ರ ಯು.ಟಿ. ಈಟಿ ಎಸೆತ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರಿಗೆ ಶಾಲಾ ಮುಖ್ಯ ಶಿಕ್ಷಕರಾದ ದಾಮೋದರ ಕೆ., ಹರಿಣಾಕ್ಷಿ ಕೆ.ಎಸ್., ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ರಮ್ಯ, ಸಹ ಶಿಕ್ಷಕಿ ಶ್ರೀಮತಿ ವಾಣಿ, ಕು. ಸೆಮಿರಾಬಿ ಮಾರ್ಗದರ್ಶನ ನೀಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.