Breaking News

ತೆಕ್ಕಿಲ್ ಸ್ಮರಣಾ ಸಂಚಿಕೆ ದಶದೀವಿಗೆ ಬಿಡುಗಡೆ

Advt_Headding_Middle
Advt_Headding_Middle

Tekkil gas copyತೆಕ್ಕಿಲ್ ಸ್ಮರಣಾ ಸಂಚಿಕೆ ದಶದೀವಿಗೆ ಬಿಡುಗಡೆಯನ್ನು ತೆಕ್ಕಿಲ್ ಸಮುದಾಯ ಭವನದಲ್ಲಿ ನ.7 ರಂದು ನಡೆಸಲಾಯಿತು. ಕಾರ್ಯಕ್ರಮವನ್ನು ಅರಂತೋಡು ಸಿ.ಎ ಬ್ಯಾಂಕ್ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ವಹಿಸಿದ್ದರು. ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸ್ಮರಣಾ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

Tekkil smarana sanchike bidugade 2 copy
ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ಲೀಲಾವತಿ ಕೊಡೆಂಕೀರಿ, ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ, ಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟಿ ಕೃಷ್ಣ ಮೂರ್ತಿ, ತೆಕ್ಕಿಲ್ ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಹರಿಣಿ, ತಾ.ಪಂ. ಸದಸ್ಯೆ ಪುಷ್ಪ ಮೇದಪ್ಪ, ಅರಂತೋಡು ಮಸೀದಿ ಅಧ್ಯಕ್ಷ ಕೆ.ಎಂ. ಮಹಮ್ಮದ್ ಉಪಸ್ಥಿತರಿದ್ದರು. ದಾಮೋದರ ಮಾಸ್ತರ್ ಗೂನಡ್ಕ ಪ್ರಾಸ್ತವಿಕ ಮಾತನಾಡಿದರು. ಅಶ್ರಫ್ ಗುಂಡಿ ಕಾರ್ಯಕ್ರಮ ನಿರೂಪಿಸಿ, ಕೆ.ಎಂ ಹರಿಣಿ ಸ್ವಾಗತಿಸಿ, ಸಹಶಿಕ್ಷಕಿ ಅಶ್ವಿನಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.