Breaking News

ಸುಳ್ಯದಲ್ಲಿ ದಾಂಧಲೆ ನಡೆಸಿದ ಕಾಸರಗೋಡು ನ್ಯಾಯಾಧೀಶ ಆತ್ಮಹತ್ಯೆ

Advt_Headding_Middle
Advt_Headding_Middle

IMG-20161106-WA0256ನ.6 ರಂದು ಸುಳ್ಯದಲ್ಲಿ ದಾಂಧಲೆ ನಡೆಸಿ ಕೇಸಿಗೊಳಗಾಗಿದ್ದ ಕಾಸರಗೋಡು ಜಿಲ್ಲಾ ನ್ಯಾಯಾಧೀಶ ಉಣ್ಣಿಕೃಷ್ಣನ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಕಾಸರಗೋಡಿನ ವಸತಿಗೃಹವೊಂದರಲ್ಲಿ ಅವರು ಈ ಕೃತ್ಯ ನಡೆಸಿರುವುದಾಗಿ ಮಾಲಯಾಳ ಸುದ್ದಿ ಮಾಹಿನಿಗಳಲ್ಲ್ಲಿಬ್ರೇಕಿಂಗ್ ನ್ಯೂಸ್ ಬರತೊಡಗಿದೆ.

 ಕಳೆದ ಆದಿತ್ಯವಾರ ಸುಬ್ರಹ್ಮಣ್ಯಕ್ಕೆ ತೆರಳಿದ್ದ ಅವರು, ಮಧ್ಯಾಹ್ನದ ಬಳಿಕ ಬಸ್‌ನಲ್ಲಿ ಸುಳ್ಯಕ್ಕೆ ಬಂದಿದ್ದು, ಈ ಸಂದರ್ಭ ರಿಕ್ಷಾ ಚಾಲಕ, ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಗೃಹರಕ್ಷಕ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಎಸ್‌ಐ ಮೇಲೂ ಕೈ ಮಾಡಿದ್ದಾಗಿ ಪ್ರಕರಣ ದಾಖಲಾಗಿತ್ತು. ಬಳಿಕ ಅವರ ಹೇಳಿಕೆ ಪಡೆದು ಬಿಡುಗಡೆ ಮಾಡಲಾಗಿತ್ತು. ಮಾನಸಿಕವಾಗಿ ನೊಂದಿದ್ದ ಅವರು ಸೋಮವಾರ ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮಂಗಳವಾರ ಸಂಜೆ ಅಲ್ಲಿಂದ ಬಿಡುಗಡೆ ಆಗಿದ್ದರು. ಪೊಲೀಸ್ ಕೇಸ್ ಆಗಿದ್ದರಿಂದ ಉಣ್ಣಿಕೃಷ್ಣನ್ ಅವರನ್ನು ಕೇರಳ ಹೈಕೋರ್ಟ್ ಅಮಾನತು ಮಾಡಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.