108 ಆಂಬ್ಯುಲೆನ್ಸ್‌ನಲ್ಲಿ ಹೆರಿಗೆ

Advt_Headding_Middle
Advt_Headding_Middle

108ಸುಬ್ರಹ್ಮಣ್ಯದಿಂದ ಸುಳ್ಯಕ್ಕೆ 108  ಆಂಬ್ಯುಲೆನ್ಸ್‌ನಲ್ಲಿ ಗರ್ಭಿಣಿಯೊರ್ವರನ್ನು ಕರೆತರುತ್ತಿದ್ದಾಗ ಅವರು 108 ವಾಹನದಲ್ಲೇ ಹೆಣ್ಣುಮಗುವಿಗೆ ಜನ್ಮ ನೀಡಿದ ಘಟನೆ ನ.9 ರಂದು ನಡೆದಿದೆ.
ಸುಬ್ರಹ್ಮಣ್ಯದ ಪರ್ವತಮುಖಿ ನಿವಾಸಿ ಕುಸುಮಾಧರ ಎಂಬವರ ಪತ್ನಿ ರೂಪಾಶ್ರೀಯವರನ್ನು ಹೆರಿಗೆಗಾಗಿ ಸುಳ್ಯಕ್ಕೆ ಕರೆತರುತ್ತಿದ್ದಾಗ ಪಾಜಪಳ್ಳ ಬಳಿ 108  ಆಂಬ್ಯುಲೆನ್ಸ್‌ನಲ್ಲೇ ಹೆಣ್ಣುಮಗುವಿಗೆ ಜನ್ಮ ನೀಡಿದರು. ಆಂಬ್ಯುಲೆನ್ಸ್ ಸಿಬ್ಬಂದಿಗಳಾದ ಹಿಮಕರ ಕಾಡುಪಂಜ ಹಾಗೂ ಚಾಲಕ ರಮೇಶ್ ಇವರಿಗೆ ವಾಹದಲ್ಲೇ ಚಿಕಿತ್ಸೆ ನೀಡಿ ತಾಯಿ ಮಗು ಇಬ್ಬರಿಗೂ ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಲಾಯಿತು. ಮಗು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.