HomePage_Banner
HomePage_Banner
HomePage_Banner
HomePage_Banner

ಮಗುವಿನ ಜನನ ಪತ್ರಕ್ಕಾಗಿ ತಾಯಿಯ ಅಲೆದಾಟ

ಅನಾರೋಗ್ಯ ಪೀಡಿತ ಮಗುವಿನ ಚಿಕಿತ್ಸೆಗೆ ಜನನ ಪ್ರಮಾಣ ಪತ್ರ ಪಡೆಯಲು ಮಹಿಳೆಯೊಬ್ಬರು ಕಳೆದ ಮೂರು ತಿಂಗಳಿನಿಂದ ಅಲೆದಾಟ ನಡೆಸಿದರೂ ದಾಖಲೆ ಪಡೆಯಲು ವಿಫಲವಾದ ಘಟನೆ ನಡೆದಿದೆ.

ಮಡಪ್ಪಾಡಿ ಗ್ರಾಮದ ಅಡಿಕಲ್ಲು ನಿವಾಸಿ ಪೆರ್ಣ, ಕಮಲ ದಂಪತಿ ಪುತ್ರಿ ಲೋಕೇಶ್ವರಿ ಅವರಿಗೆ ಮೂರು ವರ್ಷಗಳ ಹಿಂದೆ ಸುರೇಶ ಎಂಬವರೊಂದಿಗೆ ಮದುವೆಯಾಗಿದ್ದು ಒಂದೂವರೆ ವರ್ಷದ ಮಗುವಿದೆ. ಮಗು ಹುಟ್ಟಿದ ಬಳಿಕ ದಾಂಪತ್ಯ ವಿರಸದಿಂದ ಲೋಕೇಶ್ವರಿ ತವರು ಮನೆಯಲ್ಲಿ ವಾಸಿಸುತ್ತಿದ್ದಾರೆ. ಮಗುವಿಗೆ ಹುಟ್ಟಿನಿಂದಲೇ ಅನಾರೋಗ್ಯವಿದ್ದು, ಕಿಡ್ನಿ ಸಮಸ್ಯೆಯೂ ಇದೆ. ಅದಕ್ಕೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಇನ್ನೂ ಚಿಕತ್ಸೆ ಅಗತ್ಯವಿದ್ದು, ಮಗುವಿನ ಜನನ ಪ್ರಮಾಣ ಪತ್ರ ತರುವಂತೆ ವೈದ್ಯರು ಸೂಚಿಸಿದ್ದಾರೆ. ಜನನ ಪ್ರಮಾಣ ಪತ್ರಕ್ಕಾಗಿ ಲೋಕೇಶ್ವರಿ ಕಳೆದ ಮೂರು ತಿಂಗಳಿನಿಂದ ಸುಳ್ಯ ನಗರ ಪಂಚಾಯತ್ ಕಚೇರಿ ಅಲೆದಾಡುತ್ತಿದ್ದಾರೆ. ಪಂಚಾಯತ್‌ಗೆ ಹೋದಾಗ ಆಸ್ಪತ್ರೆಗೆ ಹೋಗಿ ಎಂದು ಅಲ್ಲಿನ ಸಿಬ್ಬಂದಿ ಹೇಳಿದರೆ, ನೀವು ಪಂಚಾಯತ್‌ನಿಂದ ದಾಖಲೆ ಪಡೆಯಿರಿ ಎಂದು ಸರ್ಕಾರಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಮಗುವಿನ ತಂದೆಯ ಹೆಸರು ದಾಖಲಾಗಿಲ್ಲದ್ದರಿಂದ ಜನನ ಪ್ರಮಾಣಪತ್ರ ನೀಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದು, ತಂದೆಯ ಹೆಸರನ್ನು ನಮೂದಿಸದೇ ನೀಡಿ ಎಂದರೂ ಅದನ್ನೂ ನೀಡುತ್ತಿಲ್ಲ ಎಂದು ಲೋಕೇಶ್ವರಿ ದೂರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.