ಸುಳ್ಯದ ಶ್ರೀ ವೆಂಕರಮಣ ಕ್ರೇಡಿಟ್ ಕೋ & ಆಪರೇಟಿವ್ ಸೊಸೈಟಿಗೆ ೨ನೇ ಬಾರಿಗೆ ರಾಜ್ಯ ಅತ್ಯುತ್ತಮ ಸಹಕಾರ ಪ್ರಶಸ್ತಿ

Advt_Headding_Middle
Advt_Headding_Middle

v1ಕರ್ನಾಟಕ ಸರಕಾರ, ರಾಜ್ಯ ಸಹಕಾರ ಮಹಾಮಂಡಲ ಬೆಂಗಳೂರು ಮತ್ತು ಇತರ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಮಂಗಳೂರಲ್ಲಿ ನ.18 ರಂದು ನಡೆದ ಕರ್ನಾಟಕ ರಾಜ್ಯ ಸಹಕಾರ ಸಪ್ತಾಹದಲ್ಲಿ ಸುಳ್ಯದ ಶ್ರೀ ಸುಳ್ಯದ ಶ್ರೀ ವೆಂಕರಮಣ ಕ್ರೇಡಿಟ್ ಕೋ & ಆಪರೇಟಿವ್ ಸೊಸೈಟಿಗೆ ರಾಜ್ಯ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಶಸ್ತಿಯನ್ನು ಸಹಕಾರ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ವಿತರಿಸಿದರು. ಈ ಸಂದರ್ಭದಲ್ಲಿ ಅರಣ್ಯ ಸಚಿವರಾದ ಬಿ.ರಮಾನಾಥ ರೈ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ. ಖಾದರ್, ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಲದ ಅಧ್ಯಕ್ಷರಾದ ಶೇಖರ ಗೌಡ ವಿ.ಮಾಲಿ ಪಾಟೀಲ, ಶಾಸಕರಾದ ಮೊದಿನ್ ಬಾವ, ವಿಧಾನ ಪರಿಷತ್ ಸಚೇತರಾದ ಐವನ್ ಡಿ.ಸೋಜ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಯಂ.ಎನ್. ರಾಜೇಂದ್ರ ಕುಮಾರ್, ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷರಾದ ಹರೀಶ್ ಆಚಾರ್ಯ, ಸಹಕಾರ ಸಂಘಗಳ ನಿಬಂಧಕರಾದ ಎಂ.ಕೆ. ಅಯ್ಯಪ್ಪ ಮತ್ತು ಸಹಕಾರ ಸಂಘಗಳ ಉಪನಿಬಂಧಕರಾದ ಬಿ.ಕೆ.ಸಲೀಂ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರಾದ ಚಂದ್ರ ಕೋಲ್ಚಾರ್ ಉಪಾಧ್ಯಕ್ಷರಾದ ಪಿ.ಯಸ್. ಗಂಗಾಧರ್, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೆ.ಟಿ.ವಿಶ್ವನಾಥ, ನಿರ್ದೇಶಕರಾದ ಪಿ.ಸಿ.ಜಯರಾಮ, ಕೆ.ಸಿ.ನಾರಾಯಣ ಗೌಡ, ಕೆ.ಸಿ. ಸದಾನಂದ ಕುರುಂಜಿ, ಲಕ್ಷ್ಮೀನಾರಾಯಣ ನಡ್ಕ, ಎನ್.ಎಸ್. ದಾಮೋದರ, ಶ್ರೀಮತಿ ನಳನಿ ಸೂರಯ್ಯ, ಶ್ರೀಮತಿ ಲತಾ ಸದಾನಂದ ಮತ್ತು ಶ್ರೀಮತಿ ಜಯಲಲಿತ ಕೆ.ಎಸ್.ರವರು ಸಹಕಾರ ಸಚಿವರಿಂದ ಪ್ರಶಸ್ತಿ ಸ್ವೀಕರಿಸಿದರು. ಶ್ರೀ ವೆಂಕಟರಮಣ ಸೊಸೈಟಿಗೆ ಕಳೆದ ಬಾರಿಯು ರಾಜ್ಯ ಮಟ್ಟದ ಅತ್ಯುತ್ತಮ ಸಹಕಾರಿ ಸಂಸ್ಥೆ ಪ್ರಶಸ್ತಿ ಲಬಿಸಿತ್ತು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.