ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಇದರ ವತಿಯಿಂದ ಡಾ. ಕೀಲಾರು ಗೋಪಾಲಕೃಷ್ಣಯ್ಯ ಸಂಸ್ಮರಣೆ, ಸಂಪಾಜೆ ಯಕ್ಷೋತ್ಸವ ಮತ್ತು ಶೇಣಿ ಶತಾಬ್ಧ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ಎಡನೀರು ಮಠದ ಕೇಶವಾನಂದ ಭಾರತೀ ಮಹಾಸ್ವಾಮಿಗಳು ಯಕ್ಷೋತ್ಸವವನ್ನು ಉದ್ಘಾಟಿಸಿ ಬಳಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಸುಬ್ರಹ್ಮಣ್ಯ ಮಠದ ವಿದ್ಯಾ ಪ್ರಸನ್ನ ತೀರ್ಥ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಒಡಿಯೂರು ಗುರುದೇವ ದತ್ತ ಸಂಸ್ಥಾನಮ್ನ ಗುರುದೇವಾನಂದ ಮಹಾಸ್ವಾಮಿಗಳು ದಿವ್ಯ ಉಪಸ್ಥಿತಿ ವಹಿಸಿದ್ದರು.
ವೈದಿಕ ವಿದ್ವಾಂಸ ವೇ.ಮೂ. ಕೇಕಣಾಜೆ ಶಂಭಟ್ಟರಿಗೆ ಅಭಿನಂದನೆ, ಹಿರಿಯ ಬಣ್ಣದ ವೇಷಧಾರಿ ಸದಾಶಿವ ಶೆಟ್ಟಿಗಾರ್ ಸಿದ್ದ ಕಟ್ಟೆ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ನಿವೃತ್ತ ಪ್ರಾಂಶುಪಾಲ ಪ್ರೋ. ಎಂ.ಎಸ್ ಭಟ್, ಡಾ.ಕೀಲಾರು ಸಂಸ್ಮರಣಾ ಭಾಷಣಾ ಮಾಡಿದರು. ವಿಮರ್ಶಕರಾದ ಎ.ಈಶ್ವರಯ್ಯ ಶೇಣಿ ಸಂಸ್ಮರಣೆ ಮಾಡಿ, ವೇ.ಮೂ.ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಭಾಷಣ ಮಾಡಿದರು.
ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಅಧ್ಯಕ್ಷೆ ವಿಜಯಲಕ್ಷ್ಮೀ ಭಟ್, ಉಪಾಧ್ಯಕ್ಷ ರಾಜಾರಾಮ ಕೀಲಾರು, ಕಾರ್ಯದರ್ಶಿ ಸುಮನ ಶ್ಯಾಂ ಭಟ್, ಯಕ್ಷಗಾನ ಕಲಾಪೋಷಕ ಡಾ. ಟಿ.ಶ್ಯಾಂ ಭಟ್, ಪ್ರತಿಷ್ಠಾನದ ಕೋಶಾಧಿಕಾರಿ ಮುರಳಿ ಕೀಲಾರು ಉಪಸ್ಥಿತರಿದ್ದರು. ಈ ವರ್ಷದ ಸಂಪಾಜೆ ಯಕ್ಷೋತ್ಸವದಲ್ಲಿ ಶೇಣಿ ಶತಾಬ್ದ ಕಾರ್ಯಕ್ರಮದ ಅಂಗವಾಗಿ ಹಿರಿಯ ಹಾಗೂ ಪ್ರಸಿದ್ಧ ಒಂದು ನೂರು ಮಂದಿ ಯಕ್ಷಗಾನ ಕಲಾವಿದರಿಗೆ ಪ್ರಶಸ್ತಿ ಪ್ರದಾನ ನಡೆಯಿತು.
ಅಪರಾಹ್ನ ೨ಗಂಟೆಯಿಂದ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ಅಮೋಘ ೪ ಯಕ್ಷಗಾನ ಬಯಲಾಟ ನಡೆಯಲಿದೆ. ವೀರಮಣಿ ಕಾಳಗ, ಕನಕಾಂಗಿ ಕಲ್ಯಾಣ( ಬಡಗು), ಯಶೋಮತಿ ಏಕಾವಳಿ ವಿವಾಹ, ಧೀರದುಂದುಭಿ ಪ್ರಸಂಗಗಳು ಈ ಬಾರಿಯ ಯಕ್ಷ ಪ್ರೇಮಿಗಳ ಮನಸೂರೆಗೊಳ್ಳಲಿದೆ.