Breaking News

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ : ರಾಜೇಂದ್ರ ಕುಮಾರ್‌ಗೆ ಸುಳ್ಯದಲ್ಲಿ ಸನ್ಮಾನ

Advt_Headding_Middle
Advt_Headding_Middle

ದೇಶದ ಅತ್ಯುತ್ತಮ ಸಹಕಾರಿ ಎಂದು ಪುರಸ್ಕ್ರತರಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂಎನ್ ರಾಜೇಂದ್ರ ಕುಮಾರ್‌ರವರನ್ನು ತಾಲೂಕಿನ ಎಲ್ಲಾ ಸಹಕಾರಿಗಳ ಪರವಾಗಿ ಅಭಿನಂದಿಸಿ ಗೌರವಿಸುವ ಕಾರ್ಯಕ್ರಮ ನ.೧೨ರಂದು ನಡೆಯಿತು. ಸುಳ್ಯದ ಕೆ.ವಿ.ಜಿ ಪುರಭವನದಲ್ಲಿ ಈ ಕಾರ್ಯಕ್ರಮವನ್ನು ಸಮಾರಂಭದ ದೀಪ ಬೆಳಗಿಸಿ ಉದ್ಘಾಟಿಸಿ ಅಶೀರ್ವಚನ ಗೈದರು. ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಸಹಕಾರಿ ತತ್ವ ಭಾರತೀಯ ಸಂಸ್ಕ್ರತಿಯಲ್ಲೇ ಇದೆ. ರಾಜೇಂದ್ರ ಕುಮಾರ್‌ರವರು ಅತ್ಯಂತ ಪರಿಶ್ರಮದಿಂದ ದುಡಿದು ಡಿ.ಸಿ.ಸಿ ಬ್ಯಾಂಕ್‌ನ್ನು ಬೆಳೆಸಿಕೊಂಡಿದ್ದಾರೆ. ರಾಜಕೀಯ ರಹಿತವಾಗಿ ಎಲ್ಲರೊಡನೆ ಸಂಬಂಧ ಬೆಳಸಿಕೊಂಡಿದ್ದಾರೆ .

ಅತ್ಯುನ್ನತ ಸ್ಥಾನವನ್ನು ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ಹೇಳಿದರು. ರಾಜ್ಯ ಸಹಕಾರ ಮಾರಾಟ ಮಂಡಲ ವತಿಯಿಂದ ಹಾವೇರಿಯಲ್ಲಿ ಯಾರಿಗೂ ಉತ್ಪನ್ನದ ಕಾರ್ಖಾನೆ ನಿರ್ಮಿಸಲು ನಿರ್ಧರಿಸಲಾಗಿದೆ. ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದರು ಕೇಂದ್ರ ಸರಕಾರ ರಾಜ್ಯದಲ್ಲಿ ರಸಗೊಬ್ಬರ ಕಾರ್ಖಾನೆ ಮಾಡುವುದಿದ್ದರೆ ನೆರವು ನೀಡುವುದಾಗಿ ಪತ್ರ ಪಡೆದಿದೆ ಆದಕ್ಕೆ ಸ್ಪಂದಿಸಿದ ರಾಜ್ಯ ಸರಕಾರ ಹಾವೇರಿಯಲ್ಲಿ ೧೦೦ಎಕರೆ ಜಾಗ ಇರಿಸಿದೆ ಸಹಕಾರ ಮಹಾಮಂಡಲ ಹಿಂದಿನ ಅಧ್ಯಕ್ಷರು ಮಾಡಲಿಲ್ಲ ಈಗ ನಮಗೆ ಅವಕಾಶ ದೊರೆತಿದೆ.  ಎಂದು ಸನ್ಮಾನ ಸ್ವೀಕರಿಸಿ ಮಾತಾನಾಡಿದ ರಾಜೇಂದ್ರ ಕುಮಾರ್ ಹೇಳಿದರು. ಬಾಷಣಗಳು ಮುಗಿದ ಬಳಿಕ ತಾಲೂಕು ಎಲ್ಲಾ ಸಹಕಾರ ಸಂಘಗಳ ಅಧ್ಯಕ್ಷ, ನಿರ್ದೆಶಕರು ಮತ್ತು ಕಾರ್ಯನಿರ್ವಹಣಾಧಿಕಾರಿಗಳು ವೇದಿಕೆಗೆ ಹೋಗಿ ರಾಜೇಂದ್ರ ಕುಮಾರ್‌ರಿಗೆ ಹಾರಾರ್ಪಣೆ ಗೈದರು. ನವೋದಯ ಸದಸ್ಯೆಯರಿಂದ ಪುರಭವನ ಕಿಕ್ಕಿರಿದು ತುಂಬಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.