Breaking News

ನೆವೆಂಬರ್ ೧೩: ಕೆ.ಪಿ.ಎಂ.ಇ ಕಾಯ್ದೆ ತಿದ್ದು ಪಡಿ ವಿರೋದಿಸಿ ಖಾಸಗಿ ವೈದ್ಯರಿಂದ ಬೆಳಗಾವಿ ಚಲೋ

Advt_Headding_Middle
Advt_Headding_Middle

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆ.ಪಿ.ಎಂ.ಇ) ಕಾಯ್ದಿಗೆ ರಾಜ್ಯ ಸರಕಾರವು ಕರಾಳ ತಿದ್ದುಪಡಿ ತರುವುದನ್ನು ವಿರೋಧಿಸಿ ಖಾಸಗಿ ವಲಯದ ವೈದ್ಯರು ಬೆಳಗಾವಿ ಚಲೋ ದಿನಾಂಕ ೧೮ರಂದು ಹಾಗೂ ೧೪ರಿಂದ ಸರಣಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುಲು ಬೆಳಗಾವಿಗೆ ತೆರಳಲಿದ್ದಾರೆ. ಆದುದರಿಂದ ಭಾರತೀಯ ವೈದ್ಯಕೀಯ ಸಂಘ ರಾಜ್ಯ ಶಾಖೆಯ ನಿರ್ಣಯದಂತೆ ಖಾಸಗಿ ವೈದ್ಯಕೀಯ ಕ್ಷೇತ್ರಕ್ಕೆ ಕರ್ನಾಟಕ ಎಲ್ಲಾ ಹೊರ ರೋಗಿಗಳ ವಿಭಾಗ ಮುಚ್ಚಿರುತ್ತದೆ.

ನೆವಂಬರ್ ೧೩ರಂದು ಪ್ರಾರಂಭವಾಗುವ ಅಧಿವೇಶನದಲ್ಲಿ ಸರಕಾರದಿಂದ ಸರಿಯಾದ ಸ್ಪಂದನ ದೊರಕದಿದ್ದರೆ ನವೆಂಬರ್ ೧೪ರಿಂದ ವೈದ್ಯರಿಂದ ಸರಣಿ ಉಪವಾಸ ಸತ್ಯಾಗ್ರಹ ಹಾಗೂ ಕಾಯ್ದೆ ಜಾರಿಗೊಳಿಸಿದರೆ ವೃತ್ತಿ ತ್ಯಜಿಸಲುನಿರ್ಧರಿಸಲಾಗಿದೆ. ಈ ಕರಾಳ ಮಸೂದೆಯನ್ನು ಖಂಡಿಸಿ ವೈದ್ಯರೆಲ್ಲರೂ ಭಯ ಮುಕ್ತರಾಗಿ, ನಿರಾಳತೆಯಿಂದ ಜನ ಮಾನಸಕ್ಕೆ ಉತ್ತಮ ಸೇವೆ ನೀಡಲು ಸಹಕರಿಸಬೇಕಾಗಿ ಸುಳ್ಯದ ಶಾಸಕರಾದ ಮಾನ್ಯ ಶ್ರೀ ಅಂಗಾರ ಇವರಿಗೆ ಸುಳ್ಯದ ಐಮ್‌ಎ ಶಾಖೆಯಿಂದ ಮನವಿಯನ್ನು ಸಲ್ಲಿಸಲಾಗಿದೆ.ರೋಗಿಗಳು ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೇವೆ ಪಡೆಯಬೇಕಾಗಿ ವಿನಂತಿಸಿದೆ. ಹಾಗೂ ವೈದ್ಯಕೀಯ ಕ್ಷೇತ್ರದಲ್ಲಾಗುವ ಎಲ್ಲಾ ಜನರ್ಥಗಳಿಗೆ ರಾಜ್ಯ ಸರಕಾರವೇ ಹೊಣೆಯಾಗಿದೆ ಎಂದು . ಸುಳ್ಯ ಐಎಮ್‌ಎ ಯ ಅಧ್ಯಕ್ಷರಾದ ಡಾ. ಸಾಯಿಗೀತಾ ಜ್ಷಾನೇಶ್ ಹಾಗೂ ಕಾರ್ಯದರ್ಶಿ ಡಾ. ಗೀತಾ ಗೊಪ್ಪ ತಿಳಿಸಿದ್ದಾರೆ.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.