ಕಲಾವಿದ, ನಿವೃತ್ತ ಶಿಕ್ಷಕ ಬೊಳುವಾರು ನಿವಾಸಿ ರಾಜಶೇಖರ್ ‘ಮಾಸ್ಟರ್’ ನಿಧನ

0

ಪುತ್ತೂರು: ಬೊಳುವಾರು ನಿವಾಸಿ ಕಲಾವಿದ, ನಿವೃತ್ತ ಶಿಕ್ಷ ರಾಜಶೇಖರ್ ಮಾಸ್ಟರ್ (58 ವ.) ಡಿ.6ರಂದು ಬೆಳಗಿನ ಜಾವ ನಿಧನರಾಗಿದ್ದಾರೆ.

ಕಳೆದ 28 ವರ್ಷಗಳಿಂದ ಅಧ್ಯಾಪಕರಾಗಿದ್ದ ಇವರು ಇತ್ತೀಚೆಗೆಯಷ್ಟೇ ಫಿಲೋಮಿನಾ ಹೈಸ್ಕೂಲ್‌ನಲ್ಲಿ ನಿವೃತ್ತಿ ಹೊಂದಿದ್ದರು. ತಮ್ಮ ವೃತ್ತಿ ಜೀವನದ ಜೊತೆ ಅವರು ಕಲಾ ಕ್ಷೇತ್ರದಲ್ಲಿ ಚಿರಪರಿಚಿರಾಗಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ತಾಯಿ ಕಮಲ, ಪತ್ನಿ ಚಿತ್ರಕಲಾ, ಮಕ್ಕಳಾದ ವಿಜೇತ್, ಭೂಮಿಕಾ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.