ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುಪೂಜೆ ಆರಂಭ

0

ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂರ್ವಪದ್ಧತಿಯಂತೆ ಕಾರ್ತಿಕ ಮಾಸದ ಆಚರಣೆಗಳು ಮುಗಿದು, ಧನುಸಂಕ್ರಮಣದಿಂದ ಆರಂಭವಾಗುವ ಧನುರ್ಮಾಸದಲ್ಲಿ ಸಂಕ್ರಮಣದ ಮರುದಿನದಿಂದ ಮುಂದಿನ ಉತ್ತರಾಯಣ ಪುಣ್ಯಕಾಲ ಮಕರಸಂಕ್ರಮಣದ ದಿನದ ವರೆಗೆ ‘ ಧನುಪೂಜೆ ” ನಡೆಯುತ್ತದೆ. ಈ ಭಾರಿ ಧನುರ್ಮಾಸ ಪೂಜೆ ಡಿ.16 ರಿಂದ ಆರಂಭಗೊಂಡಿದೆ. 2022 ಜ.14ರ ತನಕ ಧನುಪೂಜೆ ನಡೆಯಲಿದೆ.

ಪ್ರಾಥಃಕಾಲದ ಮತ್ತು ಧನುರ್ಮಾಸದ ಮೊದಲ ಪೂಜೆಗಾಗಿ ನಸುಕಿನ ಜಾವ ದೇವಸ್ಥಾನದಲ್ಲಿ ಭಕ್ತ ಸಾಗಾರ ಹರಿದು ಬಂದಿತ್ತು. ಬೆಳಿಗ್ಗೆ ಗಂಟೆ 5.30ಕ್ಕೆ ಧನುಪೂಜೆ ನಡೆಯಿತು. ಬಳಿಕ ನಿತ್ಯ ಬಲಿ ಉತ್ಸವ ನಡೆಯಿತು. ಬಳಿಕ ಭಕ್ತರಿಗೆ ದೇವಳದ ಹೊರಾಂಗಣದಲ್ಲಿ ಅವಲಕ್ಕಿ ಪ್ರಸಾದ ವಿತರಣೆ ನಡೆಯಿತು.

ರುದ್ರ ಪಠಣ:
ಪರಮೇಶ್ವರನನ್ನು ರುದ್ರಪಠಣದಿಂದ ಸಂಪ್ರೀತಿಗೊಳಿಸುವ ನಿಟ್ಟಿನಲ್ಲಿ ದೇವಳದ ಗೋಪುರದಲ್ಲಿ ಹಲವಾರು ಮಂದಿ ಭಕ್ತರು ವೇದ ಸಂವರ್ದನ ಪ್ರತಿಷ್ಠಾನದ ನೇತೃತ್ವದಲ್ಲಿ ವೇದ ಪಾರಾಯಣ ರುದ್ರ ಪಠಣ ಮಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಚಂದ್ರ ಕಾಮತ್, ಬಿ.ಐತ್ತಪ್ಪ ನಾಯ್ಕ್, ರಾಮ್‌ದಾಸ್ ಗೌಡ, ಬಿ.ಕೆ.ವೀಣಾ, ಡಾ. ಸುಧಾ ಎಸ್ ರಾವ್, ರವೀಂದ್ರನಾಥ ರೈ ಬಳ್ಳಮಜಲು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್, ವೇ ಮೂ ವಸಂತ ಕೆದಿಲಾಯ, ಮಾಜಿ ಆಡಳಿತ ಮೊಕ್ತೇಸರ ಎನ್.ಕೆ. ಜಗನ್ನಿವಾಸ ರಾವ್, ವೇದ ಸಂವರ್ಧನ ಪ್ರತಿಷ್ಟಾನದ ಅಧ್ಯಕ್ಷ ಎಂ.ಟಿ.ಜಯರಾಮ ಭಟ್, ಪ್ರತಿಷ್ಠಾನದ ಉಪಾಧ್ಯಕ್ಷ ಮಣಿಲಾ ಸಿ ಮಹಾದೇವ ಶಾಸ್ತ್ರೀ, ದೇವಳದ ಅರ್ಚಕ ಜಯರಾಮ್ ಜೋಯಿಷ, ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ನ್ಯಾಯವಾದಿ ಚಿದಾನಂದ ಬೈಲಾಡಿ, ಭಾಸ್ಕರ್ ಬಾರ್ಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here