ರೆಂಜಿಲಾಡಿ: ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ

0


ಕಡಬ : ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ೧೧ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಬುಧವಾರ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿತು.


ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈಧಿಕ ವಿಧಿ-ವಿಧಾನಗಳನ್ನು ಅರ್ಚಕರು ನೆರವೇರಿಸಿದರು. ಪೂರ್ವಾಹ್ನ ಕ್ಷೇತ್ರಕ್ಕೆ ತಂತ್ರಿಗಳ ಆಗಮನ, ದೇವತಾ ಪ್ರಾರ್ಥನೆ ನಡೆದು, ಬಳಿಕ ಮಹಾಗಣಪತಿ ಹೋಮ, ಕಲಶ ಪೂಜೆ, ದೈವಗಳಿಗೆ ಶುದ್ಧಿಕಲಶ ಹಾಗೂ ತಂಬಿಲ ಸೇವೆ ಮತ್ತು ನಾಗತಂಬಿಲ ಜರುಗಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ರಂಗಪೂಜೆ ನಡೆಯಿತು. ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್, ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಮೃತ್ಯುಂಜಯ ಬೀಡೆ ಕೆರೆತೋಟ, ಕಾರ‍್ಯದರ್ಶಿ ಉಮೇಶ್ ಶೆಟ್ಟಿ ಸಾಯಿರಾಮ್, ಜತೆಕಾರ‍್ಯದರ್ಶಿ ರವಿಪ್ರಸಾದ್ ಕರಿಂಬಿಲ, ಸದಸ್ಯರಾದ ನೇಮಣ್ಣ ಗೌಡ ಕಲ್ನಾರ್, ಉಮೇಶ್ ಅರ್ತಿತ್ತಡಿ, ಜಯಂತ್ ಬರೆಮೇಲು, ಸೋಮಶೇಖರ ನಡುಗುಡ್ಡೆ, ಯಶೋಧ ಸಂಕೇಶ, ಉತ್ಸವ ಸಮಿತಿ ಅಧ್ಯಕ್ಷ ದುಗ್ಗಣ್ಣ ಗೌಡ ಹೊಸಮನೆ, ಪದಾಧಿಕಾರಿಗಳಾದ ಪದ್ಮನಾಭ ಗೌಡ ಕೇಪುಂಜ, ಉಮೇಶ್ ಸಾಕೋಟೆಜಾಲು, ಪರಿಚಾರಕರಾದ ವಿಜಯ ಕುಮಾರ್ ಕೇಪುಂಜ, ಯಶೋಧರ ಗೌಡ ಮಾರಪ್ಪೆ, ಡೀಕಯ್ಯ ಗೌಡ ಪಾಲೆತ್ತಡಿ, ಸೀತಾರಾಮ ಗೌಡ ತಲೆಕ್ಕಿ, ತಿಮ್ಮಪ್ಪ ಗೌಡ ಸಾಕೋಟೆಜಾಲು, ಲಿಂಗಪ್ಪ ಗೌಡ ಬಾಂತಾಜೆ, ಧರ್ಣಪ್ಪ ಗೌಡ ಪಿಲತ್ತಡಿ, ಚೆನ್ನಪ್ಪ ಗೌಡ ಬರೆಮೇಲು, ಡೀಕಯ್ಯ ಗೌಡ ಪಾಡ್ಲ, ಪುರುಷೋತ್ತಮ ಗೌಡ ಸೇರಿದಂತೆ ಕ್ಷೇತ್ರದ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here