ಕಡಬದಲ್ಲಿ ಸ್ವಸ್ತಿಕ್ ಎಂಟರ್‌ಪ್ರೈಸಸ್‌ನಲ್ಲಿ ಸ್ಯಾನಿಟರಿ ವಿಭಾಗ ಶುಭಾರಂಭ

0
22

p>

ಕಡಬ: ಇಲ್ಲಿನ ಸೌರಭ ಟವರ‍್ಸ್‌ನಲ್ಲಿ ಕಳೆದ ೨೩ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸ್ವಸ್ತಿಕ್ ಎಂಟರ್‌ಪ್ರೈಸಸ್‌ನ ವಿಸ್ತೃತ ಮಳಿಗೆಯಲ್ಲಿ ಸ್ಯಾನಿಟರಿ ವಿಭಾಗ ಡಿ.೨೬ರಂದು ಶುಭಾರಂಭಗೊಂಡಿತು.


ನೂತನ ಮಳಿಗೆಯನ್ನು ಕಡಬದ ವೈದ್ಯರಾದ ಡಾ.ಸಿ.ಕೆ.ಶಾಸ್ತ್ರಿಯವರು ಉದ್ಘಾಟಿಸಿ ಶುಭ ಹಾರೈಸಿ, ಕಡಬದಲ್ಲಿ ಕಳೆದ ೨೩ ವರ್ಷಗಳಿಂದ ಪ್ರಾಮಾಣಿಕವಾಗಿ ಉದ್ಯಮ ನಡೆಸುತ್ತಿರುವ ಗಣೇಶ್ ಭಟ್‌ರವರ ಜನರ ವಿಶ್ವಾಸಗಳಿಸಿ ಇಂದು ಉದ್ಯಮವನ್ನು ಅಭಿವೃದ್ದಿಪಡಿಸಿದ್ದಾರೆ. ಕಡಬ ತಾಲೂಕು ಆಗಿರುವುದರಿಂದ ಉದ್ಯಮಗಳು ಹೆಚ್ಚು ಹೆಚ್ಚು ಪ್ರಾರಂಭವಾಗಬೇಕಿದೆ, ಈ ಸಂಸ್ಥೆಯು ಇನ್ನಷ್ಟು ಅವೃದ್ದಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಡಾ. ಬಾಲಸುಬ್ರಹ್ಮಣ್ಯ ದಂತಿಗಳು, ಕಟ್ಟಡ ಮಾಲಕರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ಗಣೇಶ್ ಭಟ್ ಅವರು ಮಾತನಾಡಿ ಮಳಿಗೆಯಲ್ಲಿ ಪ್ರಖ್ಯಾತ ಕಂಪೆನಿಗಳ ನೀರಾವರಿ ಸಲಕರಣೆಗಳು, ಪ್ಲಂಬಿಂಗ್ ಸಾಮಾಗ್ರಿಗಳು, ಸಿ.ಪಿ.ಫಿಟ್ಟಿಂಗ್ಸ್ ಮತ್ತು ಸ್ಯಾನಿಟರಿ ವೇರ್‌ಗಳು ಲಭ್ಯವಿದೆ ಎಂದು ಹೇಳಿದರು. ಶಿಕ್ಷಕ ಅಜಯ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದುರ್ಗಾ ಸರಿತಾ ಅವರು ವಂದಿಸಿದರು. ಶ್ರೀರಾಮ್ ಬಿಲ್ಡಿಂಗ್ ನ ಮಾಲಕ ಶಿವರಾಮ ಶೆಟ್ಟಿ, ಕೃಷ್ಣ ಪ್ರಸಾದ್ ಎಡಪತ್ಯ, ಯಶೋಧಾ ಜನರಲ್ ಸ್ಟೋರ್‌ನ ದಯಾನಂದ ಪ್ರಭು ಸೇರಿದಂತೆ ಹಲವಾರು ಪ್ರಮುಖರು ಆಗಮಿಸಿ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here