ಕಡಬ: ಎಸ್‌ಕೆಎಸ್‌ಎಸ್‌ಎಫ್ ನಿಂದ ಅಂಬ್ಯುಲೆನ್ಸ್ ಲೋಕಾರ್ಪಣೆ

0

ಕಡಬ: ಕಡಬ ವಲಯ ಎಸ್‌ಕೆಎಸ್‌ಎಸ್‌ಎಫ್ ಹಾಗೂ ಎಸ್‌ಕೆ ಎಸ್‌ಎಸ್‌ಎಫ್‌ನ ಗಲ್ಪ್ ಕಲ್ಚರಲ್ ಕಮಿಟಿ (ಜಿಸಿಸಿ) ವತಿಯಿಂದ ಸಾರ್ವಜನಿಕರ ಸೇವೆಗಾಗಿ ಅಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮವು ಕಡಬದ ಅನುಗ್ರಹ ಸಭಾಭವನದಲ್ಲಿ ನ.೨೧ರಂದು ಜರಗಿತು.


ಕಡಬ ರೇಂಜ್ ಜಂಇಯ್ಯತ್ತುಲ್ ಅಧ್ಯಕ್ಷ ಪಿ.ಎಂ.ಇಬ್ರಾಹಿಂ ದಾರಿಮಿ ಅವರು ಆಶೀರ್ವಚನದ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ರಾಜ್ಯಾದ್ಯಕ್ಷ ಅನೀಸ್ ಕೌಸರಿ ಅವರು ಮಾತನಾಡಿ ದಾನಿಗಳಿಂದ ಹಾಗೂ ಗಲ್ಪ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿರುವವರಿಂದ ದೇಣಿಗೆ ಸಂಗ್ರಹಿಸಿ ಸುಮಾರು ೭.೫ ಲಕ್ಷ ರೂ. ವೆಚ್ಚದಲ್ಲಿ ಅಂಬ್ಯುಲೆನ್ಸ್ ಖರೀದಿಸಿ ಕಾರುಣ್ಯ ಸೇವೆಯಲ್ಲಿ ಮಗದೊಂದು ಹೆಜ್ಜೆ ಎಂಬ ಧ್ಯೇಯದೊಂದಿಗೆ ಅದನ್ನು ಕಡಬ ಪರಿಸರದ ಜನರ ಸೇವೆಗಾಗಿ ಲೋಕಾರ್ಪಣೆಗೊಳಿಸಲಾಗುತ್ತಿದೆ ಎಂದರು. ಮಡಿಕೇರಿ ಜುಮಾ ಮಸೀದಿಯ ಧರ್ಮಗುರು, ಜಿಸಿಸಿ ಪ್ರತಿನಿಧಿ ಕೆ.ಎಂ.ಸಿದ್ದೀಕ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ತ್ರಿಮೂರ್ತಿ, ಜಿ.ಪಂ. ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ., ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿ, ಕಾಂಗ್ರೆಸ್ ಮುಂದಾಳುಗಳಾದ ಜಿ.ಕೃಷ್ಣಪ್ಪ, ಟಿ.ಎಂ.ಶಹೀದ್ ಸುಳ್ಯ ಅವರು ಮಾತನಾಡಿ ಶುಭ ಹಾರೈಸಿದರು. ಕಡಬ ಸಂತ ಜೋಕಿಮರ ಚರ್ಚ್‌ನ ಧರ್ಮಗುರು ವಂ| ಅರುಣ್ ವಿಲ್ಸನ್ ಲೋಬೋ, ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ., ಐತ್ತೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಸತೀಶ್ ಕೆ., ಕಡಬ ಸಿ.ಎ.ಬ್ಯಾಂಕ್ ನಿರ್ದೇಶಕ ಸತೀಶ್ ನಾಕ್ ಮೇಲಿನಮನೆ, ಕಡಬ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್‌ಕುಮಾರ್ ಕೆಡೆಂಜಿ, ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಕಾಂಗ್ರೆಸ್ ಮುಂದಾಳು ಎಚ್.ಕೆ.ಇಲ್ಯಾಸ್ ಹೊಸಮಠ, ಉದ್ಯಮಿ ಫ್ರಾನ್ಸಿಸ್, ಕಡಬ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎಸ್.ದಿನೇಶ್ ಆಚಾರ್ಯ, ಕಡಬ ಕದಂಬ ಆಟೋ ಚಾಲಕ ಮಾಲಕರ ಸಂಘದ ನಿಯೋಜಿತ ಅಧ್ಯಕ್ಷ ಜಗದೀಶ್ ರೈ, ಕಡಬ ಜೀಪು ಚಾಲಕರ ಮಾಲಕರ ಸಂಘದ ಅಧ್ಯಕ್ಷ ಅಶ್ರಫ್ ಮರ್ದಾಳ, ಕಡಬ ರಹ್ಮಾನಿಯ ಟೌನ್ ಜುಮಾ ಮಸೀದಿಯ ಅಧ್ಯಕ್ಷ ಕೆ.ಅಬ್ದುಲ್‌ಖಾದರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್‌ಹಮೀದ್, ಧರ್ಮಗುರುಗಳಾದ ಕೆಪಿಎಂ.ಶರೀಫ್ ಪೈಝಿ ಪನ್ಯ, ಅಬ್ದುಸ್ಸಲಾಂ ಅಮಾನಿ ಕಳಾರ, ಹಸನ್ ಮದನಿ ಪೊಸೊಳಿಗೆ, ಶೌಕತ್ತಲಿ ಮುಸ್ಲಿಯಾರ್ ಸುರುಳಿ, ಜಲೀಲ್ ಅರ್ಶದಿ ನೆಟ್ಟಣ, ಮುಂತಾದವರು ಉಪಸ್ಥಿತರಿದ್ದರು. ಅಂಬ್ಯುಲೆನ್ಸ್ ಸೇವೆ ಆರಂಭಿಸಲು ಶ್ರಮಿಸಿದ ಎಸ್‌ಕೆಎಸ್‌ಎಸ್‌ಎಫ್ ಕಡಬ ವಲಯಾಧ್ಯಕ್ಷ ಅಶ್ರಫ್ ಶೇಡಿಗುಂಡಿ, ಜಿಸಿಸಿ ಪ್ರತಿನಿಧಿ ಕೆ.ಎಂ.ಸಿದ್ದೀಕ್ ಧಾರಿಮಿ, ಪ್ರಮುಖರಾದ ಎಸ್.ಅಬ್ದುಲ್ ಖಾದರ್ ಸುಂಕದಕಟ್ಟೆ ಹಾಗೂ ಲತೀಫ್ ಪೈಝಿ ಸುಂಕದಕಟ್ಟೆ ಅವರನ್ನು ಗೌರವಿಸಲಾಯಿತು. ಎಸ್‌ಕೆಎಸ್‌ಎಸ್‌ಎಫ್ ಕಡಬ ವಲಯಾಧ್ಯಕ್ಷ ಅಶ್ರಫ್ ಶೇಡಿಗುಂಡಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಯಾಹ್ಯಾ ಮುಸ್ಲಿಯಾರ್ ವಂದಿಸಿದರು. ಅಬ್ದುಲ್‌ಖಾದರ್ ಶೇಡಿಗುಂಡಿ ನಿರೂಪಿಸಿದರು.