ವಿಧಾನಪರಿಷತ್ ಅಭ್ಯರ್ಥಿ ಮಂಜುನಾಥ ಭಂಡಾರಿ ಕಡಬಕ್ಕೆ ಭೇಟಿ: ಕಾರ‍್ಯಕರ್ತರು, ಗ್ರಾ.ಪಂ. ಸದಸ್ಯರೊಂದಿಗೆ ಸಭೆ

0

ಪಕ್ಷ ಸಂಘಟನೆಗೆ ಸುಳ್ಯ ವಿಧಾನಸಭಾ ಕ್ಷೇತ್ರವನ್ನು ದತ್ತು ಪಡೆದುಕೊಳ್ಳುತ್ತೇನೆ-ಮಂಜುನಾಥ ಭಂಡಾರಿ

ಕಡಬ: ನಾವು ಹಾಗೂ ನಮ್ಮ ಹಿರಿಯರು ತಳಮಟ್ಟದಿಂದ ಕಟ್ಟಿ ಬೆಳೆಸಿದ ಕಾಂಗ್ರೆಸ್ ಪಕ್ಷವನ್ನು ನಾವು ಉಳಿಸಿ ಬೆಳೆಸಬೇಕಾಗಿದೆ, ಈ ನಿಟ್ಟಿನಲ್ಲಿ ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನನ್ನು ಮೊದಲ ಪ್ರಾಶಸ್ತ್ಯ ಮತಗಳಿಂದ ಗೆಲ್ಲಿಸಬೇಕೆಂದು ಎಂದು ವಿಧಾನಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಹೇಳಿದರು.


ಅವರು ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಸಭಾಭವನದಲ್ಲಿ ನಡೆದ ಕಾರ‍್ಯಕರ್ತರು ಹಾಗೂ ಗ್ರಾ.ಪಂ.ಸದಸ್ಯರನ್ನು ಭೇಟಿ ಮಾಡಿ ಮಾತನಾಡಿ, ಇತ್ತಿಚ್ಚಿನ ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಅಂತರ ಹೆಚ್ಚಾಗುತ್ತಿದೆ, ಯುವ ಶಕ್ತಿಯನ್ನು ತನ್ನತ್ತ ಸೆಳೆಯುವ ಕೆಲಸವನ್ನು ಮಾಡಬೇಕಿದೆ, ಈ ಹಿನ್ನಲೆಯಲ್ಲಿ ಮುಂದೆ ಸುಳ್ಯ ವಿಧಾನಸಭಾ ಕ್ಷೇತ್ರವನ್ನು ಪಕ್ಷ ಸಂಘಟನೆ ಬಲಪಡಿಸಲು ದತ್ತು ಪಡೆದುಕೊಳ್ಳುತ್ತೇನೆ ನಮಗೆ ಅಧಿಕಾರದ ಆಸೆ ಇಲ್ಲ, ಅಧಿಕಾರ ಯಾರು ಬೇಕಾದರೆ ಪಡೆಯಲಿ ನಮ್ಮ ಪಕ್ಷ ಸಂಘಟನೆಯಾಗಬೇಕು, ಅದು ಬಲಗೊಳ್ಳಬೇಕು ಎಂದು ಹೇಳಿದರು.
ಕೆ.ಪಿ.ಸಿ.ಸಿ ಸದಸ್ಯ ಡಾ| ರಘು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿದರು. ಸಭೆಯಲ್ಲಿ , ಕೆ.ಪಿ.ಸಿ.ಸಿ. ಸಂಯೋಜಕ ನಂದಕುಮಾರ್, ಕಡಬ ಬ್ಲಾಕ್ ಉಸ್ತುವಾರಿ ಅಭಿಲಾಷ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್, ನವೀನ್ ಭಂಡಾರಿ, ಎ.ಸಿ.ಜಯರಾಜ್, ಸುಳ್ಯ ಬ್ಲಾಕ್ ಕೆ.ಪಿ.ಸಿ.ಸಿ ಸಂಯೋಜಕ ಕೃಷ್ಣಪ್ಪ, ಡಿ.ಸಿ.ಸಿ. ಉಪಾಧ್ಯಕ್ಷ ವಿಜಯ ಕುಮಾರ್ ರೈ, ಬಾಲಕೃಷ್ಣ ಬಳ್ಳೇರಿ, ಕೆ.ಪಿ.ತೋಮಸ್, ಸರ್ವೋತ್ತಮ ಗೌಡ, ಸೈಮನ್ ಸಿ.ಜೆ, ಗಣೇಶ್ ಕೈಕುರೆ, ಎಚ್.ಕೆ. ಇಲ್ಯಾಸ್, ಸತೀಶ್ ಕುಮಾರ್ ಕೆಡೆಂಜಿ, ದಿವಾಕರ ಗೌಡ ಶಿರಾಡಿ, ಅಶೋಕ್ ನೆಕ್ರಾಜೆ, ಉಷಾ ಅಂಚನ್, ರಾಯ್ ಅಬ್ರಹಾಂ, ಅಶ್ರಫ್ ಶೇಡಿಗುಂಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಡಬ ಜಿ.ಪಂ. ಮಾಜಿ ಸದಸ್ಯ ಪಿ.ಪಿ.ವರ್ಗೀಸ್ ವಂದಿಸಿದರು.

LEAVE A REPLY

Please enter your comment!
Please enter your name here