Breaking News

ಪತ್ರಕರ್ತರು ಪ್ರಭುದ್ಧತೆಯನ್ನು ಗಳಿಸಿ ಮುಗ್ಧತೆಯನ್ನು ಉಳಿಸಿಕೊಳ್ಳಬೇಕು. ದಿನೇಶ್ ಮಟ್ಟು

Advt_Headding_Middle
Advt_Headding_Middle


ಪತ್ರಕರ್ತರು ಸೂಕ್ಷ್ಮತೆಯನ್ನು ತಿಳಿದು ಪ್ರಭುದ್ಧತೆಯನ್ನು ಗಳಿಸಿಕೊಂಡು ತನ್ನಲ್ಲಿರುವ ಮುಗ್ದತೆಯನ್ನು ಉಳಿಸಿಕೊಂಡಾಗ ಸಮಾಜದಲ್ಲಿ ಆತ ಉತ್ತಮ ಮನುಷ್ಯನಾಗಿಯೂ ಗುರುತಿಸಿಕೊಳ್ಳಬಲ್ಲ ಎಂದು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದರು. ಸುಳ್ಯದಲ್ಲಿ ನಡೆದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ಪತ್ರಕರ್ತರಿಗೆ ವೃತ್ತಿ ಕಾರ್ಯಾಗಾರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಭಾಷಣಗಾರರಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿಶ್ವಾಸಾರ್ಹತೆ ಎನ್ನುವುದು ಮಾಧ್ಯಮಗಳ ಶೀಲ ಇದ್ದಂತೆ. ಅದನ್ನು ಉಳಿಸಿ ಬೆಳೆಸಬೇಕಾದದ್ದು ಪತ್ರಕರ್ತರ ಜವಾಬ್ಧಾರಿ. ಮಾಧ್ಯಮ ರಂಗದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಆದರೆ ಪತ್ರಕರ್ತನಲ್ಲಿ ಯಾವುದೇ ಬದಲಾವಣೆಯನ್ನು ಸಮಾಜ ಬಯಸುವುದಿಲ್ಲ. ದೇಹಕ್ಕೆ ಬಂದ ರೋಗ ಬೆರಳಿಗೆ ಬಂದ ಹಾಗೆ ಸಮಾಜಕ್ಕೆ ಬಂದ ರೋಗ ಪತ್ರಕರ್ತನಿಗೂ ಅಂಟಿಕೊಂಡಿದೆ. ಪತ್ರಕರ್ತ ವೃತ್ತಿ ಒಂದು ಉದ್ಯಮವಾಗಿ ಬದಲಾವಣೆಯಾಗಿದೆ. ಇದರಿಂದ ಉದ್ಧೇಶಗಳು ಬದಲಾಗಿದೆ. ಆದರೂ ಪತ್ರಕರ್ತನಿಂದ ಸಾಮಾಜಿಕ ಜವಾಬ್ಧಾರಿಯನ್ನು ಸಮಾಜ ನಿರೀಕ್ಷಿಸುತ್ತದೆ. ಇಂದಿನ ಮಾಧ್ಯಮ ಓದುಗರನ್ನು ನಿರೀಕ್ಷೆ ಮಾಡುವುದಿಲ್ಲ. ಗ್ರಾಮಹಕರನ್ನು ಆಕರ್ಷಿಸುತ್ತದೆ. ಈ ಎಲ್ಲಾ ಸವಾಲುಗಳನ್ನು ಒಬ್ಬ ಪತ್ರಕರ್ತ ಸದಾ ಎದುರಿಸಬೇಕಾಗುತ್ತದೆ ಎಂದು ಅಮೀನ್ ಮಟ್ಟು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.