ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ

Advt_Headding_Middle
Advt_Headding_Middle

ಐವರ್ನಾಡು ಗ್ರಾಮದ ಚೀಮುಳ್ಳು ದಿ.ರತ್ನಾಕರ ಪೂಜಾರಿ ಎಂಬವರ ಪುತ್ರ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.೧೬ರಂದು ನಡೆದಿದೆ. ಸುಳ್ಯ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿ.ಎ ವಿದ್ಯಾರ್ಥಿ ದೀಕ್ಷಿತ್ ಎಂಬಾತ ಮಧ್ಯಾಹ್ನ ಕಾಲೇಜಿನಿಂದ ಮನೆಗೆ ಬಂದು ಮನೆಯ ಸಮೀಪ ಓದಲು ಎಂದು ಹೋದವ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನು ಕಂಡ ಆತನ ತಾಯಿ ನೆರೆ ಮನೆಯವರಿಗೆ ವಿಷಯ ತಿಳಿಸಿ, ನಂತರ ಬೆಳ್ಳಾರೆ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಮೃತ ದೇಹವನ್ನು ಸರಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತರು ತಾಯಿ ಹಾಗೂ ಕುಟುಂಬಸ್ಥರನ್ನು ಆಗಲಿದ್ದಾರೆ.

ಡೆತ್ ನೋಟ್: 
ನೇಣು ಬಿಗಿದು ಕೊಂಡ ಮರದ ಬಳಿಯಲ್ಲಿ ಮೊಬೈಲ್ ಜೊತೆಗೆ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ನಾನು ಬಡವನಾಗಿದ್ದು, ಫೇಸ್‌ಬುಕ್‌ನಲ್ಲಿ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೆ. ಆದರೆ ಆಕೆಯನ್ನು ವಿವಾಹವಾಗಲು ಸಾಧ್ಯವಾಗದು ಎಂಬ ಕಾರಣಕ್ಕಾಗಿ ಸಾಯುವುದೇ ಸೂಕ್ತ ಎಂಬುವ ನಿರ್ಧಾರ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿzನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿತ್ತು.
ಬಡ ಕುಟುಂಬ:
ರತ್ನಾಕರ ಪೂಜಾರಿ-ಲಲಿತಾ ದಂಪತಿಗೆ ದೀಕ್ಷಿತ್ ಓರ್ವನೇ ಪುತ್ರ. ರತ್ನಾಕರರು ನಿಧನರಾಗಿದ್ದು ತಾಯಿ ಲಲಿತಾ, ಹಾಗೂ ದೊಡ್ಡಮ್ಮರೊಂದಿಗೆ ದೀಕ್ಷಿತ್ ಜೀವನ ನಡೆಸುತ್ತಿದ್ದ. ಇದೀಗ ದೀಕ್ಷಿತ್ ನಿಧನದಿಂದಾಗಿ ಲಲಿತಾರಿಗೆ ದಿಕ್ಕುತೋಚದಂತಾಗಿದೆ. ತಾಯಿ ಲಲಿತಾ ಕಷ್ಟಪಟ್ಟು ಬೀಡಿ ಕಟ್ಟಿ, ಅದರ ಆದಾಯದಿಂದಲೇ ಮನೆ ಹಾಗೂ ಮಗನ ಶಿಕ್ಷಣಕ್ಕೆ ಆಸರೆಯಾಗಿದ್ದರು.ಈತ ಕಾಲೇಜಿನಲ್ಲಿಯೂ ಎಲ್ಲಾ ಮಕ್ಕಳ ಜೊತೆ ಬೆರೆಯುತ್ತಿದ್ದು ಕಲಿಕೆಯಲ್ಲು ಉತ್ತಮ ಸಾಧನೆಯನ್ನು ಮಾಡಿದ್ದನು. ಆದರೆ ಮೈಸೂರು ಕಡೆಯ ಹುಡುಗಿಯೊಬ್ಬಳೊಂದಿಗೆ ಫೇಸ್‌ಬುಕ್ ಮೂಲಕ ಪ್ರೀತಿಗೆ ಬಿದ್ದು ಈಗ ಜೀವನವನ್ನೆ ಅಂತ್ಯಗೊಳಿಸಿಕೊಂಡಿದ್ದಾನೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.