ಕುಕ್ಕೆ ಸುಬ್ರಹ್ಮಣ್ಯ: ಹರಿದುಬಂದ ಹಸಿರು ಕಾಣಿಕೆ, ನ. ೨೩ ಪಂಚಮಿ, ೨೪ರಂದು ಷಷ್ಠಿ

Advt_Headding_Middle
Advt_Headding_Middle

ಕುಕ್ಕೆ ಸುಬ್ರಹ್ಮಣ್ಯದ ಚಂಪಾ ಷಷ್ಠಿ ಮಹೋತ್ಸವ ಸಂದರ್ಭದಲ್ಲಿ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳನ್ನೊಳಗೊಂಡಂತೆ ಊರು ಪರವೂರುಗಳಿಂದ ಹಸಿರು ಕಾಣಿಕೆ ಸಂಗ್ರಹಿಸುವಂತೆ ಇದೇ ಮೊದಲಬಾರಿಗೆ ಆಡಳಿತ ಮಂಡಳಿ ತೀರ್ಮಾಣಿಸಿ ಪ್ರಚಾರ ಪಡಿಸಿದರು. ಮೊದಲ ಭಾರಿಗೆ ನಿರೀಕ್ಷೆಗೂ ಮೀರಿದ ಸಂಗ್ರವಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು. ಹಸಿರು ಕಾಣಿಕೆ ಸಮರ್ಪಿಸಿದ ಭಕ್ತಾದಿಗಳಿಗೆ ದೇವರ ದರ್ಶನ ಮಾಡಿಸಿ,

ಪ್ರಸಾದ, ಶಾಲು ನೀಡಲಾಯಿತು. ಎಲ್ಲಾ ವಾಹನಗಳಿಗೆ ಫಲವಸ್ತುಗಳನ್ನು ಮುಂದೆ ಇರಿಸಿ ಪೂಜೆ ಸಲ್ಲಿಸಲಾಯಿತು. ಬ್ಯಾಂಡ್ ವಾಳಗದೊಂದಿಗೆ ವಜೃಂಭಣೆಯಿಂದ ಸ್ವೀಕರಿಸಲಾಯಿತು. ಸುಮಾರು ೫೩ ದೇವಸ್ಥಾನಗಳು ಸೇರಿದಂತೆ ಒಟ್ಟು ೮೫ ಕಡೆಗಳಿಂದ ಸುಮಾರು ೮,೮೦೦ ಕೆ.ಜಿ.ಯಷ್ಟು ಅಕ್ಕಿ ಸಂಗ್ರವಾಯಿತು. ಇದಲ್ಲದೆ ೪೭೦ ಬಾಳೆಗೊನೆ, ೨೦೦೦ ಸಿಯಾಳ, ೧೦೭೦ ಅಡಿಕೆ ಗೊನೆ, ಕುಬಳಕಾಯಿ ಸೇರಿದಂತೆ ೨೫೦೦ ಕೆ.ಜಿ. ತರಕಾರಿಗಳು ಹಸಿರುವಾಣಿಯಲ್ಲಿ ಸಂಗ್ರಹವಾಗಿದೆ. ಸಂಗ್ರಹಣೆಗಾಗಿ ಸರ್ಪ ಸಂಸ್ಕಾರ ಕೊಠಡಿಯನ್ನು ಉಪಯೋಗಿಸಲಾಯಿತು.ಪುರಾಣ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಮಹೋತ್ಸವವು ನ. ೨೪ರಂದು ವಿಜೃಂಭನೆಯಿಂದ ಜರಗಲಿದೆ. ನ. ೧೫ರಂದು ಕೊಪ್ಪರಿಗೆ ಏರುವ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ದೊರೆಯಿತು. ನ. ೧೬ರಂದು ಶೇಷವಾಹನಯುಕ್ತ ಬಂಡಿ ಉತ್ಸವ, ನ. ೧೭ರಂದು ಲಕ್ಷದೀಪೋತ್ಸವ, ನ. ೧೮ರಂದು ಶೇಷವಾಹನೋತ್ಸವ ಹಾಗೂ ನ. ೧೯ರಂದು ಅಶ್ವ ವಾಹನೋತ್ಸವ ನಡೆಯಿತು. ನ. ೨೦ರಂದು ಅಶ್ವವಾಹನೋತ್ಸವ, ೨೧ರಂದು ಮಯೂರ ವಾಹನೋತ್ಸವ ಮತ್ತು ನ. ೨೨ರಂದು ಹೂವಿನ ತೇರಿನ ಉತ್ಸವ ನಡೆಯಲಿದೆ. ನ. ೨೩ರಂದು ಪಂಚಮಿ ದಿನ ಬೆಳಿಗ್ಗೆಯಿಂದಲೇ ವಿವಿಧ ವೈದಿಕ ಕಾರ್ಯಕ್ರಮಗಳು ಆರಂಭಗೊಂಡು ರಾತ್ರಿ ಪಂಚಮಿ ರಥೋತ್ಸವ ನಡೆಯಲಿದೆ. ನ. ೨೪ರಂದು ವಿಜೃಂಭಣೆಯ ಷಷ್ಠಿ ಮಹೋತ್ಸವ ನಡೆಯಲಿದೆ. ನ. ೨೫ರಂದು ಅವಭೃತೋತ್ಸವ, ನೌಕಾವಿಹಾರ ಜರಗಲಿದೆ. ಡಿ ೧ರಂದು ಕೊಪ್ಪರಿಗೆ ಇಳಿಯುವ ಕಾರ್ಯಕ್ರಮ ನಡೆದು ರಾತ್ರಿ ನೀರಬಂಡಿ ಉತ್ಸವ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.