Breaking News

ಅನ್ಸಾರ್ ಬೆಳ್ಳಾರೆ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ನೇಮಕ

Advt_Headding_Middle
Advt_Headding_Middle

ವಿಶ್ವಕನ್ನಡಿಗ ವಾರ್ತಾ ತಾಣದ ಸಂಪಾದಕ ಅನ್ಸಾರ್ ಬೆಳ್ಳಾರೆಯವರು ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ನೇಮಕ ಗೊಂಡಿದ್ದಾರೆ. ಬೆಳ್ಳಾರೆಯ ಕೆ.ಎಂ ಅಂದುಂಞ ಮತ್ತು ಬಿಫಾತುಮ್ಮ ಇವರ ಪುತ್ರನಾದ ಅನ್ಸಾರ್ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬೆಳ್ಳಾರೆ ಸಮೀಪದ ದರ್ಖಾಸ್ತು ಹಾಗೂ ಸುಳ್ಯದ ಗಾಂಧಿನಗರದಲ್ಲಿ ವ್ಯಾಸಂಗ ಮುಗಿಸಿ ಪ್ರೌಢ ವಿದ್ಯಾಭ್ಯಾಸವನ್ನು ಪದವಿ ಪೂರ್ವ ಮಹಾವಿದ್ಯಾಲಯ ಬೆಳ್ಳಾರೆಯಲ್ಲಿ ಮಾಡಿ, ತದ ನಂತರ ಎಳೆಯ ವಯಸ್ಸಿನಲ್ಲಿಯೇ ಉದ್ಯೋಗ ರಂಗಕ್ಕೆ ಕಾಲಿರಿಸಿ ಬೆಳ್ಳಾರೆಯ ಹೃದಯ ಭಾಗದಲ್ಲಿ ಅಲ್ಫಾ ಡ್ರೆಸ್ ಲ್ಯಾಂಡ್ ನಾಮದಲ್ಲಿ ಸಿದ್ದ ಉಡುಪುಗಳ ಮಳಿಗೆ ತೆರೆದಿದ್ದರು.
ಸೌದಿ ಅರೇಬಿಯಾದ ಪ್ರಮುಖ ಪಟ್ಟಣವಾದ ಅಲ್ ಖೋಬರ ಎಂಬಲ್ಲಿ ಅಮೇರಿಕಾ ಮೂಲದ ಅಡ್ವಾನ್ಸ್ ಅಮೇರಿಕನ್ ಆಟೋ ಎಂಬ ಇನ್ಸೂರೆನ್ಸ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಉದ್ಯೋಗದ ಜೊತೆ ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣದಲ್ಲಿ ವರದಿಗಾರನಾಗಿ ಸೇವೆ ಸಲ್ಲಿಸಿದ್ದರು. ತನ್ನ ವರದಿಯ ಪಾರದರ್ಶಕತೆಯನ್ನು ಕಂಡು ಸಂಪಾದಕೀಯ ಮಂಡಳಿ ಉಪ ಸಂಪಾದಕರಾಗಿ ನೇಮಿಸಿದರು. ಪ್ರಸ್ತುತ ಇವರು ಅನಿವಾಸಿ ಕನ್ನಡಿಗರ ಕೊಂಡಿಯಾದ ವಿಶ್ವ ಕನ್ನಡಿಗ ನ್ಯೂಸ್ ಎಂಬ ವಾರ್ತಾತಾಣದ ಸಂಪಾದಕ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಅರಬ್ ದೇಶದಲ್ಲಿರುವ ಕನ್ನಡ ಸಂಘದ ಸದಸ್ಯರೂ ಆಗಿದ್ದ ಇವರು ಅಲ್ಲಿನ ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದಿದ್ದಾರೆ. ವಿದೇಶದಲ್ಲೆ ಇದ್ದು ತನ್ನ ತಾಯ್ನಾಡಿನಲ್ಲಿರುವ ಬಡ ಜೀವಿಗಳಿಗೆ ಆಸರೆಯಾಗುತ್ತಿದ್ದ ಇವರು ಬೆಳ್ಳಾರೆಯ ಆಸುಪಾಸಿನ ಬಡ ಅರ್ಹ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯನ್ನು ಉದಾರ ಧಾನಿಗಳ ಸಹಾಯದಿಂದ ದೊರಕಿಸಿ ಕೊಡುವಲ್ಲಿ ಸಫಲರಾಗಿದ್ದಾರೆ. ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣದ ಮೂಲಕ ತೆರೆಮರೆಯ ಹಿಂದೆ ಇರುವ ಕಲಾವಿದರಿಗೆ ವೇದಿಕೆಯನ್ನು ನಿರ್ಮಿಸಿ. ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಪತ್ರಿಕಾ ರಂಗಕ್ಕೆ ಕಾಲಿಡುವಂತೆ ಮಾಡಿದ್ದಾರೆ. ತಮ್ಮ ವಾರ್ತಾ ತಾಣದಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಯುವ ವರದಿಗಾರರು ಇಂದು ದ್ರಶ್ಯ ಮಾದ್ಯಮದಲ್ಲೂ, ಮುದ್ರಣ ಮಾದ್ಯಮದಲ್ಲೂ ಕಾರ್ಯ ನಿರ್ವಹಿಸಲು ಇವರೂ ಕಾರಣ ಕರ್ತರು ಎನ್ನುವುದರಲ್ಲಿ ತಪ್ಪಿಲ್ಲ. ಕವನ, ಕವಿತೆ, ವ್ಯಕ್ತಿ ಪರಿಚಯ ಅಲ್ಲದೆ ಇನ್ನಿತರ ಲೇಖನಗಳನ್ನು ನಾಡಿನ ಜನತೆಗೆ ಅರ್ಪಿಸುತ್ತಿದ್ದ ಇವರಿಗೆ ಅರಬ್ ದೇಶದ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ವಿದೇಶದ ನೆಲದಲ್ಲೂ ಕನ್ನಡದ ಬಾವುಟ ರಾರಾಜಿಸಬೇಕು ಎಂಬ ನೆಲೆಯಿಂದ ಕನ್ನಡ ರಾಜ್ಯೋತ್ಸವದ ದಿನ ಸುಳ್ಯ ತಾಲೂಕಿನ ಯುವಕರನ್ನು ಒಗ್ಗೂಡಿಸಿ ನಾನು ಕನ್ನಡಿಗ ಎಂಬ ಅಭಿಯಾನವನ್ನು ಮಾಡಿ ಕನ್ನಡ ಡಿಂಡಿಮ ಬಾರಿಸಿದ್ದಾರೆ. ಹಲವಾರು ಕವನ, ಲೇಖನಗಳನ್ನು ಬರೆದ ಇವರನ್ನು ಬ್ಯಾರಿ ಸಮುದಾಯದ ಯುವ ಬರಹಗಾರ ಎಂದು ಗುರುತಿಸಿ ಕಳೆದ ವರುಷ ಕರ್ನಾಟಕ ಬ್ಯಾರಿ ಅಕಾಡೆಮಿಯು ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸನ್ಮಾನಿಸಿತ್ತು. ಸಮಾಜ ಮುಖಿ ಕಾರ್ಯಗಳಿಗೆ ಪ್ರೋತ್ಸಾಹದಾಯಕವಾಗಿ ಆರ್.ಬಿ.ಪ್ರೆಂಡ್ಸ್ ಪೈಚಾರ್ , ಜೈ ಭಾರತ್ ಆರ್ಟ್ ಆಂಡ್ ಸ್ಪೊರ್ಟ್ಸ್ಸ್ ಬೆಳ್ಳಾರೆ, ನ್ಯೂ ಫ್ಲಾಶ್ ಆರ್ಟ್ ಏಂಡ್ ಸ್ಪೋರ್ಟ್ಸ್ ಅಲ್ಲದೆ ಅನೇಕ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿದ್ದಾರೆ. ಕಳೆದ ವರುಷ ಸುಳ್ಯದಲ್ಲಿ ನಡೆದ ಬ್ಯಾರಿ ಸಾಹಿತ್ಯ ಅಕಾಡೆಮಿ ಆಯೋಜಿಸಿದ ವಿಜ್ರಂಭಣೆಯ ಕಾರ್ಯಕ್ರಮದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಪ್ರಸ್ತುತ ಇವರು ಎಂ ಫ್ರೆಂಡ್ಸ್ ಮಂಗಳೂರು ಇದರ ಟ್ರಸ್ಟಿಯಾಗಿ, ನ್ಯೂ ಫ್ಲಾಶ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಬೆಳ್ಳಾರೆ ಇದರ ಸದಸ್ಯರಾಗಿ, ಜೈ ಭಾರತ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಇದರ ಸಲಹೆಗಾರನಾಗಿಯೂ, ವಿಶ್ವ ಕನ್ನಡಿಗ ವಾರ್ತಾ ತಾಣದ ಸಂಪಾದಕರಾಗಿಯೂ, ವಿ ಹೆಲ್ಪ್ ಸಂಸ್ಥೆಯ ಸ್ಥಾಪಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.